ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚ್ಯಂಕ 247 ಅಂಶ ಇಳಿಕೆ

ಐಟಿ, ತೈಲ ಮತ್ತು ಅನಿಲ ಷೇರುಗಳಲ್ಲಿ ಮಾರಾಟದ ಒತ್ತಡ
Last Updated 10 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಮಂಗಳವಾರ ನಕಾರಾತ್ಮಕ ವಹಿವಾಟು ನಡೆಯಿತು.

ಮಾಹಿತಿ ತಂತ್ರಜ್ಞಾನ (ಐಟಿ), ವಿದ್ಯುತ್, ತೈಲ ಮತ್ತು ಅನಿಲ ವಲಯದ ಷೇರುಗಳು ಅತಿಯಾದ ಮಾರಾಟದ ಒತ್ತಡಕ್ಕೆ ಒಳಗಾಗಿ ಸೂಚ್ಯಂಕಗಳು ಇಳಿಕೆ ಕಾಣುವಂತಾಯಿತು.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 247 ಅಂಶ ಇಳಿಕೆ ಕಂಡು 40,240 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 80 ಅಂಶ ಇಳಿಕೆಯಾಗಿ 11,857 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಯೆಸ್‌ ಬ್ಯಾಂಕ್‌ ಷೇರುಗಳು ಶೇ 10.055ಷ್ಟು ಗರಿಷ್ಠ ನಷ್ಟ ಕಂಡಿತು. ಪವರ್‌ಗ್ರಿಡ್‌, ಇಂಡಸ್‌ಇಂಡ್‌ ಬ್ಯಾಂಕ್‌, ಎನ್‌ಟಿಪಿಸಿ, ಐಟಿಸಿ, ಟಿಸಿಎಸ್‌, ಆ್ಯಕ್ಸಿಸ್‌ ಬ್ಯಾಂಕ್‌, ಹೀರೊಮೋಟೊಕಾರ್ಪ್‌, ಮಹೀಂದ್ರಾ ಮತ್ತು ಎಚ್‌ಸಿಎಲ್‌ ಟೆಕ್‌ ಕಂಪನಿ ಷೇರುಗಳು ಶೇ 2.66ರಷ್ಟು ಇಳಿಕೆಯಾಗಿವೆ.

ಗಳಿಕೆ: ಬಜಾಜ್‌ ಫೈನಾನ್ಸ್‌, ಎಚ್‌ಯುಎಲ್‌, ಎಚ್‌ಡಿಎಫ್‌ಸಿ ಬ್ಯಾಂಕ್‌, ಐಸಿಐಸಿಐ ಬ್ಯಾಂಕ್‌ ಮತ್ತು ಬಜಾಜ್‌ ಆಟೊ ಷೇರುಗಳು ಶೇ 1.06ರವರೆಗೆ ಏರಿಕೆ ಕಂಡಿವೆ.

ದೇಶದಲ್ಲಿ ಆರ್ಥಿಕ ಬೆಳವಣಿಗೆಗೆ ಸಂಬಂಧಿಸಿದಂತೆ ಯಾವುದೇ ಸಕಾರಾತ್ಮಕ ಸುದ್ದಿ ಇಲ್ಲ. ಅಮೆರಿಕ–ಚೀನಾ ವಾಣಿಜ್ಯ ಬಿಕ್ಕಟ್ಟು ಬಗೆಹರಿದಿಲ್ಲ. ಈ ಎರಡೂ ಅಂಶಗಳಿಂದಾಗಿ ಹೂಡಿಕೆದಾರರು ಲಭ ಗಳಿಕೆಗೆ ಹೆಚ್ಚಿನ ಗಮನ ನೀಡಿದರು ಎಂದು ವರ್ತಕರು ವಿಶ್ಲೇಷಣೆ ಮಾಡಿದ್ದಾರೆ.

ಪ್ರಮುಖ ಅಂಶಗಳು

ಮಂದಗತಿಯ ಆರ್ಥಿಕ ಬೆಳವಣಿಗೆ

ನವೆಂಬರ್ ತಿಂಗಳ ವಾಹನ ಮಾರಾಟ ಇಳಿಕೆ

ಅಮೆರಿಕ–ಚೀನಾ ವಾಣಿಜ್ಯ ಬಿಕ್ಕಟ್ಟು

ವಹಿವಾಟಿನ ವಿವರ

₹ 367 ಕೋಟಿ

ವಿದೇಶಿ ಬಂಡವಾಳ ಹೊರಹರಿವು

63.92 ಡಾಲರ್‌

ಒಂದು ಬ್ಯಾರೆಲ್‌ಗೆ ಬ್ರೆಂಟ್ ತೈಲ ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT