ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರು ಮಾತು| ಐಪಿಒದ ಪ್ರಮುಖ ಐದು ಹಂತಗಳು

Last Updated 27 ಡಿಸೆಂಬರ್ 2021, 20:34 IST
ಅಕ್ಷರ ಗಾತ್ರ

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಹೂಡಿಕೆ ಮಾಡುವುದು ಹೇಗೆ ಎಂದು ಹಿಂದಿನ ಅಂಕಣದಲ್ಲಿ ತಿಳಿದುಕೊಂಡೆವು. ಈಗ ಕಂಪನಿಯೊಂದರ ಐಪಿಒದಪ್ರಮುಖಹಂತಗಳನ್ನು ತಿಳಿಯೋಣ. ಇಡೀ ಪ್ರಕ್ರಿಯೆಯನ್ನು ಸಮಗ್ರವಾಗಿ ತಿಳಿದುಕೊಂಡಾಗ ಐಪಿಒ ಹೂಡಿಕೆಯಲ್ಲಿ ಯಶಸ್ಸು ಸಾಧ್ಯ.

ಶರತ್ ಎಂ.ಎಸ್.
ಶರತ್ ಎಂ.ಎಸ್.

1 ಮಾರ್ಕೆಟಿಂಗ್ ಮತ್ತು ಸಾರ್ವಜನಿಕ ಸಂಪರ್ಕ: ‘ಐಪಿಒ’ ಬಗ್ಗೆ ಜನರಿಗೆ ತಿಳಿಸುವುದು ಬಹಳ ಮುಖ್ಯ. ಸುದ್ದಿ ವಾಹಿನಿಗಳು, ದಿನಪತ್ರಿಕೆಗಳು, ಜಾಹೀರಾತು, ಡಿಜಿಟಲ್ ಮಾರ್ಕೆಟಿಂಗ್ ಸೇರಿ ಹಲವು ಮಾಧ್ಯಮಗಳನ್ನು ಬಳಸಿಕೊಂಡು ಕಂಪನಿಗಳು‘ಐಪಿಒ’ಪ್ರಕ್ರಿಯೆಗೆ ಮುಂದಾಗುತ್ತವೆ. ಇದರಿಂದ ನಿರೀಕ್ಷಿತ ಬಂಡವಾಳ ಸಂಗ್ರಹ ಸಾಧ್ಯವಾಗುತ್ತದೆ.

2 ಷೇರಿಗೆ ಬೆಲೆ ನಿಗದಿ:ಕಂಪನಿಯು ಷೇರಿನ ಬೆಲೆ ನಿಗದಿ ಮಾಡುತ್ತದೆ. ಉದಾಹರಣೆಗೆ ₹ 100ರಿಂದ ₹ 120ರ ಬೆಲೆಯಲ್ಲಿಷೇರುಗಳ ಖರೀದಿಗೆ ಕಂಪನಿ ಅವಕಾಶ ಕಲ್ಪಿಸುತ್ತದೆ ಎಂದಿಟ್ಟುಕೊಳ್ಳಿ. ನೀವು ಆಕಂಪನಿಯ ಷೇರಿಗೆ ಎಷ್ಟು ಬೆಲೆ ನಿಗದಿಪಡಿಸಬಹುದು ಎನ್ನುವುದನ್ನು ತೀರ್ಮಾನಿಸಿ ಬಿಡ್ಡಿಂಗ್ ಮಾಡಬಹುದು. ಉದಾಹರಣೆಗೆ, ಎಸ್‌ಬಿಐ ಕಾರ್ಡ್ಸ್ ತನ್ನ ಐಪಿಒ ದರವನ್ನು ₹ 750ರಿಂದ ₹ 755ಕ್ಕೆ ನಿಗದಿ ಮಾಡಿತ್ತು. ಈ ಸಂದರ್ಭದಲ್ಲಿ ನಿಮಗೆ ₹ 750ರಿಂದ ₹ 755ರ ನಡುವೆ ಬಿಡ್ ಮಾಡಲು ಅವಕಾಶವಿರುತ್ತದೆ.

3 ಬುಕ್ ಬಿಲ್ಡಿಂಗ್: ‘ಐಪಿಒ’ದಲ್ಲಿ ಬುಕ್ ಬಿಲ್ಡಿಂಗ್ ಪ್ರಕ್ರಿಯೆಪ್ರಮುಖಹಂತ. ಈ ಅವಧಿಯಲ್ಲಿ ಕಂಪನಿಯಷೇರುಗಳಿಗಾಗಿ ಹೂಡಿಕೆದಾರರು ಬಿಡ್ ಮಾಡಬಹುದು. ಸಾಮಾನ್ಯವಾಗಿ ಬುಕ್ ಬಿಲ್ಡಿಂಗ್ ಹಂತದಲ್ಲಿ ಬಿಡ್ಡಿಂಗ್ ಮಾಡಲು ಮೂರು ದಿನಗಳ ಕಾಲಾವಕಾಶವಿರುತ್ತದೆ.

4 ಕ್ಲೋಶರ್(ಬಿಡ್ಡಿಂಗ್ ಪ್ರಕ್ರಿಯೆ ಕೊನೆಗೊಳಿಸುವುದು):‘ಐಪಿಒ’ಬಿಡ್ಡಿಂಗ್ ಪ್ರಕ್ರಿಯೆ ಕೊನೆಗೊಂಡ ಬಳಿಕ ಯಾವ ಬೆಲೆಗೆ ಗರಿಷ್ಠ ಬಿಡ್ಡಿಂಗ್ ಆಗಿದೆ ಎನ್ನುವುದನ್ನು ಆಧರಿಸಿ ಷೇರಿನ ಬೆಲೆ ನಿಗದಿ ಮಾಡಲಾಗುತ್ತದೆ. ನಂತರದಲ್ಲಿ ಐಪಿಒಗೆ ಬಿಡ್ಡಿಂಗ್ ಮಾಡಿದ್ದವರಿಗೆಷೇರುಗಳ ಹಂಚಿಕೆ ಮಾಡಲಾಗುತ್ತದೆ. ಈ ಪ್ರಕ್ರಿಯೆಗೆ ಕ್ಲೋಶರ್‌ ಎಎನ್ನುತ್ತಾರೆ.

5 ಷೇರುಮಾರುಕಟ್ಟೆಗೆ ಸೇರ್ಪಡೆ (ಲಿಸ್ಟಿಂಗ್): ‘ಐಪಿಒ’ಪ್ರಕ್ರಿಯೆ ಪೂರ್ಣಗೊಂಡ ನಂತರ ಕಂಪನಿಯು ಷೇರುಮಾರುಕಟ್ಟೆಗೆ (ಸೆನ್ಸೆಕ್ಸ್, ನಿಫ್ಟಿ) ಸೇರ್ಪಡೆಗೊಳ್ಳುತ್ತದೆ. ಈ ಸೇರ್ಪಡೆ ಪ್ರಕ್ರಿಯೆಯ ನಂತರದಲ್ಲಿ ಆಷೇರುವಹಿವಾಟಿಗೆ ಮುಕ್ತವಾಗುತ್ತದೆ. ನಿರ್ದಿಷ್ಟ ಕಂಪನಿಯೊಂದರ ಷೇರು, ಸೂಚ್ಯಂಕದಲ್ಲಿ ಸೇರ್ಪಡೆಯಾದ ಬಳಿಕ ಯಾರು ಬೇಕಾದರೂ ಆ ಷೇರನ್ನು ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು.

ಸ್ಪೆಷಲ್ ಟಿಪ್ಸ್:

1→ಐಪಿಒ ಬಿಡ್ಡಿಂಗ್‌ನಲ್ಲಿ ನಿಮಗೆಷೇರುಗಳು ಸಿಗುವ ಸಾಧ್ಯತೆ ಹೆಚ್ಚಾಗಬೇಕಾದರೆ ಮೊದಲನೇ ದಿನವೇ ಬಿಡ್‌ ಮಾಡಿ.

2→ಡಿ-ಮ್ಯಾಟ್ ಖಾತೆ ಆರಂಭಿಸಲು 2-3 ದಿನಗಳು ಬೇಕಾಗುತ್ತದೆ. ಹಾಗಾಗಿ ಕೂಡಲೇ ಡಿ-ಮ್ಯಾಟ್ ಖಾತೆ ತೆರೆಯಿರಿ. ಇನ್ನೊಂದು ಐಪಿಒ ಬರುವವರೆಗೂ ಕಾಯಬೇಡಿ.

3→ಬಿಡ್ಡಿಂಗ್ ಮಾಡುವಾಗ ಎರಡೆರಡು ಕಡೆ ಬಿಡ್ಡಿಂಗ್ ಮಾಡಿ, ಒಂದು ಕಡೆ ಹೂಡಿಕೆದಾರ ಅಂತ ನಮೂದಿಸಿ ಮತ್ತೊಂದು ಕಡೆಷೇರುದಾರ ಎಂದು ನಮೂದಿಸಿದರೆ ನಿಮ್ಮ ಕೋರಿಕೆ ರದ್ದಾಗುವ ಸಾಧ್ಯತೆ ಇರುತ್ತದೆ.

4→ಪತ್ನಿ, ತಂದೆ, ಸೋದರರ ಖಾತೆಯಿಂದ ಬಿಡ್ ಮಾಡಿ. ಪ್ಯಾನ್ ಸಂಖ್ಯೆ ಆಧಾರದಲ್ಲಿ ಷೇರು ಹಂಚಿಕೆ ಆಗುವುದರಿಂದಷೇರುಗಳು ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT