ಬುಧವಾರ, ಏಪ್ರಿಲ್ 21, 2021
24 °C

ಷೇರುಪೇಟೆ ಕುಸಿತ ಅನಿಯಂತ್ರಿತ: ಒಂದು ಗಂಟೆಯಲ್ಲೇ ₹8 ಲಕ್ಷ ಕೋಟಿ ಸಂಪತ್ತು ಮಾಯ 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕರಗಿದ ಹೂಡಿಕೆದಾರರ ಸಂಪತ್ತು

ನವದೆಹಲಿ: ಗುರುವಾರ ಹೂಡಿಕೆದಾರರ ಪಾಲಿಗೆ ಕರಾಳ ದಿನವಾಯಿತು. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸೋಂಕು ಸಾಂಕ್ರಾಮಿಕ ಕಾಯಿಲೆ ಎಂದು ಘೋಷಿಸಿದ ಬೆನ್ನಲ್ಲೇ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಸೃಷ್ಟಿಯಾಗಿ ಮಹಾ ಕುಸಿತವಾಯಿತು. ವಹಿವಾಟು ಆರಂಭದಲ್ಲೇ ₹8 ಲಕ್ಷ ಕೋಟಿ ಸಂಪತ್ತು ಕರಗಿ ಹೋಯಿತು. 

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,864 ಅಂಶ (ಶೇ 5.22) ಇಳಿಕೆಯಾಗಿ 33,833.38 ಅಂಶ ತಲುಪುತ್ತಿದ್ದಂತೆ, ಹೂಡಿಕೆದಾರರ ₹8 ಲಕ್ಷ ಕೋಟಿ ಸಂಪತ್ತು ಕೊಚ್ಚಿ ಹೋಯಿತು. ಬೆಳಿಗ್ಗೆ 10:30ಕ್ಕೆ ಮುಂಬೈ ಷೇರುಪೇಟೆಯಲ್ಲಿ ಒಟ್ಟು ಮಾರುಕಟ್ಟೆ ಮೌಲ್ಯ ₹1,28,56,869.10 ಕೋಟಿ ಇತ್ತು. ಹೂಡಿಕೆದಾರರ ₹8,56,689.62 ಸಂಪತ್ತು ಒಮ್ಮೆಗೆ ಕರಗಿತು. 

ಬುಧವಾರ ವಹಿವಾಟು ಅಂತ್ಯಕ್ಕೆ ಮುಂಬೈ ಷೇರುಪೇಟೆಯ ಕಂಪನಿಗಳ ಮಾರುಕಟ್ಟೆ ಮೌಲ್ಯ ₹1,37,13,558.72 ಕೋಟಿಗೆ ತಲುಪಿತ್ತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹3,515.38 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. 

ಇದನ್ನೂ ಓದಿ: 

ಮಧ್ಯಾಹ್ನ 12:50ಕ್ಕೆ ಸೆನ್ಸೆಕ್ಸ್‌ 2204.68 ಅಂಶ (ಶೇ 6.18) ಕುಸಿತ ಕಂಡು 33,492.72 ಅಂಶ ಮುಟ್ಟಿತು. ಹೂಡಿಕೆದಾರರ ಮತ್ತಷ್ಟು ಸಂಪತ್ತು ನಷ್ಟವಾಗಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 662.50 ಅಂಶ (ಶೇ 6.33) ಇಳಿಕೆಯೊಂದಿಗೆ 9,795.90 ಅಂಶ ತಲುಪಿದೆ. ಇದು 2 ವರ್ಷಗಳಲ್ಲೇ ಕನಿಷ್ಠ ಮಟ್ಟವಾಗಿದೆ. 

ಮಾರಾಟ ಒತ್ತಡ ಸೃಷ್ಟಿಗೆ ಕಾರಣಗಳು

* ಕೋವಿಡ್‌–19 ಜಾಗತಿಕ ಸಾಂಕ್ರಾಮಿಕ ರೋಗ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿ, ಅಗತ್ಯ ಕ್ರಮಕೈಗೊಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿತು.

* ಯುರೋಪ್‌ನಿಂದ ಅಮೆರಿಕ ಪ್ರವೇಶಕ್ಕೆ 30 ದಿನಗಳ ವರೆಗೂ ನಿರ್ಬಂಧ ಹೇರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಣೆ

* ಕಚ್ಚಾ ತೈಲ ದರ ಶೇ 5ರಷ್ಟು ಏರಿಕೆ 

ಇದನ್ನೂ ಓದಿ: 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು