ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆನ್ಸೆಕ್ಸ್‌ 941 ಅಂಶ ಏರಿಕೆ: ₹2.48 ಲಕ್ಷ ಕೋಟಿ ಹೂಡಿಕೆದಾರರ ಸಂಪತ್ತು ವೃದ್ಧಿ

ಷೇರುಪೇಟೆಯಲ್ಲಿ ಗೂಳಿ ಓಟ
Published 29 ಏಪ್ರಿಲ್ 2024, 16:02 IST
Last Updated 29 ಏಪ್ರಿಲ್ 2024, 16:02 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ: ಬ್ಯಾಂಕಿಂಗ್‌, ಮೂಲಸೌಕರ್ಯ ಷೇರುಗಳ ಖರೀದಿಯಿಂದ ಷೇರು ಸೂಚ್ಯಂಕಗಳು ಸೋಮವಾರ ಭಾರಿ ಏರಿಕೆ ಕಂಡಿವೆ. ಇದರಿಂದ ಹೂಡಿಕೆದಾರರ ಸಂಪತ್ತಿಗೆ ಒಂದೇ ದಿನ ₹2.48 ಲಕ್ಷ ಕೋಟಿ ಸೇರ್ಪಡೆಯಾಗಿದ್ದು, ಬಿಎಸ್‌ಇ ಕಂಪನಿಗಳ ಒಟ್ಟು ಮೌಲ್ಯವು ₹406 ಲಕ್ಷ ಕೋಟಿ ದಾಟಿದೆ.

ಮುಂಬೈ ಷೇರುಪೇಟೆ ಸೂಚ್ಯಂಕ (ಬಿಎಸ್‌ಇ) ಸೆನ್ಸೆಕ್ಸ್‌ 941 ಅಂಶ (ಶೇ 1.28) ಏರಿಕೆಯಾಗಿ 74,671ಕ್ಕೆ ಸ್ಥಿರಗೊಂಡಿತು. ದಿನದ ವಹಿವಾಟಿನ ವೇಳೆ ಈ ಸೂಚ್ಯಂಕ 74,721ಕ್ಕೆ ಮುಟ್ಟಿತ್ತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 223 ಅಂಶ (ಶೇ 1) ಹೆಚ್ಚಳವಾಗಿ 22,643ಕ್ಕೆ ಕೊನೆಗೊಂಡಿತು. 

ಐಸಿಐಸಿಐ ಬ್ಯಾಂಕ್‌, ಅಲ್ಟ್ರಾಟೆಕ್ ಸಿಮೆಂಟ್‌, ಇಂಡಸ್‌ಇಂಡ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಎಕ್ಸಿಸ್‌ ಬ್ಯಾಂಕ್‌, ಕೋಟಕ್‌ ಮಹೀಂದ್ರ ಬ್ಯಾಂಕ್‌, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌, ಬಜಾಜ್‌ ಫೈನಾನ್ಸ್‌ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನ ಷೇರಿನ ಮೌಲ್ಯ ಗಳಿಕೆ ಏರಿಕೆಯಾಗಿದೆ. 

ಎಚ್‌ಸಿಎಲ್‌ ಟೆಕ್ನಾಲಜೀಸ್‌, ಐಟಿಸಿ, ವಿಪ್ರೊ ಮತ್ತು ಬಜಾಜ್‌ ಫಿನ್‌ಸರ್ವ್‌ ಷೇರಿನ ಮೌಲ್ಯ ಇಳಿಕೆಯಾಗಿದೆ. ಬಿಎಸ್‌ಇ ಮಿಡ್‌ಕ್ಯಾಪ್‌ ಸೂಚ್ಯಂಕ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕ ಏರಿಕೆಯಾಗಿವೆ.

ಏಷ್ಯನ್‌ ಮಾರುಕಟ್ಟೆಯಲ್ಲಿ ಸೋಲ್‌, ಶಾಂಘೈ ಮತ್ತು ಹಾಂಗ್‌ಕಾಂಗ್ ಸಕಾರಾತ್ಮಕ ವಹಿವಾಟಿನಲ್ಲಿ ಕೊನೆಗೊಂಡವು. ಜಾಗತಿಕ ಬ್ರೆಂಟ್‌ ಕಚ್ಚಾ ತೈಲವು ಶೇ 0.51ರಷ್ಟು ಇಳಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 89.04 ಡಾಲರ್‌ಗೆ (₹7,431) ಮುಟ್ಟಿದೆ.

ನಾಲ್ಕನೇ ತ್ರೈಮಾಸಿಕದಲ್ಲಿ ಕಂಪನಿಗಳ ಉತ್ತಮ ಗಳಿಕೆ, ಮಧ್ಯಪ್ರಾಚ್ಯ ಬಿಕ್ಕಟ್ಟು ಕಡಿಮೆ ಆಗಿರುವುದು, ಸ್ಥಿರ ಗಳಿಕೆಯು ಮಾರುಕಟ್ಟೆಯ ಏರಿಕೆಗೆ ಕಾರಣವಾದವು ಎಂದು ಜಿಯೋಜಿತ್‌ ಫೈನಾನ್ಶಿಯಲ್ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ಐಸಿಐಸಿಐ ಬ್ಯಾಂಕ್‌: ಎಂ–ಕ್ಯಾಪ್‌ಗೆ ₹36555 ಕೋಟಿ ಸೇರ್ಪಡೆ ಐಸಿಐಸಿಐ ಬ್ಯಾಂಕ್‌ನ ಷೇರಿನ ಮೌಲ್ಯ ಸೋಮವಾರ ಶೇ 5ರಷ್ಟು ಏರಿಕೆಯಾಗಿದೆ. ಇದರಿಂದ ಬ್ಯಾಂಕ್‌ನ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್‌) ಒಂದೇ ದಿನ ₹36555 ಕೋಟಿ ಸೇರ್ಪಡೆಯಾಗಿದ್ದು ಒಟ್ಟು ಎಂ–ಕ್ಯಾಪ್‌ ₹8.14 ಲಕ್ಷ ಕೋಟಿಗೆ ಮುಟ್ಟಿದೆ. ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಷೇರಿನ ಬೆಲೆ ಕ್ರಮವಾಗಿ ₹1158 ಮತ್ತು ₹1156ಕ್ಕೆ ಸ್ಥಿರಗೊಂಡಿತು. 2023–24ರ ಮಾರ್ಚ್‌ ತ್ರೈಮಾಸಿಕದಲ್ಲಿ ಬ್ಯಾಂಕ್‌ ₹11675 ಕೋಟಿ ನಿವ್ವಳ ಲಾಭ ಗಳಿಸಿದೆ. ಇದರಿಂದ ಬ್ಯಾಂಕ್‌ನ ಎಂ–ಕ್ಯಾಪ್‌ ಏರಿಕೆಯಾಗಿದೆ.

ಎಚ್‌ಸಿಎಲ್‌ ಟೆಕ್‌ ಷೇರು ಶೇ 6ರಷ್ಟು ಇಳಿಕೆ

ಎಚ್‌ಸಿಎಲ್‌ ಟೆಕ್ನಾಲಜೀಸ್‌ ಕಂಪನಿಯು 2023–24ರ ಮಾರ್ಚ್‌ ತ್ರೈಮಾಸಿಕದ ನಿವ್ವಳ ಲಾಭವು ನೀರಿಕ್ಷಿಸಿದಷ್ಟು ಪ್ರಗತಿ ಕಾಣದಿದ್ದರಿಂದ ಕಂಪನಿಯ ಷೇರಿನ ಮೌಲ್ಯ ಸೋಮವಾರ ಶೇ 6ರಷ್ಟು ಇಳಿಕೆಯಾಗಿದೆ.  ಬಿಎಸ್‌ಇ ಮತ್ತು ಎನ್‌ಎಸ್‌ಇಯಲ್ಲಿ ಪ್ರತಿ ಷೇರಿನ ಬೆಲೆ ಕ್ರಮವಾಗಿ ₹1387 ಮತ್ತು ₹1388ಕ್ಕೆ ಇಳಿದಿದೆ. ಷೇರಿನ ಬೆಲೆ ಇಳಿಕೆಯಿಂದ ಕಂಪನಿಯ ಮಾರುಕಟ್ಟೆ ಮೌಲ್ಯ ₹23120 ಕೋಟಿ ಕರಗಿದ್ದು ಒಟ್ಟು ಎಂ–ಕ್ಯಾಪ್‌ ₹3.76 ಲಕ್ಷ ಕೋಟಿಗೆ ಕುಸಿದಿದೆ. ಕಂಪನಿಯು ಮಾರ್ಚ್‌ ತ್ರೈಮಾಸಿಕದಲ್ಲಿ ₹3986 ಕೋಟಿ ನಿವ್ವಳ ಲಾಭ ಗಳಿಸಿತ್ತು. ಹಿಂದಿನ ವರ್ಷದ ಇದೇ ಅವಧಿಯಲ್ಲಿ ₹3983 ಕೋಟಿ ಲಾಭ ಗಳಿಸಿತ್ತು.

ಗಳಿಕೆ ಕಂಡ ಕಂಪನಿಗಳು (ಶೇಕಡಾವಾರು): ಐಸಿಐಸಿಐ ಬ್ಯಾಂಕ್‌; 4.67 ಎಸ್‌ಬಿಐ; 3.09 ಅಲ್ಟ್ರಾಟೆಕ್‌ ಸಿಮೆಂಟ್‌; 2.93 ಇಂಡಸ್‌ಇಂಡ್‌ ಬ್ಯಾಂಕ್‌; 2.90 ಎಕ್ಸಿಸ್‌ ಬ್ಯಾಂಕ್‌; 2.47 ಇಳಿಕೆ ಕಂಡ ಕಂಪನಿಗಳು (ಶೇಕಡಾವಾರು) ಎಚ್‌ಸಿಎಲ್‌ ಟೆಕ್‌; 5.79 ಐಟಿಸಿ; 0.44 ವಿಪ್ರೊ; 0.37 ಬಜಾಜ್‌ ಫಿನ್‌ಸರ್ವ್‌; 0.01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT