ಮುಂಬೈ: ಮೂರನೇ ಹಂತದ ದಿಗ್ಬಂಧನ ಜಾರಿಗೆ ಬಂದ ದಿನವು ಮುಂಬೈ ಷೇರುಪೇಟೆ ಪಾಲಿಗೆ ಕರಾಳ ದಿನವಾಗಿ ಪರಿಣಮಿಸಿತು.

‘ಕೋವಿಡ್–19’ ವಿಶ್ವದಾದ್ಯಂತ ಹಬ್ಬಲು ಚೀನಾದ ಕೊಡುಗೆ ಇರುವುದರಿಂದ ಅಮೆರಿಕವು ಆ ದೇಶದ ಸರಕುಗಳಿಗೆ ಗರಿಷ್ಠ ಮಟ್ಟದಲ್ಲಿ ಸುಂಕ ವಿಧಿಸಲು ಮುಂದಾಗಿದೆ. ಇದರಿಂದ ಎರಡೂ ದೇಶಗಳ ನಡುವಣ ವಾಣಿಜ್ಯ ಸಮರ ಮತ್ತೆ ಮುನ್ನೆಲೆಗೆ ಬಂದಿದೆ.

ಇದು ವಿಶ್ವದಾದ್ಯಂತ ಹೂಡಿಕೆದಾರರ ಖರೀದಿ ಉತ್ಸಾಹವನ್ನು ಕುಗ್ಗಿಸಿದೆ. ಏಷ್ಯಾದ ಪ್ರಮುಖ ಷೇರುಪೇಟೆಗಳಲ್ಲಿಯೂ ಇದು ಪ್ರತಿಫಲಿಸಿತು. ಸಂವೇದಿ ಸೂಚ್ಯಂಕ 2,002.27 ಅಂಶಗಳನ್ನು ಕಳೆದುಕೊಂಡು 31,715.35 ಅಂಶಗಳಲ್ಲಿ ದಿನದ ವಹಿವಾಟು ಕೊನೆಗೊಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.