ಕ್ವಾಂಟ್ ಫಂಡ್ ಹಾಗೂ ಮಲ್ಟಿ–ಕ್ಯಾಫ್ ಫಂಡ್ ಆರಂಭಿಸುವ ಮೂಲಕ ಯುಟಿಐ ಎಎಂಸಿ ಕಂಪನಿಯು ತನ್ನಲ್ಲಿ ಲಭ್ಯವಿರುವ ಹಣಕಾಸು ಉತ್ಪನ್ನಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಈ ಫಂಡ್‌ಗಳಲ್ಲದೆ ಇತರ ಫಂಡ್‌ಗಳ ಆಯ್ಕೆಯನ್ನೂ ಕಂಪನಿಯು ಹೂಡಿಕೆದಾರರಿಗೆ ನೀಡುತ್ತಿದೆ. ಕಂಪನಿಯ ತ್ರೈಮಾಸಿಕ ಸರಾಸರಿ ಆಸ್ತಿ ನಿರ್ವಹಣಾ ಪ್ರಮಾಣವು ಶೇ 17ರಷ್ಟು ಬೆಳವಣಿಗೆ ಸಾಧಿಸಿದೆ. ಎಸ್‌ಐಪಿ ಹೆಚ್ಚಳ ಹಾಗೂ ಪ್ಯಾಸಿವ್ ಹೂಡಿಕೆಗಳ ಏರಿಕೆಯು ಇದಕ್ಕೆ ಒಂದು ಕಾರಣ ಎಂದು ಬ್ರೋಕರೇಜ್ ಸಂಸ್ಥೆ ವಿವರಿಸಿದೆ.