ಶನಿವಾರ, ಫೆಬ್ರವರಿ 4, 2023
18 °C

ಮುಂಬೈ: ಸೆನ್ಸೆಕ್ಸ್ ಇಳಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಸತತ ನಾಲ್ಕನೆಯ ದಿನವೂ ಇಳಿಕೆ ಕಂಡಿದೆ. ಸೆನ್ಸೆಕ್ಸ್ 215 ಅಂಶ ಹಾಗೂ ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 82 ಅಂಶ ಕುಸಿದಿವೆ.

ರೆಪೊ ದರದಲ್ಲಿನ ಬದಲಾವಣೆಗಳಿಗೆ ತೀವ್ರವಾಗಿ ಸ್ಪಂದಿಸುವ ರಿಯಾಲ್ಟಿ, ಆಟೊಮೊಬೈಲ್ ಮತ್ತು ಬ್ಯಾಂಕಿಂಗ್ ವಲಯಗಳ ಷೇರು ಮೌಲ್ಯವು ಕುಸಿದಿದೆ.

‘ಆರ್‌ಬಿಐ ಹೆಚ್ಚೆಚ್ಚು ವಾಸ್ತವವಾದಿ ಆಗುತ್ತಿದೆ. ಅದರ ಗಮನವು ಹಣದುಬ್ಬರ ನಿಯಂತ್ರಿಸುವತ್ತ ಇದೆ. ಮುಂದಿನ ದಿನಗಳಲ್ಲಿ ರೆಪೊ ದರ ಇನ್ನಷ್ಟು ಹೆಚ್ಚಬಹುದು’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆಯು ಶೇ 1.56ರಷ್ಟು ಕಡಿಮೆಯಾಗಿ, ಪ್ರತಿ ಬ್ಯಾರೆಲ್‌ಗೆ 78.11 ಡಾಲರ್‌ಗೆ ತಲುಪಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು