ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷೇರುಪೇಟೆ ಸೂಚ್ಯಂಕ: ಸತತ ಎರಡನೇ ವಾರವೂ ಗಳಿಕೆ

Last Updated 22 ಜನವರಿ 2023, 18:45 IST
ಅಕ್ಷರ ಗಾತ್ರ

ಮುಂಬೈ: ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಏರಿಕೆ ದಾಖಲಿಸಿವೆ. ಜನವರಿ 20ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಅಲ್ಪ ಮೊತ್ತದ ಗಳಿಕೆ ಕಂಡಿವೆ. ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.59 ರಷ್ಟು ಹೆಚ್ಚಳ ಕಂಡಿದೆ. ನಿಫ್ಟಿ ಶೇ 0.39 ರಷ್ಟು ಜಿಗಿದಿದೆ. ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಗಳ ಉತ್ತಮ ಸಾಧನೆ, ಚೀನಾದಲ್ಲಿ ಕೋವಿಡ್ ಲಾಕ್‌ಡೌನ್ ಸಡಿಲ ಸೇರಿದಂತೆ ಹಲವು ಅಂಶಗಳು ಷೇರುಪೇಟೆ ಚೇತರಿಕೆಗೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ಬಿಎಸ್‌ಇ ಬಂಡವಾಳ ಸರಕುಗಳ ಸೂಚ್ಯಂಕ ಮತ್ತು ವಿದ್ಯುತ್‌ ಸೂಚ್ಯಂಕ ತಲಾ ಶೇ 2 ರಷ್ಟು ಗಳಿಸಿಕೊಂಡಿವೆ. ಅನಿಲ-ತೈಲ ಸೂಚ್ಯಂಕ ಮತ್ತು ಮಾಹಿತಿ ತಂತ್ರಜ್ಞಾನ ಸೂಚ್ಯಂಕ ತಲಾ ಸುಮಾರು ಶೇ 2 ರಷ್ಟು ಹೆಚ್ಚಳ ದಾಖಲಿಸಿವೆ. ಬಿಎಸ್‌ಇ ಟೆಲಿಕಾಂ ಮತ್ತು ಆಟೊ ವಲಯ ಶೇ 1 ರಿಂದ ಶೇ 2 ರಷ್ಟು ಕುಸಿದಿವೆ.

ಬಿಎಸ್‌ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ಟೋಟಲ್ ಗ್ಯಾಸ್, ಕೋಲ್ ಇಂಡಿಯಾ, ಟೆಕ್ ಮಹೀಂದ್ರ, ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ, ಲಾರ್ಸನ್ ಅಂಡ್ ಟೂಬ್ರೊ ಮತ್ತು ಡಾಬರ್ ಇಂಡಿಯಾ ಗಳಿಕೆ ಕಂಡಿವೆ. ನೈಕಾ, ಅವೆನ್ಯೂ ಸೂಪರ್ ಮಾರ್ಕೆಟ್ಸ್, ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್, ಸ್ಟಾರ್ ಹೆಲ್ತ್ ಮತ್ತು ಅಲೈಡ್ ಇನ್ಶೂರೆನ್ಸ್, ಅದಾನಿ ಎಂಟರ್ ಪ್ರೈಸಸ್ ಮತ್ತು ಇಂಡಸ್ ಟವರ್ಸ್ ಕುಸಿದಿವೆ.

ಮುನ್ನೋಟ: ಈ ವಾರ ಎಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಐಡಿಬಿಐ, ಟಾಟಾ ಕಮ್ಯೂನಿಕೇಷನ್ಸ್, ಟಿವಿಎಸ್ ಮೋಟರ್ಸ್‌, ಬಜಾಜ್ ಆಟೊ, ಟಾಟಾ ಮೋಟರ್ಸ್‌, ಮಾರುತಿ ಸುಜುಕಿ, ಗೋ ಕಲರ್ಸ್, ಸಿಯೇಟ್ ಲಿ., ಬಜಾಜ್ ಫೈನಾನ್ಸ್, ನಜಾರಾ ಟೆಕ್ನಾಲಜೀಸ್, ಅಪೋಲೊ ಪೈಪ್ಸ್, ಪ್ರೂಡೆಂಟ್, ಶಾಪರ್ಸ್ ಸ್ಟಾಪ್ ಸೇರಿದಂತೆ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಅಮೆರಿಕ ಫೆಡರಲ್ ಬ್ಯಾಂಕ್ ನಿಂದ ಮತ್ತಷ್ಟು ಬಡ್ಡಿ ದರ ಹೆಚ್ಚಳದ ಆತಂಕ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಮಾರಾಟದ ಒತ್ತಡ ಸೇರಿದಂತೆ ಹಲವು ಅಂಶಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT