ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

41 ಸಾವಿರದ ಗಡಿ ದಾಟಿದ ಸಂವೇದಿ ಸೂಚ್ಯಂಕ

Last Updated 27 ನವೆಂಬರ್ 2019, 12:03 IST
ಅಕ್ಷರ ಗಾತ್ರ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟದ ವಹಿವಾಟು ಮುಂದುವರಿದಿದೆ.

ಅಮೆರಿಕ–ಚೀನಾ ವಾಣಿಜ್ಯ ಬಿಕ್ಕಟ್ಟು ಬಗೆಹರಿಯುವ ನಿಟ್ಟಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿದ್ದು, ಭಾರತದ ಷೇರುಪೇಟೆಗಳಮೇಲೆಯೂ ಅದರ ಪ್ರಭಾವ ಬೀರುತ್ತಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 199 ಅಂಶ ಏರಿಕೆ ಕಂಡು ಸಾರ್ವಕಾಲಿಕ ದಾಖಲೆ ಮಟ್ಟವಾದ 41,020 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿತು.ವಹಿವಾಟಿನ ಆರಂಭದಲ್ಲಿಯೇ 41,066 ಅಂಶಗಳ ಗರಿಷ್ಠ ಮಟ್ಟವನ್ನು ತಲುಪಿತ್ತು. ಮಧ್ಯಂತರ ವಹಿವಾಟಿನಲ್ಲಿ 40,906 ಅಂಶಗಳ ಕನಿಷ್ಠ ಮಟ್ಟಕ್ಕೆ ಇಳಿದಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 63 ಅಂಶ ಹೆಚ್ಚಾಗಿ 12,101 ಅಂಶಗಳ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ.

ನಿಫ್ಟಿ 50 ಸೂಚ್ಯಂಕದಲ್ಲಿ ಯೆಸ್‌ ಬ್ಯಾಂಕ್‌ ಷೇರು ಶೇ 8.08ರಷ್ಟು ಏರಿಕೆ ಕಂಡಿದೆ. ಅಲ್ಟ್ರಾಟೆಕ್‌ ಸಿಮೆಂಟ್‌ ಲಿಮಿಟೆಡ್‌ ಷೇರು ಶೇ 2.96ರಷ್ಟು ಮತ್ತು ಎಸ್‌ಬಿಐ ಷೇರು ಶೇ 2.4ರಷ್ಟು ಏರಿಕೆ ಕಂಡುಕೊಂಡಿವೆ.

ವಾಹನ ವಲಯದಲ್ಲಿ ಟಾಟಾ ಮೋಟರ್ಸ್‌ ಷೇರು ಶೇ 4.22ರಷ್ಟು, ಮಾರುತಿ ಸುಜುಕಿ ಷೇರು ಶೇ 2.40ರಷ್ಟು ಏರಿಕೆ ಕಂಡಿವೆ.

ಇಳಿಕೆ: ಭಾರ್ತಿ ಇನ್‌ಫ್ರಾಟೆಲ್‌ ಲಿಮಿಟೆಡ್‌ ಷೇರು ಶೇ 3.16, ಸಿಪ್ಲಾ ಲೆಟೆಡ್‌ ಶೇ 2.02 ಮತ್ತು ಎಲ್ಆ್ಯಂಡ್‌ಟಿ ಶೇ 2.02ರಷ್ಟು ಇಳಿಕೆ ಕಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT