ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಲಯನ್ಸ್‌ ಷೇರು ಖರೀದಿ ಭರಾಟೆ: ಚೇತರಿಕೆ ನೀಡಿದ ಸೆನ್ಸೆಕ್ಸ್‌ ಓಟ

Last Updated 8 ಮೇ 2020, 12:41 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಶುಕ್ರವಾರ 199 ಅಂಶ ಏರಿಕೆಯೊಂದಿಗೆ ದಿನದ ವಹಿವಾಟು ಮುಗಿಸಿದೆ. ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರುಗಳ ಖರೀದಿಗೆ ಹೂಡಿಕೆದಾರರು ಆಸಕ್ತಿ ತೋರಿದ್ದು, ಸಕಾರಾತ್ಮ ವಹಿವಾಟಿಗೆ ಕಾರಣವಾಯಿತು.

ದಿನದ ವಹಿವಾಟಿನಲ್ಲಿ 645.13 ಅಂಶಗಳ ವರೆಗೂ ಹೆಚ್ಚಳ ಕಂಡಿದ್ದ ಸೆನ್ಸೆಕ್ಸ್‌, ಅಂತಿಮವಾಗಿ ಶೇ 0.63ರಷ್ಟು ಏರಿಕೆಯೊಂದಿಗೆ 31,642.70 ಅಂಶ ತಲುಪಿತು. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 52.45 ಅಂಶ ಚೇತರಿಕೆಯೊಂದಿಗೆ 9,251.50 ಅಂಶಗಳಲ್ಲಿ ವಹಿವಾಟು ಮುಗಿಸಿತು.

ಸೆನ್ಸೆಕ್ಸ್‌ ಷೇರುಗಳ ಪೈಕಿ ಹಿಂದುಸ್ತಾನ್‌ ಯೂನಿಲಿವರ್‌ ಶೇ 4ರಷ್ಟು ಗಳಿಕೆ ದಾಖಲಿಸಿತು. ನೆಸ್ಟ್ಲೆ ಇಂಡಿಯಾ, ಟೆಕ್‌ ಮಹೀಂದ್ರಾ ಹಾಗೂ ಸನ್‌ ಫಾರ್ಮಾ ಷೇರುಗಳು ಸಹ ಏರಿಕೆ ಕಂಡವು.

ಅಮೆರಿಕ ಮೂಲದ ವಿಸ್ಟಾ ಈಕ್ವಿಟಿ ಪಾರ್ಟ್‌ನರ್ಸ್‌ ಜಿಯೊದಲ್ಲಿ ₹11,367 ಕೋಟಿ ಹೂಡುವ ಮೂಲಕ ಶೇ 2.32ರಷ್ಟು ಪಾಲುದಾರಿಕೆ ಹೊಂದಲಿರುವ ವಿಷಯ ಪ್ರಕಟಗೊಳ್ಳುತ್ತಿದ್ದಂತೆ ರಿಲಯನ್ಸ್‌ ಇಂಡಸ್ಟ್ರೀಸ್‌ ಷೇರು ಶೇ 3ರಷ್ಟು ಜಿಗಿಯಿತು.

ಎನ್‌ಟಿಪಿಸಿ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ, ಆ್ಯಕ್ಸಿಸ್‌ ಬ್ಯಾಂಕ್‌ ಹಾಗೂ ಇಂಡಸ್‌ಇಂಡ್‌ ಬ್ಯಾಂಕ್‌ ಷೇರುಗಳು ನಷ್ಟ ಅನುಭವಿಸಿದವು.

ಜಗತ್ತಿನಾದ್ಯಂತ ಹಲವು ಭಾಗಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗುತ್ತಿದ್ದು, ಶಾಂಘೈ, ಹಾಂಕಾಂಗ್‌, ಟೋಕಿಯೊ ಹಾಗೂ ಸೋಲ್‌ ಷೇರುಪೇಟೆಗಳು ಗಳಿಕೆಯೊಂದಿಗೆ ವಹಿವಾಟು ಮುಗಿಸಿವೆ. ಗುರುವಾರ ವಿದೇಶಿ ಸಾಂಸ್ಥಿತಕ ಹೂಡಿಕೆದಾರರು ₹19,056.49 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ಡಾಲರ್‌ ಎದುರು ರೂಪಾಯಿ ಮೌಲ್ಯ 18 ಪೈಸೆ ಚೇತರಿಕೆ ಕಂಡು ₹75.54 ತಲುಪಿದೆ. ಅಂತರರಾಷ್ಟ್ರೀಯ ಕಚ್ಚಾ ತೈಲ ಮಾನದಂಡ ಬ್ರೆಂಟ್‌ ಫ್ಯೂಚರ್ಸ್‌ ದರ ಶೇ 1.73ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 29.97 ತಲುಪಿದೆ.

ಜಗತ್ತಿನಾದ್ಯಂತ ಕೊರೊನಾ ವೈರಸ್‌ ಸೋಂಕು ಪ್ರಕರಣಗಳು 38.46 ಲಕ್ಷ ದಾಟಿದೆ ಹಾಗೂ ಸೋಂಕಿನಿಂದ 2.69 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಭಾರತದಲ್ಲಿ ಕೋವಿಡ್‌–19 ಪ್ರಕರಣಗಳು 56,000 ದಾಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT