ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನ್ನೋಟ: ಗೂಳಿ ಓಟಕ್ಕೆ ಇನ್ನಷ್ಟು ಉತ್ತೇಜನ?

ಷೇರುಪೇಟೆ ನಿಟ್ಟುಸಿರು ಬಿಡುವ ನಿರೀಕ್ಷೆ
Last Updated 7 ಜೂನ್ 2020, 21:12 IST
ಅಕ್ಷರ ಗಾತ್ರ

ಮುಂಬೈ/ನವದೆಹಲಿ: ದೇಶದ ಷೇರುಪೇಟೆಗಳು ಕಳೆದ ವಾರ ಉತ್ತಮ ಗಳಿಕೆ ಕಂಡಿದ್ದು, ಈ ವಾರವೂ ಸಕಾರಾತ್ಮಕ ವಹಿವಾಟು ಮುಂದುವರೆಯುವುದೆಂದು ನಿರೀಕ್ಷಿಸಲಾಗಿದೆ.

ಹಿಂದಿನ ವಾರ, ಮುಂಬೈ ಷೇರುಪೇಟೆ (ಬಿಎಸ್‌ಇ) ಸಂವೇದಿ ಸೂಚ್ಯಂಕ 1,863 ಅಂಶಗಳ ಗಳಿಕೆಯೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.ರಾಷ್ಟ್ರೀಯ ಷೇರುಪೇಟೆ (ಎನ್‌ಎಸ್‌ಇ) ಸೂಚ್ಯಂಕ ನಿಫ್ಟಿ 562 ಅಂಶ ಹೆಚ್ಚಾಗಿದೆ. ಈ ಬೆಳವಣಿಗೆಯು ಈ ವಾರದ ಗೂಳಿ ಓಟಕ್ಕೆ ಇನ್ನಷ್ಟು ಉತ್ತೇಜನ ನೀಡಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

ವಿದೇಶಿ ಬಂಡವಾಳ ಒಳಹರಿವು, ಜಾಗತಿಕ ಷೇರುಪೇಟೆಗಳಲ್ಲಿನ ಸಕಾರಾತ್ಮಕ ವಹಿವಾಟು ಸದ್ಯದ ಮಟ್ಟಿಗೆ ದೇಶಿ ಷೇರುಪೇಟೆಗಳ ಗಳಿಕೆಗೆ ಕಾರಣವಾಗಿವೆ.

ಮೂರು ವಾರಗಳಿಂದ ಮಾರಾಟಕ್ಕೆ ಗಮನ ನೀಡಿದ್ದ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಜೂನ್‌ ತಿಂಗಳ ಮೊದಲ ವಾರದಲ್ಲಿ ಹೂಡಿಕೆಗೆ ಆದ್ಯತೆ ನೀಡಿದ್ದಾರೆ. ಈ ತಿಂಗಳ ಮೊದಲ ಐದು ವಹಿವಾಟುಗಳಲ್ಲಿ ₹ 20,814 ಕೋಟಿ ಹೂಡಿಕೆ ಮಾಡಿದ್ದಾರೆ.

ಸದ್ಯದ ಮಟ್ಟಿಗೆ, ದೇಶದಲ್ಲಿ ಷೇರುಪೇಟೆಗಳ ವಹಿವಾಟಿನ ಮೇಲೆ ಪ್ರಭಾವ ಬೀರುವಂತಹ ವಿದ್ಯಮಾನಗಳು ಇಲ್ಲವಾಗಿವೆ. ಹೀಗಾಗಿ ಜಾಗತಿಕ ಷೇರುಪೇಟೆಗಳ ವಹಿವಾಟು ಪ್ರಭಾವ ಬೀರಲಿವೆ. ಬ್ಯಾಂಕಿಂಗ್‌ ವಲಯದ ಷೇರುಗಳು, ಸೂಚ್ಯಂಕಗಳ ಏರಿಕೆಗೆ ನೆರವಾಗುವ ನಿರೀಕ್ಷೆ ಇದೆ’ ಎಂದು ರೆಲಿಗೇರ್‌ ಬ್ರೋಕಿಂಗ್‌ನ ಸಂಶೋಧನಾ ಉಪಾಧ್ಯಕ್ಷ ಅಜಿತ್‌ ಮಿಶ್ರಾ ಹೇಳಿದ್ದಾರೆ.

ತ್ರೈಮಾಸಿಕ ಫಲಿತಾಂಶ:ಪಿವಿಆರ್‌, ಟೈಟಾನ್‌, ಹೀರೊ ಮೊಟೊಕಾರ್ಪ್‌, ಹಿಂಡಾಲ್ಕೊ ಇಂಡಸ್ಟ್ರೀಸ್‌ ಮತ್ತು ಮಹೀಂದ್ರಾ ಕಂಪನಿಗಳು ಈ ವಾರ ತಮ್ಮ ತೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಪ್ರಭಾವ ಬೀರಲಿರುವ ಅಂಶಗಳು
*
ಅಮೆರಿಕದ ಕೇಂದ್ರೀಯ ಬ್ಯಾಂಕ್‌‌ ಫೆಡರಲ್ ರಿಸರ್ವ್‌ನಿಂದ ಬಡ್ಡಿದರ ಪರಾಮರ್ಶೆ
*ಭಾರತ–ಚೀನಾ ಗಡಿಯಲ್ಲಿ ಮೂಡಿರುವ ಉದ್ವಿಗ್ನ ಪರಿಸ್ಥಿತಿ
*ವಿದೇಶಿ ಬಂಡವಾಳ ಒಳಹರಿವಿನ ಪ್ರಮಾಣ
*ಹಂತ ಹಂತವಾಗಿ ಲಾಕ್‌ಡೌನ್‌ ಕೈಬಿಡುತ್ತಿರುವುದರಿಂದ ಆರ್ಥಿಕತೆ ಚಟುವಟಿಕೆಗಳಲ್ಲಿ ಆಗುತ್ತಿರುವ ಬದಲಾವಣೆ
*ಕಂಪನಿಗಳ ತ್ರೈಮಾಸಿಕ ಫಲಿತಾಂಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT