ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಒ: ದಾಖಲೆ ಸಲ್ಲಿಸಿದ ಪೇಟಿಎಂ

Last Updated 16 ಜುಲೈ 2021, 15:57 IST
ಅಕ್ಷರ ಗಾತ್ರ

ನವದೆಹಲಿ: ಪಾವತಿ ಸೇವಾ ಕಂಪನಿ ಪೇಟಿಎಂ, ತನ್ನ ಷೇರುಗಳನ್ನು ಸಾರ್ವಜನಿಕರಿಗೆ ಖರೀದಿಗೆ ಮುಕ್ತವಾಗಿಸುವ (ಐಪಿಒ) ಸಂಬಂಧ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಪ್ರಾಥಮಿಕ ದಾಖಲೆಗಳನ್ನು (ಡಿಆರ್‌ಎಚ್‌ಪಿ) ಸಲ್ಲಿಸಿದೆ.

ಒಟ್ಟು ₹ 16,600 ಕೋಟಿ ಬಂಡವಾಳವನ್ನು ಸಂಗ್ರಹಿಸುವ ಉದ್ದೇಶ ತನ್ನದು ಎಂದು ಕಂಪನಿಯು ಸೆಬಿಗೆ ಸಲ್ಲಿಸಿರುವ ದಾಖಲೆಗಳಲ್ಲಿ ವಿವರಿಸಿದೆ. ಈ ಬಂಡವಾಳದಲ್ಲಿ ಒಟ್ಟು ₹ 4,300 ಕೋಟಿ ಬಳಸಿ ಪೇಟಿಎಂ ಸೇವೆಗಳನ್ನು ಇನ್ನಷ್ಟು ಬಲಪಡಿಸುವ ಉದ್ದೇಶ ಕಂಪನಿಗೆ ಇದೆ. ಹೆಚ್ಚಿನ ಗ್ರಾಹಕರನ್ನು ಮತ್ತು ವರ್ತಕರನ್ನು ತನ್ನತ್ತ ಸೆಳೆದು, ಅವರಿಗೆ ತಂತ್ರಜ್ಞಾನ ಹಾಗೂ ಹಣಕಾಸು ಸೇವೆಗಳನ್ನು ಇನ್ನಷ್ಟು ನೀಡುವ ಉದ್ದೇಶವೂ ಅದಕ್ಕೆ ಇದೆ.

₹ 2,000 ಕೋಟಿ ಹಣವನ್ನು ಹೊಸ ಯೋಜನೆಗಳಿಗೆ, ಪಾಲುದಾರಿಕೆಗಳಿಗೆ ಮೀಸಲಿಡಲಿದೆ. 2019–20ರಲ್ಲಿ ಪೇಟಿಎಂ ನಷ್ಟ ₹ 2,943 ಕೋಟಿ ಆಗಿತ್ತು. 2020–21ರಲ್ಲಿ ನಷ್ಟವು ₹ 1,704 ಕೋಟಿಗೆ ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT