ಮುಂಬೈ: ನಿರಂತರ ಸಾರ್ವಕಾಲಿಕ ದಾಖಲೆಯೊಂದಿಗೆ ದಿನದ ವಹಿವಾಟು ಮುಕ್ತಾಯವಾಗುತ್ತಿದ್ದ ಷೇರುಪೇಟೆಯಲ್ಲಿ ಶುಕ್ರವಾರ ದಿಢೀರ್ ಕುಸಿತ ಕಂಡು ಬಂದಿದೆ. ಇನ್ಫೊಸಿಸ್, ಎಚ್‌ಡಿಎಫ್‌ಸಿ ಹಾಗೂ ಐಸಿಐಸಿಐ ಬ್ಯಾಂಕ್ ಷೇರುಗಳು ನಷ್ಟಕ್ಕೆ ಒಳಗಾಗಿವೆ.

ಹೂಡಿಕೆದಾರರು ಲಾಭ ಪಡೆಯಲು ಮುಂದಾಗಿದ್ದರಿಂದ ಷೇರುಗಳ ಮಾರಾಟಕ್ಕೆ ಮುಂದಾಗಿದ್ದು, ಷೇರುಪೇಟೆಯಲ್ಲಿ ಏರಿಳಿತ ಸೃಷ್ಟಿಸಿತು. ದಿನದ ವಹಿವಾಟು ಅಂತ್ಯಕ್ಕೆ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 549 ಅಂಶ ಇಳಿಕೆಯಾಗಿ 49,034.67 ಅಂಶ ತಲುಪಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 161.90 ಅಂಶ ಕಡಿಮೆಯಾಗಿ 14,433.70 ಅಂಶಗಳಲ್ಲಿ ವಹಿವಾಟು ಮುಗಿಸಿತು.

ಸೆನ್ಸೆಕ್ಸ್ ಕಂಪನಿಗಳ ಪೈಕಿ ಟೆಕ್ ಮಹೀಂದ್ರಾ ಅತಿ ಹೆಚ್ಚು ಶೇ 4ರಷ್ಟು ಕುಸಿದರೆ, ಎಚ್‌ಸಿಎಲ್ ಟೆಕ್, ಒಎನ್‌ಜಿಸಿ, ಏಷಿಯನ್ ಪೇಂಟ್ಸ್, ಅಲ್ಟ್ರಾಟೆಕ್ ಸೀಮೆಂಟ್ ಹಾಗೂ ಎಚ್‌ಡಿಎಫ್‌ಸಿ ಷೇರುಗಳು ಸಹ ಇಳಿಮುಖವಾದವು.

ಆದರೆ, ಭಾರ್ತಿ ಏರ್‌ಟೆಲ್, ಐಟಿಸಿ, ಬಜಾಜ್ ಆಟೊ ಹಾಗೂ ಬಜಾಜ್ ಫೈನಾನ್ಸ್ ಷೇರುಗಳು ಗಳಿಕೆ ದಾಖಲಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.