ಗುರುವಾರ , ಡಿಸೆಂಬರ್ 12, 2019
26 °C
ವಾರದ ಆರಂಭದ ವಹಿವಾಟಿನಲ್ಲಿ ಕುಸಿತ

ಅತಂತ್ರ ಫಲಿತಾಂಶ ನಿರೀಕ್ಷೆ: 500 ಅಂಶ ಕುಸಿದ ಸೆನ್ಸೆಕ್ಸ್

Published:
Updated:

ಮುಂಬೈ: ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರದ ಆರಂಭದ ವಹಿವಾಟಿನ ವೇಳೆ ಸುಮಾರು 500 ಅಂಶ ಕುಸಿತ ದಾಖಲಿಸಿದೆ.

ಬೆಳಿಗ್ಗೆ 9.40ರ ವಹಿವಾಟಿನ ವೇಳೆ ಸೆನ್ಸೆಕ್ಸ್ 555.72 ಅಂಶ ಕುಸಿತ ಕಂಡು 35,114.93ರಷ್ಟಾಗಿದೆ. ನಿಫ್ಟಿಯೂ 174.65 ಅಂಶ ಕುಸಿತ ದಾಖಲಿಸಿ 10,519.05ರಷ್ಟಾಗಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶ ಮಂಗಳವಾರ ಪ್ರಕಟಗೊಳ್ಳಲಿದೆ. ಯಾವೊಂದು ಪಕ್ಷಕ್ಕೂ ಸ್ಪಷ್ಟ ಬಹುತಮತ ದೊರೆಯದು ಎಂಬುದು ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದಿಂದ ತಿಳಿದುಬಂದಿದೆ. ಮತ್ತೊಂದೆಡೆ, ಜಾಗತಿಕ ಮಾರುಕಟ್ಟೆಯಲ್ಲಿ ವಹಿವಾಟು ಕುಸಿತ ದಾಖಲಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಸೆನ್ಸೆಕ್ಸ್‌ ಕುಸಿತ ಕಂಡಿದೆ ಎನ್ನಲಾಗಿದೆ.

ಮಧ್ಯ ಪ‍್ರದೇಶ ಮತ್ತು ಛತ್ತೀಸಗಡದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನಿಕಟ ಸ್ಪರ್ಧೆ ಇದೆ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್‌ ಕೈ ಮೇಲು ಎಂದು ಸಮೀಕ್ಷಾ ಫಲಿತಾಂಶ ತಿಳಿಸಿದೆ.

‘ಸಮೀಕ್ಷಾ ಫಲಿತಾಂಶ ಅತಂತ್ರವಾಗಿದೆ. ಆದರೆ ನಾವು ಅಂತಿಮ ಫಲಿತಾಂಶ ಪ್ರಕಟವಾಗುವವರೆಗೂ ಸಮಸ್ಯೆ ಮೈಮೇಲೆಳೆದುಕೊಳ್ಳಲು ಹೋಗುವುದಿಲ್ಲ. ಫಲಿತಾಂಶ ಪ್ರಕಟವಾಗುವವರೆಗೂ ಇದೇ ಪರಿಸ್ಥಿತಿ ಮುಂದುವರಿಯಲಿದೆ’ ಎಂದು ವಿದೇಶಿ ಬ್ಯಾಂಕೊಂದರ ವಹಿವಾಟುದಾರರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು