ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಮ್ಯೂಚುವಲ್ ಫಂಡ್ ಉದ್ಯಮದ ನೆರವಿಗೆ ಧಾವಿಸಿರುವುದರಿಂದ ದೇಶದ ಷೇರುಪೇಟೆಗಳಲ್ಲಿ ಸೋಮವಾರ ಸಕಾರಾತ್ಮಕ ವಹಿವಾಟು ನಡೆಯಿತು.

ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 416 ಅಂಶ ಚೇತರಿಕೆ ಕಂಡು 31,743 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 128 ಅಂಶ ಹೆಚ್ಚಾಗಿ 9,282 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ವಹಿವಾಟಿನ ಅಂತ್ಯದ ವೇಳಗೆ ನಡೆದ ಲಾಭ ಗಳಿಕೆ ಉದ್ದೇಶದ ವಹಿವಾಟಿನಿಂದಾಗಿ ಸೂಚ್ಯಂಕಗಳು ದಿನದ ಗರಿಷ್ಠ ಮಟ್ಟದಿಂದ ಕೆಳಗಿಳಿಯುವಂತಾಯಿತು.

ವಲಯವಾರು ಬ್ಯಾಂಕ್, ಹಣಕಾಸು, ರಿಯಲ್ ಎಸ್ಟೇಟ್, ಆರೋಗ್ಯ ಸೇವೆ ಮತ್ತು ಐ.ಟಿ ಸೂಚ್ಯಂಕಗಳು ಶೇ 3.54ರವರೆಗೂ ಏರಿಕೆ ಕಂಡಿವೆ.

ಗರಿಷ್ಠ ಗಳಿಕೆ: ಇಂಡಸ್ ಇಂಡ್ ಬ್ಯಾಂಕ್ ಷೇರು ಗರಿಷ್ಠ ಶೇ 6ಕ್ಕೂ ಹೆಚ್ಚಿನ ಗಳಿಕೆ ಕಂಡುಕೊಂಡಿತು. ಆ್ಯಕ್ಸಿಸ್ ಬ್ಯಾಂಕ್, ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಬಜಾಜ್ ಫೈನಾನ್ಸ್ ಷೇರುಗಳು ಶೇ 5ರಷ್ಟು ಏರಿಕೆ ಕಂಡಿವೆ.

ಜಾಗತಿಕ ಮಟ್ಟದಲ್ಲಿ ಕೇಂದ್ರೀಯ ಬ್ಯಾಂಕ್‌ಗಳಿಂದ ಆರ್ಥಿಕ ಉತ್ತೇಜನ ಕೊಡುಗೆ ಘೋಷಣೆಯಾಗುವ ನಿರೀಕ್ಷೆಯು ಏಷ್ಯಾದಲ್ಲಿ ಸಕಾರಾತ್ಮಕ ವಹಿವಾಟಿಗೆ ಕಾರಣವಾಯಿತು. ಇದು ದೇಶಿ ಷೇರುಪೇಟೆಗಳಲ್ಲಿಯೂ ಪ್ರತಿಫಲಿಸಿತು.

* 21 ಪೈಸೆ (₹76.25):ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಆಗಿರುವ ಏರಿಕೆ

* 1.44%:ಬಿಎಸ್‌ಇ ಸಣ್ಣ, ಮಧ್ಯಮ ಶ್ರೇಣಿ ಸೂಚ್ಯಂಕಗಳ ಏರಿಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.