ಬೆಂಗಳೂರು: ಗುರುವಾರ ಷೇರುಪೇಟೆ ವಹಿವಾಟಿನಲ್ಲಿರುವ 24 ಕಂಪನಿಗಳು ನಾಲ್ಕನೇ ತ್ರೈಮಾಸಿಕ ಲಾಭಾಂಶ ವರದಿ ಪ್ರಕಟಿಸುತ್ತಿರುವುದು, ಮೇ ಸರಣಿಯ ಫ್ಯೂಚರ್ಸ್ ಮತ್ತು ಆಪ್ಷನ್ಸ್ ಕಾಂಟ್ರ್ಯಾಕ್ಟ್ ಕೊನೆಯಾಗುತ್ತಿರುವುದು ಷೇರುಪೇಟೆಗಳಲ್ಲಿ ಲವಲವಿಕೆ ತುಂಬಿದೆ. ಹೀಗಾಗಿ, ಸೆನ್ಸೆಕ್ಸ್ 508 ಅಂಶ ಹೆಚ್ಚಳವಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 32,114 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 149 ಅಂಶ ಹೆಚ್ಚಳವಾಗಿ 9,464 ಅಂಶ ಮುಟ್ಟಿದೆ.

ಎಚ್‌ಡಿಎಫ್‌ಸಿ, ಎಲ್ ಆ್ಯಂಡ್ ಟಿ ಹಾಗೂ ಒಎನ್‌ಜಿಸಿ ಕಂಪನಿಗಳ ಷೇರುಗಳು ಶೇ 2 ರಿಂದ 4ರಷ್ಟು ಗಳಿಕೆ ದಾಖಲಿಸಿವೆ. ಖಾಸಗಿ ಬ್ಯಾಂಕ್ ವಲಯದ ಷೇರುಗಳು ಲಾಭ ಗಳಿಸಿವೆ.

ಇಸ್ಯಾಬ್ ಇಂಡಿಯಾ ಷೇರುದಾರರಿಗೆ ಪ್ರತಿ ಷೇರಿಗೆ ₹70 ಮಧ್ಯಂತರ ಲಾಭಾಂಶ ಪ್ರಕಟಿಸಿರುವ ಬೆನ್ನಲ್ಲೇ ಕಂಪನಿಯ ಷೇರು ಬೆಲೆ ಶೇ 10ರಷ್ಟು ಏರಿಕೆಯಾಗಿದೆ. ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಸಿದ್ಧಪಡಿಸುವ ಐಷರ್ ಕಂಪನಿ ತನ್ನ ಷೇರು ವಿಭಜಿಸುವ ಯೋಜನೆ ಘೋಷಿಸುವುದರಿಂದ, ಪ್ರತಿ ಷೇರು ಬೆಲೆ ಶೇ 6.23ರಷ್ಟು ಚೇತರಿಕೆಯಾಗಿ ₹15,898.65 ಆಗಿದೆ. ರಿಟೇಲ್ ಹೂಡಿಕೆದಾರರಿಗೂ ಷೇರು ಖರೀದಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಕಂಪನಿ ಷೇರು ವಿಭಜನೆಗೆ ನಿರ್ಧರಿಸಿದೆ.

ನಿನ್ನೆ ನಷ್ಟ ಅನುಭವಿಸಿದ್ದ ಸನ್ ಫಾರ್ಮಾ ಷೇರು ಶೇ 1.6ರಷ್ಟು ಏರಿಕೆ ದಾಖಲಿಸಿದೆ. ನಿಫ್ಟಿ ಬ್ಯಾಂಕ್ ಶೇ 3ರಷ್ಟು ಹೆಚ್ಚಳ ಕಂಡಿದ್ದು, ಇಂಡಸ್‌ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 4ರಿಂದ ಶೇ 8ರಷ್ಟು ಗಳಿಕೆ ಕಂಡಿದೆ.

ಇದರೊಂದಿಗೆ ಮಾರುತಿ, ಟಾಟಾ ಮೋಟಾರ್ಸ್, ಮದರ್‌ಸನ್ ಸುಮಿ, ಟಿವಿಎಸ್, ಹೀರೊ, ಬಜಾಜ್ ಆಟೊ ಸೇರಿದಂತೆ ಬಹುತೇಕ ಆಟೊ ವಲಯದ ಷೇರುಗಳು ಸಹ ಗಳಿಕೆಯಲ್ಲಿ ಪಾಲು ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.