ಬಹಳಷ್ಟು ಆಧ್ಯಾತ್ಮಿಕ ಉಪನ್ಯಾಸಗಳಲ್ಲಿ ಈ ಕಥೆಯನ್ನು ಬಳಸಲಾಗುತ್ತದೆ. ಒಂದು ಊರಿನಲ್ಲಿ ಒಂದು ರೈತ ಪರಿವಾರ. ಪ್ರತಿ ಶನಿವಾರ ಊರ ಸಂತೆ ನಡೆಯುತ್ತದೆ. ತೋಟದಲ್ಲಿ ಬೆಳೆದ ತರಕಾರಿಯನ್ನು ಸಂತೆಯಲ್ಲಿ ಮಾರಿಕೊಂಡು ಬರಲು ರೈತನ ಹೆಂಡತಿ ಬೆಳಿಗ್ಗೆಯೇ ಹೊರಡುತ್ತಿದ್ದಳು.

ಆದರೆ ಇಡೀ ದಿನ ಗಂಡನಿಗೆ, ಮಕ್ಕಳಿಗೆ ಆಹಾರ ಬೇಕಲ್ಲ. ಅದಕ್ಕೇ ಅವಳು ತುಂಬ ಬೇಗನೇ ಎದ್ದು ತಿಂಡಿ, ಊಟ ಎಲ್ಲ ವ್ಯವಸ್ಥೆಗಳನ್ನು ಮಾಡಿ ನಂತರ ತರಕಾರಿಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ಹೊರಟಳು.

ನಂತರ ರೈತನೂ ತನ್ನ ಕೆಲಸಕ್ಕೆ ಹೊರಡಲು ಸಿದ್ಧನಾದ. ಅದಕ್ಕಿಂತ ಮೊದಲು ಮಕ್ಕಳನ್ನೆಬ್ಬಿಸಿ, ಅವರಿಗ ಸ್ನಾನಕ್ಕೆ ಹಾಕಿ ತಿಂಡಿಕೊಟ್ಟ. ತಾನು ಹೊಲಕ್ಕೆ ಹೊರಡುವ ಮುನ್ನ ಮಕ್ಕಳಿಗೆ ಹೇಳಿದ, `ಮಕ್ಕಳೇ ನಾನು ಹೊಲಕ್ಕೆ ಹೋಗುತ್ತಿದ್ದೇನೆ.

ನೀವು ಮನೆಯ ಹತ್ತಿರವೇ ಆಡಿಕೊಂಡಿರಿ. ಮಧ್ಯಾಹ್ನ ಹಸಿವೆಯಾದಾಗ ಒಳಗೆ ಬಂದು ಕೈಕಾಲು ತೊಳೆದುಕೊಂಡು ಊಟಮಾಡಿ. ಈ ಪೆಟ್ಟಿಗೆಯಲ್ಲಿ ನಿಮ್ಮ ಅಮ್ಮ ಎಲ್ಲವನ್ನೂ ಜೋಡಿಸಿ ಇಟ್ಟಿದ್ದಾಳೆ. ರೊಟ್ಟಿ ಇದೆ, ಪಲ್ಯ ಇದೆ, ಪಾಯಸ ಇದೆ. ಪಕ್ಕದಲ್ಲಿ ಮೊಸರಿನ ಕುಡಿಕೆ ಇದೆ. ಬೇಕಾದಷ್ಟು ಹಾಕಿಕೊಂಡು ಊಟ ಮಾಡಿ ಮುಗಿಸಿ ನಂತರ ಪೆಟ್ಟಿಗೆ ಮುಚ್ಚಿ ಇಡಿ.~ ಮಕ್ಕಳು ತಿಳಿಯಿತೆಂದು ತಲೆ ಅಲ್ಲಾಡಿಸಿದರು.

ಮಧ್ಯಾಹ್ನದ ಒಳಗೆ ಮನೆಯಲ್ಲಿ ಒಂದು ಭಾರೀ ಬೆಕ್ಕು ಸೇರಿಕೊಂಡಿತು. ಮಕ್ಕಳು ಹೊರಗೆ ಇದ್ದುದರಿಂದ ಅದನ್ನು ಗಮನಿಸಿರಲಿಲ್ಲ. ಈ ಬೆಕ್ಕು ಒಳಗೆಲ್ಲ ಸುಳಿದಾಡಿ ನಂತರ ಆಹಾರದ ಪೆಟ್ಟಿಗೆಯೊಳಗೆ ಸೇರಿಕೊಂಡಿತು. ನಿಧಾನವಾಗಿ, ರೊಟ್ಟಿ, ಪಲ್ಯ, ಪಾಯಸ, ಮೊಸರು ಎಲ್ಲವನ್ನು ತಿಂದು ಮುಗಿಸಿತು. ಹೊಟ್ಟೆ ಭಾರವಾದದ್ದರಿಂದ ಅಲ್ಲಿಯೇ ಮಲಗಿಬಿಟ್ಟಿತು.

ಹಸಿವಾದಾಗ ಮಕ್ಕಳು ಒಳಗೆ ಬಂದು ಪೆಟ್ಟಿಗೆಯಲ್ಲಿದ್ದ ಆಹಾರ ತೆಗೆದುಕೊಳ್ಳಲು ಹೋದರು. ಬೆಕ್ಕು ಇದ್ದದ್ದನ್ನು ಕಂಡು ಗಾಬರಿಯಾದರು. ಅದನ್ನು ಓಡಿಸಲೆಂದು ಹತ್ತಿರ ಹೋದರೆ ತಿಂದು ಕೊಬ್ಬಿದ ಬೆಕ್ಕು ಗುರ್ರೆಂದಿತು. ಮಕ್ಕಳು ಹೆದರಿಕೆಯಿಂದ ದೂರ ಸರಿದವು. ಹಸಿವೆಯಿಂದ ಕಂಗಾಲಾದರೂ ಬೆಕ್ಕಿನ ಹೆದರಿಕೆಯಿಂದ ಪೆಟ್ಟಿಗೆಯ ಒಳಗೆ ಹೋಗದೇ ಹೊರಗೇ ಕುಳಿತರು.

ತಂದೆ ಬಂದೊಡನೆ ಓಡಿ ಹೋಗಿ ಅವನನ್ನು ಅಪ್ಪಿಕೊಂಡು ಅಳತೊಡಗಿದರು. ಅಪ್ಪ ಕೇಳಿದ, `ಮಕ್ಕಳೇ ಊಟ ಮಾಡಿದ್ರಾ? ಹೊಟ್ಟೆ ತುಂಬಿತಾ?~ ಮಕ್ಕಳು ಹೇಳಿದರು, `ಅಪ್ಪಾ, ಊಟದ ಪೆಟ್ಟಿಗೆಯೊಳಗೆ ದೊಡ್ಡ ಬೆಕ್ಕು ಸೇರಿಕೊಂಡಿದೆ. ಹತ್ತಿರ ಹೋದರೆ ಗುರ್ರೆಂದು ಹೆದರಿಸುತ್ತದೆ.

ಹೀಗಾಗಿ ಊಟ ಮಾಡಲೇ ಇಲ್ಲ.~ `ಹೌದೇ~ ಎಂದು ರೈತ ತಾನೇ ಪೆಟ್ಟಿಗೆಯ ಹತ್ತಿರ ಹೋದ. ಬೆಕ್ಕು ಹಾರಿ ಮೈಮೇಲೆ ಬೀಳಲು ಬಂದಿತು. ರೈತ ಹಿಂದೆ ಸರಿದ. ತನ್ನ ಭಾರೀ ಕೋಲನ್ನು ತಂದು ಬೆಕ್ಕಿನ ಬೆನ್ನಿನ ಮೇಲೆ ಒಂದು ಪೆಟ್ಟು ಕೊಟ್ಟ. ಮಿಯಾಂವ್, ಮಿಯಾಂವ್ ಎಂದು ಬಾಲ ಮುದುಡಿಕೊಂಡು ಬೆಕ್ಕು ಹೊರಗೆ ಓಡಿ ಹೋಯಿತು. ನಂತರ ಮಕ್ಕಳು ನಿಧಾನವಾಗಿ ಊಟಮಾಡಿದರು.

ಭೂಮಿಗೆ ಬಂದ ಜೀವ ಬೆಕ್ಕು ತಾಯಿ ಮಾಡಿದ ಆಹಾರವನ್ನು ತಿಂದಂತೆ ಅಹಂಕಾರದಿಂದ ಉಬ್ಬಿ ಸೊಕ್ಕಿದ ಬೆಕ್ಕಾಗಿ ದೇಹದಲ್ಲಿ ಕುಳಿತುಕೊಂಡು ದೇಹವೇ ತಾನೆಂದು ಭಾವಿಸತೊಡಗುತ್ತದೆ. ತಾನು ಅಧಿಕಾರಿ, ಶ್ರಿಮಂತ, ಜ್ಞಾನಿ, ಎಂದು ಏನೆಲ್ಲ ಚಿಂತಿಸಿ ಅಹಂಕಾರಪಡುತ್ತದೆ.

ಆಗೊಮ್ಮೆ ರೈತ ತಂದೆಯ ರೂಪದಲ್ಲಿ ಜ್ಞಾನಿಯೊಬ್ಬ ನಮ್ಮ ಜೀವನದಲ್ಲಿ ಬರುತ್ತಾನೆ. ಅಹಂಕಾರಕ್ಕೆ ತಿಳಿ ಹೇಳುತ್ತಾನೆ, ಕೇಳದಿದ್ದರೆ ಜ್ಞಾನದ ಕೋಲು ಎತ್ತಿ ಒಂದು ಪೆಟ್ಟು ಕೊಡುತ್ತಾನೆ. ಆಗ ಅಹಂಕಾರ ರೂಪವಾದ ಬೆಕ್ಕು ಹೆದರಿ ಓಡಿಹೋಗುತ್ತದೆ ನಂತರ ಜೀವಕ್ಕೆ ಆತ್ಮಾನಂದದ ಸುಖ ದೊರೆಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.