ಮುಂಬೈ: ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶೇ 25ರಷ್ಟು ಸುಂಕ ಮತ್ತು ರಷ್ಯಾ ಜೊತೆ ತೈಲ ಖರೀದಿ ಹಿನ್ನೆಲೆ ಅನಿರ್ದಿಷ್ಟ ದಂಡ ಘೋಷಿಸಿದ ಬೆನ್ನಲ್ಲೇ ಭಾರತದ ಷೇರು ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತ ದಾಖಲಿಸಿವೆ.

30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 786.36 ಅಂಶಗಳಷ್ಟು ಕುಸಿದು 80,695.50ರಲ್ಲಿ ವಹಿವಾಟು ಆರಂಭಿಸಿದರೆ, 50 ಷೇರುಗಳ ಎನ್ಎಸ್ಇ ನಿಫ್ಟಿ 212.8 ಅಂಶಗಳಷ್ಟು ಕುಸಿತ ಕಂಡು 24,642.25 ರಲ್ಲಿ ವಹಿವಾಟು ಆರಂಭಿಸಿತು.

ವ್ಯಾಪಾರ ಒಪ್ಪಂದ ಕುರಿತ ಮಾತುಕತೆಗೆ ಆಗಸ್ಟ್ 25ರ ಬಳಿಕ ಅಮೆರಿಕದ ತಂಡವು ಭಾರತಕ್ಕೆ ಭೇಟಿ ನೀಡಲಿದೆ ಎಂದು ಭಾರತದ ಅಧಿಕಾರಿಗಳು ಘೋಷಿಸಿದ ಬೆನ್ನಲ್ಲೇ ಟ್ರಂಪ್ ದಿಢೀರ್ ಸುಂಕ ಘೋಷಣೆ ಮಾಡಿದ್ದಾರೆ.

ಭಾರತ ತನ್ನೆಲ್ಲ ಭೇಡಿಕೆಗಳಿಗೆ ಒಪ್ಪಿಕೊಳ್ಳುವಂತೆ ಮಾಡಲು ಒತ್ತಡ ಹೇರುವ ಉದ್ದೇಶದಿಂದ ಟ್ರಂಪ್ ಈ ತಂತ್ರ ಬಳಸಿದ್ದಾರೆ ಎಂದು ವರದಿ ಹೇಳಿದೆ. ಜಪಾನ್, ಬ್ರಿಟನ್ ಮತ್ತು ಯೂರೋಪಿಯನ್ ಒಕ್ಕೂಟದ ವಿರುದ್ಧವೂ ಟ್ರಂಪ್ ಇದೇ ತಂತ್ರ ಬಳಸಿದ್ದರು.

ಭಾರತದ ಮೇಲೆ ಶೇ 25ರಷ್ಟು ಸುಂಕ ಮತ್ತು ರಷ್ಯಾದಿಂದ ಇಂಧನ ರಕ್ಷಣಾ ಸಂಬಂಧಿತ ಖರೀದಿಗಳಿಗೆ ಅನಿರ್ದಿಷ್ಟ ದಂಡ ವಿಧಿಸುವುದು ಭಾರತೀಯ ರಫ್ತಿಗೆ ಮತ್ತು ಆ ಮೂಲಕ ಅಲ್ಪಾವಧಿಯಲ್ಲಿ ಭಾರತೀಯ ಆರ್ಥಿಕತೆಯ ಬೆಳವಣಿಗೆಯ ನಿರೀಕ್ಷೆಗಳಿಗೆ ಬಹಳ ಕೆಟ್ಟ ಸುದ್ದಿಯಾಗಿದೆ. ಭಾರತದೊಂದಿಗಿನ ವ್ಯಾಪಾರ ಮಾತುಕತೆಗಳು ಮುಂದುವರೆದಿರುವುದರಿಂದ, ಬಹುಶಃ ಶೇ 25 ರಷ್ಟು ಸುಂಕವು ಅಂತಿಮವಾಗಿ ಕಡಿಮೆಯಾಗಬಹುದು ಎಂದು ವರದಿ ತಿಳಿಸಿದೆ.

ಇದು ಭಾರತೀಯ ರಫ್ತು ಮತ್ತು ಜಿಡಿಪಿ ಬೆಳವಣಿಗೆಗೆ ಅಲ್ಪಾವಧಿಯ ಹೊಡೆತವಾಗಿದೆ. ಈ ಅಲ್ಪಾವಧಿಯ ಹೊಡೆತವು ಅಲ್ಪಾವಧಿಯಲ್ಲಿ ಷೇರು ಮಾರುಕಟ್ಟೆಯಲ್ಲಿಯೂ ಪ್ರತಿಫಲಿಸುತ್ತದೆ ಎಂದು ಜಿಯೋಜಿತ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಹೇಳಿದ್ದಾರೆ.

ಸೆನ್ಸೆಕ್ಸ್ ಸಂಸ್ಥೆಗಳ ಪೈಕಿ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್, ಮಹೀಂದ್ರ ಅಂಡ್ ಮಹೀಂದ್ರ, ಭಾರ್ತಿ ಏರ್ಟೆಲ್, ಟೈಟಾನ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚು ನಷ್ಟ ಕಂಡಿವೆ.

ಎಟರ್ನಲ್, ಹಿಂದೂಸ್ಥಾನ್ ಯುನಿಲಿವರ್, ಐಟಿಸಿ ಮತ್ತು ಪವರ್ ಗ್ರಿಡ್ ಲಾಭ ಕಂಡಿವೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ₹860 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ,
.ಭಾರತದ ವಿರುದ್ಧ ಟ್ರಂಪ್ ದಿಢೀರ್ ಸುಂಕ ಘೋಷಿಸಿದ್ದೇಕೆ?:US ಅಧಿಕಾರಿ ಹೇಳಿದ್ದಿಷ್ಟು.ಭವಿಷ್ಯದಲ್ಲಿ ಪಾಕ್ನವರು ಭಾರತಕ್ಕೆ ತೈಲ ಮಾರಾಟ ಮಾಡಬಹುದು: ಡೊನಾಲ್ಡ್ ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.