ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಪ್ಟೆಂಬರ್‌ನಿಂದ ತರಕಾರಿ ಬೆಲೆ ಇಳಿಕೆ ಸಾಧ್ಯತೆ: ಆರ್‌ಬಿಐ ಗವರ್ನರ್‌

Published : 24 ಆಗಸ್ಟ್ 2023, 5:01 IST
Last Updated : 24 ಆಗಸ್ಟ್ 2023, 5:01 IST
ಫಾಲೋ ಮಾಡಿ
Comments

ನವದೆಹಲಿ: ಭಾರತದಲ್ಲಿ ಗಗನಕ್ಕೇರಿರುವ ತರಕಾರಿ ಬೆಲೆ ಸೆಪ್ಟೆಂಬರ್‌ನಿಂದ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ ತಿಳಿಸಿದ್ದಾರೆ.

ತರಕಾರಿ ಮತ್ತು ಸಿರಿಧಾನ್ಯಗಳ ಬೆಲೆ ಜುಲೈನಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇ 7.44ಕ್ಕೆ ಹೆಚ್ಚಿಸಿವೆ, ಇದು 15 ತಿಂಗಳಲ್ಲೇ ಅತ್ಯಧಿಕವಾಗಿದೆ. ಸೆಪ್ಟೆಂಬರ್‌ನಿಂದ ತರಕಾರಿ ಹಣದುಬ್ಬರದಲ್ಲಿ ಗಮನಾರ್ಹವಾದ ಇಳಿಕೆಯ ನಿರೀಕ್ಷೆಯಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ. 

ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಆಹಾರದ ಬೆಲೆಗಳಿಗೆ ಅಡ್ಡಿಯಾಗಬಹುದಾದರೂ ಧಾನ್ಯಗಳಿಗೆ ಉತ್ತಮ ಬೆಲೆ ಬರುವ ಲಕ್ಷಣವಿದೆ ಎಂದು ಅವರು ಹೇಳಿದರು.

ಬೆಲೆ ಸ್ಥಿರತೆಯು ಸುಸ್ಥಿರ ಬೆಳವಣಿಗೆಗೆ ಆಧಾರವಾಗಿರಬೇಕು. ಬೆಳವಣಿಗೆಯನ್ನು ಮುಂದುವರೆಸಲು ಮತ್ತು 2023-24 ರಲ್ಲಿ ಬಂಡವಾಳ ವೆಚ್ಚವು ವೇಗವನ್ನು ಪಡೆಯಲು ಪರಿಸ್ಥಿತಿಗಳು ಅನುಕೂಲಕರವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಈರುಳ್ಳಿ ಖರೀದಿ ಪುನರಾರಂಭಿಸಿದ ಕೇಂದ್ರ

ಇದನ್ನೂ ಓದಿ: PHOTOS | ವರಮಹಾಲಕ್ಷ್ಮಿ ಹಬ್ಬ: ಹೂವು, ಹಣ್ಣು ಖರೀದಿಗೆ ಹರಿದುಬಂದ ಜನಸಾಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT