ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೊಮ್ಯಾಟೊ ಐಪಿಒ: ರಿಟೇಲ್‌ ಹೂಡಿಕೆದಾರರಿಂದ ದುಪ್ಪಟ್ಟು ಬೇಡಿಕೆ

Last Updated 14 ಜುಲೈ 2021, 10:29 IST
ಅಕ್ಷರ ಗಾತ್ರ

ನವದೆಹಲಿ: ಆಹಾರವನ್ನು ಮನೆಬಾಗಿಲಿಗೆ ತಲುಪಿಸುವ ಸೇವೆ ನೀಡುವ ಜೊಮ್ಯಾಟೊ ಕಂಪನಿಯ ಐಪಿಒ ಇವತ್ತಿನಿಂದ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಒಟ್ಟು ಷೇರು ವಿತರಣೆಯ ಶೇ.36ಕ್ಕಿಂತ ಹೆಚ್ಚು ಷೇರುಗಳಿಗೆ ಬಿಡ್‌ ಸಲ್ಲಿಕೆಯಾಗಿದೆ.

ಷೇರುಪೇಟೆಯ ಮಾಹಿತಿ ಪ್ರಕಾರ, 71.92 ಕೋಟಿ ಐಪಿಒ ಷೇರುಗಳ ಪೈಕಿ 26.10 ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಕೆಯಾಗಿದೆ. ರಿಟೇಲ್‌ ಹೂಡಿಕೆದಾರರಿಗೆ ನಿಗದಿಯಾಗಿರುವ ಪ್ರಮಾಣಕ್ಕಿಂತ 1.91 ಪಟ್ಟು ಹೆಚ್ಚುವರಿ ಬೇಡಿಕೆ ಸಲ್ಲಿಕೆಯಾಗಿದೆ. 12.95 ಕೋಟಿ ಷೇರುಗಳನ್ನು ರಿಟೇಲ್‌ ಹೂಡಿಕೆದಾರರಿಗೆ ನಿಗದಿ ಪಡಿಸಲಾಗಿದ್ದು, ಮಧ್ಯಾಹ್ನ 1:30ರ ವೇಳೆಗೆ 24.76 ಕೋಟಿ ಷೇರುಗಳಿಗೆ ಬಿಡ್‌ ಸಲ್ಲಿಸಲಾಗಿದೆ.

ಸಾಂಸ್ಥಿಕೇತರ ಹೂಡಿಕೆದಾರರು ಶೇ. 7ರಷ್ಟು, ಸಿಬ್ಬಂದಿಗೆ ನಿಗದಿಯಾಗಿರುವ ಷೇರುಗಳಲ್ಲಿ ಶೇ. 6 ಹಾಗೂ ಸಾಂಸ್ಥಿಕ ಹೂಡಿಕೆದಾರರು ನಿಗದಿತ 38.88 ಕೋಟಿ ಷೇರುಗಳ ಪೈಕಿ ಕೇವಲ 2.69 ಲಕ್ಷ ಈಕ್ವಿಟಿ ಷೇರುಗಳಿಗೆ ಮಾತ್ರ ಬಿಡ್‌ ಸಲ್ಲಿಸಿದ್ದಾರೆ.

ಸಾರ್ವಜನಿಕರಿಗೆ ಖರೀದಿಗೆ ಮುಕ್ತಗೊಳಿಸುವ (ಐಪಿಒ) ಪ್ರಕ್ರಿಯೆಯಲ್ಲಿ ಜೊಮ್ಯಾಟೊದ ಪ್ರತಿ ಷೇರು ಬೆಲೆಯು ₹ 72ರಿಂದ ₹76ರವರೆಗೂ ನಿಗದಿಯಾಗಿದೆ.

ಜುಲೈ 13ರಂದು ಪ್ರಮುಖ ಹೂಡಿಕೆದಾರರಿಂದ ಜೊಮ್ಯಾಟೊ ₹ 4,196.51 ಕೋಟಿ ಸಂಗ್ರಹಿಸಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಆಹಾರ ಡೆಲಿವರಿ ಮಾಡುವ ಕಂಪನಿಯೊಂದು ಐಪಿಒಗೆ ತೆರೆದುಕೊಂಡಿದೆ.

ಐಪಿಒ ಪ್ರಕ್ರಿಯೆ ಮೂಲಕ ಜೊಮ್ಯಾಟೊ ಕಂಪನಿಯ ಮೌಲ್ಯ ₹ 64,365 ಕೋಟಿಗೆ ಏರಿಕೆಯಾಗಲಿದೆ.

2021ರ ಮಾರ್ಚ್‌ ವರೆಗಿನ ಮಾಹಿತಿ ಪ್ರಕಾರ, ಜೊಮ್ಯಾಟೊ ಭಾರತದ 525 ನಗರಗಳಲ್ಲಿ ಹಾಗೂ ಭಾರತದ ಹೊರಗೆ 23 ದೇಶಗಳಲ್ಲಿ ಕಾರ್ಯಾಚರಿಸುತ್ತಿದೆ. 3,89,932 ರೆಸ್ಟೊರೆಂಟ್‌ಗಳೊಂದಿಗೆ ಸಂಪರ್ಕ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT