ಷೇರುಪೆಟೆಯಲ್ಲಿನ ಚಟುವಟಿಕೆಯು ಸೀಮಿತವಾಗಿದ್ದು, ಚಟುವಟಿಕೆಯಲ್ಲಿ ಭಾಗವಹಿಸುವವರ ಸಂಖ್ಯೆಯೂ ಕ್ಷೀಣಿತವಾಗುತ್ತಿದೆ. ಬಹಳಷ್ಟು ಕಂಪೆನಿಗಳ ಷೇರಿನ ದರಗಳು ಕಂಪ್ಯೂಟರ್ ಪರದೆಯ ಮೇಲೆ ಮಿಂಚುತ್ತಿರುತ್ತವೆ. ನೋಡುವವರಿಗೆ ಅದು ಹೆಚ್ಚಿನ ಚಟುವಟಿಕೆಯಲ್ಲಿದೆ ಎಂಬ ಭ್ರಮೆ ಮೂಡಿಸುತ್ತದೆ. ಆದರೆ, ವಾಸ್ತವವಾಗಿ ವಹಿವಾಟಾಗದೇ ಇರುವುದನ್ನು ವಹಿವಾಟದ ಷೇರುಗಳ ಸಂಖ್ಯೆ ಬದಲಾಗದೇ ಇರುವುದರಿಂದ ತಿಳಿಯಬಹುದು. ಕಳೆದ ವಾರದ ಏರಿಳಿತಗಳು ತೀವ್ರವಾಗಿದ್ದವು. ವಾರಾಂತ್ಯದಲ್ಲಿ ಉತ್ತಮ ಏರಿಕೆ ಕಂಡಿತು. `ಜನರಲ್ ಆ್ಯಂಟಿ ಅವಾಯಿಡನ್ಸ್ ರೂಲ್ಸ್~ ಏಪ್ರಿಲ್ 1 ರಿಂದ ಜಾರಿಯಾಗುವ ಕಾರಣ ಅದರ ಪ್ರಭಾವದ ವಿಶ್ಲೇಷಣೆಗಳು, ಗೊಂದಲ ಮೂಡಿಸಿ ಪೇಟೆಯ ದಿಶೆ ತಪ್ಪಿಸಿದವು. ಕಳೆದ ಗುರುವಾರದ ಸೂಚ್ಯಂಕ ಬದಲಾವಣೆಯು ಕೇವಲ 63 ಅಂಶಗಳ ಇಳಿಕೆ ಮಾತ್ರವಾದರೂ, ಅಂದು ವಿದೇಶಿ ವಿತ್ತೀಯ ಸಂಸ್ಥೆಗಳು ಭಾರಿ ಮಾರಾಟ ಅಂದರೆ ರೂ. 1332 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿ ಆತಂಕ ಮೂಡಿಸಿವು. ಈ ಏರಿಳಿತದ ಕಣ್ಣಾಮುಚ್ಚಾಲೆಯಾಟದಲ್ಲಿ ಕಂಪೆನಿಗಳ ಸಾಧನೆ, ಗುಣಮಟ್ಟ ಗಣನೆಗೆ ಬಾರದೆ ಕೇವಲ ಏರಿಳಿತದ ಉಪಯೋಗ ಮಾಡಿಕೊಳ್ಳಲಾಗುತ್ತಿದೆ.ಒಟ್ಟಾರೆ ವಾರದಲ್ಲಿ ಸಂವೇದಿ ಸೂಚ್ಯಂಕವು 42 ಅಂಶಗಳಷ್ಟು ಏರಿಕೆ ಕಂಡು ಸಮತೋಲನ ಪ್ರದರ್ಶಿಸಿದೆ. ಮಧ್ಯಮ ಶ್ರೇಣಿ ಸೂಚ್ಯಂಕ 4 ಅಂಶಗಳಷ್ಟು ಇಳಿಕೆ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 3 ಅಂಶಗಳಷ್ಟು ಏರಿಕೆ ಕಂಡಿವೆ. ವಿದೇಶಿ ವಿತ್ತೀಯ ಸಂಸ್ಥೆಗಳು ರೂ. 610 ಕೋಟಿ ಮೌಲ್ಯದ ಷೇರು ಕೊಂಡರೆ ಸ್ವದೇಶಿ ಸಂಸ್ಥೆಗಳು ರೂ. 285 ಕೋಟಿ ಮೊತ್ತದ ಷೇರು ಖರೀದಿಸಿವೆ. ಪೇಟೆಯ ಬಂಡವಾಳ ಮೌಲ್ಯವು ಹಿಂದಿನ ವಾರದ ರೂ. 62.07 ಲಕ್ಷ ಕೋಟಿಯಿಂದ ರೂ. 62.14 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಲಾಭಾಂಶ ವಿಚಾರ

ಎವಿಟಿ ನ್ಯಾಚುರಲ್ ಪ್ರಾಡಕ್ಟ್ಸ್ ಶೇ 50 (ನಿ.ದಿ. 10.4.12) ಯುನೈಟೆಡ್ ಫಾಸ್ಪರಸ್ ಶೇ 100 (ಮು.ಬೆ. ರೂ. 2), ಗೇಟ್ವೇ ಡಿಸ್ಟ್ರಿಪಾರ್ಕ್ಸ್ ಶೇ 30, ಗ್ರೀ ವ್ಸ್ ಕಾಟನ್ ಶೇ 40 (ಮು.ಬೆ. ರೂ. 2, ನಿ.ದಿ. 13.4.12).

ಬೋನಸ್ ಷೇರಿನ ವಿಚಾರ

* ಇಂಡೊಕೊ ರೆಮೆಡೀಸ್ ಕಂಪೆನಿಯು ತನ್ನ ಷೇರುದಾರರಿಗೆ 1:2ರ ಅನುಪಾತದ ಬೋನಸ್ ಪ್ರಕಟಿಸಿದೆ.ಟಿ. ಗುಂಪಿನ ಶಾಲೀನ್ ಟೆಕ್ಸ್ಟೈಲ್ಸ್ 19:1ರ ಅನುಪಾತದ ಬೋನಸ್ ವಿತರಿಸಲು 14ನೇ ಏಪ್ರಿಲ್ ನಿಗದಿತ ದಿನವಾಗಿದೆ. ಕೇವಲ ಬೋನಸ್ ಆಸೆಗೆ ಕೊಳ್ಳದೆ ಪೂರ್ಣ ವಿವರ ಪಡೆದು ನಿರ್ಧರಿಸಿರಿ.

ಮುಖಬೆಲೆ ಸೀಳಿಕೆ ವಿಚಾರ

* ಇಂಡೊಕೊ ರೆಮೆಡೀಸ್ ಕಂಪೆನಿ ಷೇರಿನ ಮುಖಬೆಲೆಯನ್ನು ರೂ. 10 ರಿಂದ ರೂ. 2ಕ್ಕೆ ಸೀಳಲು ನಿರ್ಧರಿಸಿದೆ.

* ಎವಿಟಿ ನ್ಯಾಚುರಲ್ ಪ್ರಾಡಕ್ಟ್ಸ್ ಕಂಪೆನಿ ಷೇರಿನ ಮುಖಬೆಲೆಯನ್ನು ರೂ. 10 ರಿಂದ ರೂ. 1ಕ್ಕೆ ಸೀಳಲಿದೆ.

* ಟಿ. ಗುಂಪಿನಲ್ಲಿ ವಹಿವಾಟಾಗುತ್ತಿರುವ ಅಗರ್ವಾಲ್ ಹೋಲ್ಡಿಂಗ್ಸ್ ಕಂಪೆನಿಯು 4 ರಂದು ಮುಖಬೆಲೆ ಸೀಳಿಕೆ ಪರಿಶೀಲಿಸಲಿದೆ. ಹೂಡಿಕೆದಾರರು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಈ ಕಂಪೆನಿಯ ಪ್ರವರ್ತಕರು ಕೇವಲ ಶೇ 5.65 ರಷ್ಟು, ಸಾರ್ವಜನಿಕರು ಶೇ 94.35ರ ಭಾಗಿತ್ವವಿರುವ ಕಂಪೆನಿಯ ಚಟುವಟಿಕೆಗೆ ಮುಂಚೆ ಪೂರ್ಣವಾಗಿ ಅರಿಯುವುದು ಮುಖ್ಯ.

ಹೊಸ ಷೇರಿನ ವಿಚಾರ

* ನ್ಯಾಷನಲ್ ಬಿಲ್ಡಿಂಗ್ಸ್ ಕಾರ್ಪೊರೇಷನ್ ಕಂಪೆನಿಯು ಸಾರ್ವಜನಿಕ ವಿತರಣೆಯ ಬೆಲೆಯನ್ನು ಪ್ರತಿ ಷೇರಿಗೆ ರೂ. 106 ಎಂದು ನಿಗದಿಪಡಿಸಿದೆ. ಪ್ರತಿ ಷೇರಿಗೆ ರೂ. 30 ರಂತೆ ಸಾರ್ವಜನಿಕ ವಿತರಣೆ ಮಾಡಿದ್ದ ಒಲಿಂಪಿಕ್ ಕಾರ್ಡ್ಸ್ ಕಂಪೆನಿಯು 28 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಹಕ್ಕಿನ ಷೇರಿನ ವಿಚಾರ

ಇಐಎಚ್ ಅಸೋಸಿಯೇಟೆಡ್ ಹೋಟೆಲ್ ಕಂಪೆನಿಯು ರೂ. 110 ಕೋಟಿ ಮೌಲ್ಯದ ಹಕ್ಕಿನ ಷೇರು ವಿತರಣೆಗೆ ಸಮ್ಮತಿಸಿದ್ದು ಉಳಿದ ವಿಚಾರಗಳಾದ ವಿತರಣೆಯ ಬೆಲೆ, ಅನುಪಾತ, ಸಮಯಗಳನ್ನು ಮುಖ್ಯ ನಿರ್ವಾಹಕರೊಂದಿಗೆ ಚರ್ಚಿಸಿ ನಿಗದಿಪಡಿಸಲು ಸಮಿತಿ ರಚಿಸಲಾಗಿದೆ. ಇತ್ತೀಚೆಗೆ ಹಕ್ಕಿನ ಷೇರು ವಿತರಿಸಿದ ಆರೊ ಕೋಟೆಡ್ ಪ್ರಾಡಕ್ಟ್ಸ್, ಗಾಯಿತ್ರಿ ಪ್ರಾಜೆಕ್ಟ್ಸ್, ಆರ್. ಡ್ರಗ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ಲಿ. ಕಂಪೆನಿಗಳು ಹೊಸ ಷೇರನ್ನು ವಹಿವಾಟಿಗೆ ನೋಂದಾಯಿಸಿಕೊಂಡಿದೆ.

ಡನ್ಲಪ್ ಇಂಡಿಯಾ ಅಮಾನತು

ಈ ಕಂಪೆನಿಯನ್ನು ಸಮಾಪನಗೊಳಿಸುವಿಕೆಗೆ ಕೊಲ್ಕತ್ತಾ ಉಚ್ಚ ನ್ಯಾಯಾಲಯವು ತಾತ್ಕಾಲಿಕ ಆದೇಶ ನೀಡಿ ಅಧಿಕೃತ ಸಮಾಪಕರಿಗೆ ಕಾರ್ಯನಿರ್ವಹಿಸಲು ಆದೇಶಿಸಿದೆ. ವಹಿವಾಟಿನಿಂದ ಗೊಂದಲ ನಿರ್ಮಾಣವಾಗದಿರಲಿ ಎಂಬ ಕಾರಣಕ್ಕಾಗಿ ಈ ಕಂಪೆನಿಯ ಷೇರುಗಳನ್ನು ವಹಿವಾಟಿನಿಂದ ಅಮಾನತುಗೊಳಿಸಿದೆ.

ವಹಿವಾಟಿಗೆ ಬಿಡುಗಡೆ

ನಾಗಾರ್ಜುನ ಫರ್ಟಿಲೈಸರ್ಸ್ನಿಂದ ಬೇರ್ಪಡಿಸಿದ್ದ ನಾಗಾರ್ಜುನ ಆಯಿಲ್ ರಿಫೈನರೀ ಲಿ. 28 ರಿಂದ `ಬಿ~ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ. ರೂ. 1ರ ಮುಖಬೆಲೆಯ ಈ ಷೇರಿನ ಬೆಲೆಯು ರೂ. 6.35 ರಲ್ಲಿ ವಾರಾಂತ್ಯ ಕಂಡಿದೆ. 29 ರಿಂದ ಈ ಕಂಪೆನಿಯ ಷೇರುಗಳು ಬಾಂಬೆ ಸ್ಟಾಕ್ಎಕ್ಸ್ಚೇಂಜ್ನ ಮೂಲಾಧಾರಿತ ಪೇಟೆಯಲ್ಲಿ 9000 ಷೇರುಗಳ ಗುಚ್ಚದಲ್ಲಿ ವಹಿವಾಟಿಗೆ ಅನುಮತಿಸಲಾಗಿದೆ.

ಷೇರು ಖರೀದಿ ಒಪ್ಪಂದ

ಪಿಬಿಎಂ ಪೊಲಿಟೆಕ್ಸ್ ಕಂಪೆನಿಯು ಉಷಾ ಸಾಂಘವಿರವರಿಂದ 4,35,999 ಯುರೊಟೆಕ್ಸ್ ಇಂಡಸ್ಟ್ರೀಸ್ ಅಂಡ್ ಎಕ್ಸ್ಪೋರ್ಟ್ಸ್ ಲಿ. ಕಂಪೆನಿಯ ಷೇರನ್ನು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಪಿ.ಬಿ.ಎಂ. ಪೊಲಿಟೆಕ್ಸ್ ಕಂಪೆನಿಯು ಯುರೊಟೆಕ್ಸ್ ಇಂಡಸ್ಟ್ರೀಸ್ನ ಪ್ರವರ್ತಕ ಕಂಪೆನಿಯೂ ಆಗಿದೆ.

ಆದ್ಯತೆ ಷೇರು ವಿತರಣೆ

ಪಂಜಾಬ್ ಅಂಡ್ ಸಿಂದ್ ಬ್ಯಾಂಕ್ 1.11 ಕೋಟಿ ಷೇರನ್ನು ರೂ. 75.46 ರಂತೆ; ಬ್ಯಾಂಕ್ ಆಫ್ ಬರೋಡ ರೂ. 840.11 ರಂತೆ 1.95 ಕೋಟಿ ಷೇರನ್ನು ಎಲ್ಐಸಿ ಆಫ್ ಇಂಡಿಯಾಕ್ಕೂ ಬ್ಯಾಂಕ್ ಆಫ್ ಮಹಾರಾಷ್ಟ್ರವು 8.37 ಕೋಟಿ ಷೇರನ್ನು ಕೇಂದ್ರ ಸರ್ಕಾರಕ್ಕೆ ನೀಡಿ ಸಂಪನ್ಮೂಲ ಸಂಗ್ರಹಿಸಿದೆ.

ವಾರದ ಪ್ರಶ್ನೆ

`ಗಾರ್~ ಎಂದರೇನು? ಇದರ ಪ್ರಭಾವವು ಯಾವ ರೀತಿ ಇದೆ ತಿಳಿಸಿರಿ.

ಉತ್ತರ: `ಗಾರ್~ ಎಂದರೆ `ಜನರಲ್ ಆಂಟಿ ಅವಾಯಿಡನ್ಸ್ ರೂಲ್ಸ್~ ಎಂದು. ಇದು ಏಪ್ರಿಲ್ ಒಂದರಿಂದ ಜಾರಿಯಾಗಲಿದೆ. ಇದರ ಮುಖ್ಯ ಉದ್ದೇಶ ವಿದೇಶದಲ್ಲಿರುವ ಕಪ್ಪು ಹಣದ ಉತ್ಪತ್ತಿಯನ್ನು ತಡೆಯುವುದಾಗಿದೆ. ತೆರಿಗೆ ಪಾವತಿಸುವುದನ್ನು ತಪ್ಪಿಸಿಕೊಳ್ಳುವುದನ್ನು ನಿಯಂತ್ರಿಸಲು ಜಾರಿಯಾದ ನಿಯಮಾವಳಿ ಇದಾಗಿದೆ. ವಿದೇಶಿ ವಿತ್ತೀಯ ಸಂಸ್ಥೆಗಳು ಪೇಟೆ ನಿಯಂತ್ರಕ `ಸೆಬಿ~ಯೊಂದಿಗೆ ನೋಂದಾಯಿಸಿಕೊಳ್ಳದಿದ್ದರೆ, ನೋಂದಾಯಿತ ವಿದೇಶಿ ವಿತ್ತೀಯ ಸಂಸ್ಥೆಗಳು ಮತ್ತು ಅವುಗಳ ಉಪಖಾತೆಗಳ ಮೂಲಕ ಭಾರತೀಯ ಷೇರುಪೇಟೆಯಲ್ಲಿ ಷೇರುಗಳನ್ನು ಕೊಳ್ಳುವಿಕೆಗೆ ಅನುವು ಮಾಡಿಕೊಡುವ ವಿಧವೇ ಪಾರ್ಟಿಸಿಪೇಟರಿ ನೋಟ್ಸ್ ಆಗಿದೆ. ಹೆಚ್ಚಿನ ಪಾರ್ಟಿಸಿಪೇಟರಿ ನೋಟ್ಸ್ ಹೂಡಿಕೆಯು ಡಬ್ಬಲ್ ಟ್ಯಾಕ್ಸೇಷನ್ ತಪ್ಪಿಸುವ ಒಪ್ಪಂದ ಮಾಡಿಕೊಂಡಂತಹ ದೇಶಗಳಿಂದ, ವಿಶೇಷವಾಗಿ ಮಾರಿಷಸ್ ಮೂಲಕ ಹರಿದುಬರುತ್ತಿರುವುದು, ಈ ಅವಕಾಶದ ಲಾಭವನ್ನು ದುರುಪಯೋಗಿಸಿಕೊಳ್ಳುವುದನ್ನು ತಪ್ಪಿಸಲು ಈ `ಗಾರ್~ ನಿಯಮಗಳು ಸಹಕಾರಿಯಾಗಿರುತ್ತವೆ. ಯಾವುದೇ ವಹಿವಾಟಿಗೆ ಮುಖ್ಯ ಉದ್ದೇಶ, ಅಸಹಜ ಚಟುವಟಿಕೆ, ವ್ಯವಹಾರಿಕ ಅಂಶ, ಮತ್ತು ದುರುಪಯೋಗ ಮತ್ತು ದುರುದ್ದೇಶಗಳೆಂಬ ನಾಲ್ಕು ಅಂಶಗಳಲ್ಲಿ ಯಾವುದಾದರೂ ಒಂದು ಅಂಶ ಅನ್ವಯಿಸಿದಲ್ಲಿ `ಗಾರ್~ ನಿಯಮ ಅನ್ವಯಿಸುತ್ತದೆ. ಈ `ಗಾರ್~ ನಿಯಮದಡಿ ಇರುವ ತೆರಿಗೆಯ ಗೊಂದಲದ ಕಾರಣ ಪ್ರಮುಖ ವಿದೇಶಿ ವಿತ್ತೀಯ ಸಂಸ್ಥೆಗಳು ಪಾರ್ಟಿಸಿಪೇಟರಿ ನೋಟ್ಸ್ ಮಾರಾಟವನ್ನು ತಡೆಹಿಡಿದಿವೆ. ಮಾರಿಷಸ್ ಮೂಲದ ನಿಧಿಗಳು ಒತ್ತಡವನ್ನೆದುರಿಸುವ ಸಾಧ್ಯತೆಯಿಂದ ಸಂಬಂಧಿತ ಕಂಪೆನಿ ಷೇರುಗಳು ಮಾರಾಟದ ಒತ್ತಡಕ್ಕೊಳಗಾಗಿವೆ.

98863-13380
(ಮಧ್ಯಾಹ್ನ 4.30ರ ನಂತರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.