ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಐಸಿ ಐಪಿಒ ಆರಂಭ: ಷೇರುಪೇಟೆಯಲ್ಲಿ ಕರಡಿ ಕುಣಿತ!

ಅಕ್ಷರ ಗಾತ್ರ

ಬೆಂಗಳೂರು: ಇಂದಿನಿಂದ ಸಣ್ಣ ಹೂಡಿಕೆದಾರರಿಂದ ಎಲ್‌ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆಗೆ (ಐಪಿಒ) ಬಿಡ್ ಸಲ್ಲಿಕೆ ಆರಂಭವಾಗಿದ್ದು, ಅದರ ಬೆನ್ನಲ್ಲೇ ದೇಶದ ಷೇರುಪೇಟೆಗಳಲ್ಲಿ ಸೂಚ್ಯಂಕಗಳು ಇಳಿಮುಖವಾಗಿವೆ.

ಹಣಕಾಸು, ಲೋಹ ಹಾಗೂ ಫಾರ್ಮಾ ವಲಯದ ಷೇರುಗಳು ಶೇಕಡ 2ರವರೆಗೂ ಕುಸಿದಿವೆ.

ಆರಂಭಿಕ ವಹಿವಾಟಿನಲ್ಲಿ 200 ಅಂಶಗಳಷ್ಟು ಗಳಿಕೆ ದಾಖಲಿಸಿದ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್‌ ನಂತರದಲ್ಲಿ ದಿಢೀರ್‌ ಕುಸಿತವಾಯಿತು. ಬೆಳಿಗ್ಗೆ 11:30ರವರೆಗೂ ಸೆನ್ಸೆಕ್ಸ್‌ 365.43 ಕಡಿಮೆಯಾಗಿ 56,610.56 ಅಂಶಗಳಲ್ಲಿ ವಹಿವಾಟು ನಡೆದಿದೆ. ನಿಫ್ಟಿ 105.60 ಅಂಶ ಇಳಿಕೆಯಾಗಿ 16,963.50 ಅಂಶ ತಲುಪಿದೆ. ಮಂಗಳವಾರ ರಜೆಯ ಕಾರಣ ಷೇರುಪೇಟೆಗಳಲ್ಲಿ ವಹಿವಾಟು ನಡೆದಿರಲಿಲ್ಲ.

ಅಮೆರಿಕದ ಕೇಂದ್ರ ಬ್ಯಾಂಕ್‌ ಬಡ್ಡಿ ದರದಲ್ಲಿ ಏರಿಕೆ ಮಾಡುವ ನಿರೀಕ್ಷೆಯು ದೇಶದ ಷೇರುಪೇಟೆಗಳ ವಹಿವಾಟಿನ ಪರಿಣಾಮ ಬೀರಿರುವುದಾಗಿ ವಿಶ್ಲೇಷಿಸಲಾಗಿದೆ.

ಕೊಟಾಕ್‌ ಮಹೀಂದ್ರಾ ಬ್ಯಾಂಕ್‌ ಮತ್ತು ಟಾಟಾ ಕನ್ಸ್ಯೂಮರ್‌ ಪ್ರಾಡಕ್ಸ್‌ ಕಂಪನಿಗಳ ತ್ರೈಮಾಸಿಕ ಗಳಿಕೆ ವರದಿ ಪ್ರಕಟವಾಗುವ ಹಿನ್ನೆಲೆಯಲ್ಲಿ ಆ ಕಂಪನಿಗಳ ಷೇರು ಬೆಲೆ ಅಲ್ಪ ಏರಿಕೆ ಕಂಡಿವೆ. ಪವರ್‌ಗ್ರಿಡ್‌, ಎನ್‌ಟಿಪಿಸಿ, ಇನ್ಫೊಸಿಸ್‌ ಹಾಗೂ ವಿಪ್ರೊ ಷೇರುಗಳು ಗಳಿಕೆ ದಾಖಲಿಸಿವೆ.

ಟೈಟಾನ್‌ ಕಂಪನಿಯ ತ್ರೈಮಾಸಿಕ ಲಾಭಾಂಶದಲ್ಲಿ ಶೇಕಡ 7.2ರಷ್ಟು ಕಡಿಮೆಯಾಗಿರುವುದರಿಂದ ಅದರ ಷೇರು ಬೆಲೆ ಶೇಕಡ 3ರಷ್ಟು ಕಡಿಮೆಯಾಗಿದೆ. ಸನ್‌ ಫಾರ್ಮಾ, ರಿಲಯನ್ಸ್‌ ಇಂಡಸ್ಟ್ರೀಸ್, ಟಿಸಿಎಸ್‌ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ ಷೇರುಗಳ ಬೆಲೆ ಕಡಿಮೆಯಾಗಿದೆ.

ಸೋಮವಾರದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹1,853.46 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿದ್ದರು.

ಇಂದಿನಿಂದ ಎಲ್‌ಐಸಿ ಐಪಿಒ

ಎಲ್‌ಐಸಿ ಷೇರುಗಳಿಗೆ ಸಣ್ಣ ಹೂಡಿಕೆದಾರರು ಇಂದಿನಿಂದ ಐಪಿಒಗೆ ಬಿಡ್ ಸಲ್ಲಿಸಬಹುದಾಗಿದೆ.

ಷೇರು ದರದಲ್ಲಿ ಸಣ್ಣ ಹೂಡಿಕೆದಾರರಿಗೆ ಮತ್ತು ಎಲ್‌ಐಸಿ ನೌಕರರಿಗೆ ಪ್ರತಿ ಷೇರಿಗೆ ₹45ರಷ್ಟು ಹಾಗೂ ಎಲ್‌ಐಸಿ ಪಾಲಿಸಿ ಹೊಂದಿರುವವರಿಗೆ ಪ್ರತಿ ಷೇರಿಗೆ ₹60ರಷ್ಟು ರಿಯಾಯಿತಿ ಇರಲಿದೆ. ಷೇರು ಬೆಲೆಯನ್ನು ₹902–949ಕ್ಕೆ ನಿಗದಿ ಮಾಡಲಾಗಿದೆ.

ಕನಿಷ್ಠ 15 ಷೇರುಗಳಿಗೆ ಬಿಡ್ ಸಲ್ಲಿಸಬೇಕಾಗುತ್ತದೆ. ಮೇ 9ರವರೆಗೆ ಬಿಡ್ ಸಲ್ಲಿಸಲು ಅವಕಾಶ ಇರಲಿದೆ. ಮೇ 12ರಂದು ಷೇರುಗಳ ಹಂಚಿಕೆ ಆಗುವ ಸಾಧ್ಯತೆ ಇದೆ. ಮೇ 17ರಂದು ಎಲ್‌ಐಸಿ ಷೇರುಗಳು ಮಾರುಕಟ್ಟೆಯನ್ನು ಪ್ರವೇಶಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT