ವಹಿವಾಟಿನ ಒತ್ತಡದಲ್ಲಿ ಷೇರುಪೇಟೆಗಳು, ಚಿನ್ನಿವಾರ ಪೇಟೆಗಳು ನಲುಗಿ ಕ್ಷೀಣಿಸುತ್ತಿವೆ. ಆದಕಾರಣ ವಹಿವಾಟುದಾರರ ಕಣ್ಣು ಕರೆನ್ಸಿ ಪೇಟೆಗಳ ಮೇಲಿದ್ದು ಹೆಚ್ಚಿನ ಏರುಪೇರನ್ನು ರೂಪಾಯಿಯ ಮೌಲ್ಯದಲ್ಲಿ ಕಾಣುವಂತಾಗಿದೆ. ಕಳೆದ ವಾರ ಹೆಚ್ಚಿನ ಭಾಗ ಮುಂಜಾನೆ ರೂಪಾಯಿಯ ಬೆಲೆ ಡಾಲರ್ ವಿರುದ್ಧ ಏರಿಕೆ ಪ್ರದರ್ಶಿಸಿ ಮಧ್ಯಾಹ್ನದ ನಂತರ ಕುಸಿತವನ್ನು ಕಾಣಬಹುದಾಗಿತ್ತು.

ಆದರೆ, ಶುಕ್ರವಾರದಂದು ಆರಂಭದಲ್ಲಿ ರೂಪಾಯಿಯ ಕುಸಿತ ಹೆಚ್ಚಾಗಿ ನಂತರ ಸ್ವಲ್ಪ ಏರಿಕೆ ಕಂಡು ರೂ 60-23 ರಂತೆ (ಪ್ರತಿ ಡಾಲರ್ಗೆ) ಅಂತ್ಯ ಕಂಡಿತು. ಈ ರೀತಿಯ ಏರಿಳಿತಗಳು ಕಂಪೆನಿಗಳ ಷೇರುಗಳ ಮೇಲೆ ಪ್ರಭಾವ ಬೀರುತ್ತವೆ. ಈ ವಾರದ ಗುರುವಾರದಂದು ಹಿಂದೂಸ್ಥಾನ್ ಯೂನಿಲಿವರ್ ಕಂಪೆನಿಯ ಷೇರು ಹಿಂಕೊಳ್ಳುವ ಯೋಜನೆಯು ಅಂತ್ಯಗೊಂಡಿದ್ದು, ಕಂಪೆನಿ ಕೊಳ್ಳಬೇಕಿದ್ದ 48.70 ಕೋಟಿ ಷೇರಿಗೆ ಬದಲಾಗಿ 33 ಕೋಟಿ ಷೇರು ಲಭ್ಯವಾಗಿದೆ.

ಈ ಕಾರಣದಿಂದಾಗಿ ಶುಕ್ರವಾರದಂದು, ಷೇರಿನ ಬೆಲೆಯು ರೂ 631.95ರ ಗರಿಷ್ಠ ದಾಖಲಿಸಿ ರೂ 609.15 ರಲ್ಲಿ ಅಂತ್ಯಗೊಂಡಿತು. ಮೂಲಾಧಾರಿತ ಪೇಟೆಯಲ್ಲಿನ ದರವು ಕುಸಿತವಿದ್ದು, ಶೂನ್ಯ ಮಾರಾಟಗಾರರ ಮೇಲೆ ಹೆಚ್ಚಿನ ಒತ್ತಡ ಹೇರಲು ಈ ಏರಿಕೆ ಪ್ರದರ್ಶನವಾಗಿರುವ ಸಾಧ್ಯತೆಯೂ ಇದೆ. ಮುಂದೆ ಜೂನ್ ಅಂತ್ಯದ ಫಲಿತಾಂಶವು ಹೆಚ್ಚು ಪ್ರಭಾವಿಯಾಗಿರುತ್ತದೆ.

ವಾರದ ವಿಶೇಷ
ಮ್ಯೂಚುವಲ್ ಫಂಡ್ನಲ್ಲಿ ಮಾರ್ಚ್ 2013ರ ಅಂತ್ಯದಲ್ಲಿ ತೊಡಗಿಸಿರುವ ಹಣವು ಒಟ್ಟು ರೂ 8.46 ಲಕ್ಷ ಕೋಟಿಯಾಗಿದ್ದು, ಇದು ದಾಖಲೆಯ ಮಟ್ಟವಾಗಿದೆ.

ಇದರಲ್ಲಿ ಹೆಚ್ಚಿನ ಪಾತ್ರ ಸಾಲ ಪತ್ರ ನಿಧಿಯ ಕೊಡುಗೆಯಾಗಿದೆ. ಸಾಲ ಪತ್ರ ನಿಧಿಯ ಮೂಲಕ ಹರಿದು ಬಂದ ಮೊತ್ತವು ರೂ1.12 ಲಕ್ಷ ಕೋಟಿಯಷ್ಟಾಗಿದೆ.

ಮುಂಬೈ ಷೇರು ವಿನಿಮಯ ಕೇಂದ್ರದ ಬಂಡವಾಳ ಮೌಲ್ಯವು ರೂ 64 ಲಕ್ಷ ಕೋಟಿಗೆ ಹೆಚ್ಚಿದ್ದು, ವಹಿವಾಟಾಗುತ್ತಿರುವ ರೀತಿ ಮಾತ್ರ ಬಹಳ ನಿರುತ್ಸಾಹ ಹಂತವಾಗಿದೆ.

ಕೇವಲ ಒಂದೂವರೆಯಿಂದ ಎರಡು ಸಾವಿರ ಕೋಟಿಯಷ್ಟು, ದಿನ ನಿತ್ಯ, ವಹಿವಾಟಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಜನ ಸಾಮಾನ್ಯರು ಕಳೆದು ಕೊಳ್ಳುತ್ತಿರುವ ನಂಬಿಕೆಯಾಗಿದೆ.

ಇದುವರೆಗೂ ಉತ್ತಮ ಹೂಡಿಕೆ ಎಂದು ಬಿಂಬಿತವಾಗಿ ಹೂಡಿಕೆ ಮಾಡಿದ್ದ ಕಂಪೆನಿಗಳಾದ ಗೀತಾಂಜಲಿ ಜೆಮ್ಸ ಒಂದು ತಿಂಗಳಲ್ಲಿ ರೂ 560 ರಿಂದ ರೂ 183ರ ವರೆಗೂ ಕುಸಿದಿದೆ.

ಸಾರ್ವಜನಿಕ ವಲಯದ ಕಂಪೆನಿಯಾದ ಎಂ.ಎಂ.ಟಿ.ಸಿ. ರೂ 220 ರಿಂದ ರೂ 79ರ ಸಮೀಪಕ್ಕೆ ಕುಸಿದಿದೆ. ಅಪೋಲೋ ಟೈರ್ಸ್ ರೂ 93ರ ಹಂತದಿಂದ ರೂ 60ರ ಸಮೀಪವಿದೆ. ಹಿಂದೂಸ್ಥಾನ್ ಕಾಪರ್ ರೂ99ರ ಹಂತದಿಂದ ರೂ65ರ ಸಮೀಪಕ್ಕೆ ಕುಸಿದಿದೆ.

ಇದೇ ರೀತಿ ಜೆ.ಪಿ. ಇನ್ಫ್ರಾಟೆಕ್, ಪವರ್ ಫೈನಾನ್ಸ್, ವೊಕಾರ್ಡ್, ಅಲ್ಲಹಾಬಾದ್ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಜಿಂದಾಲ್ಸ್ಟೀಲ್ ಅಂಡ್ ಪವರ್ ಮುಂತಾದ ಬಲಿಷ್ಠ ಕಂಪೆನಿಗಳು ಪೇಟೆಯಲ್ಲಿ ಮೌಲ್ಯ ಕಳೆದುಕೊಂಡು ಕಳಾಹೀನವಾಗಿ ಹೂಡಿಕೆದಾರರ ಶಾಪಕ್ಕೆ ಗುರಿಯಾಗಿವೆ.

ಇನ್ನು ಅಮೂಲ್ಯವಾದ ಹೂಡಿಕೆ ಎಂಬ ಪಟ್ಟಿ ಹೊಂದಿರುವ ಚಿನ್ನಾ - ಬೆಳ್ಳಿಗಳು ವಹಿವಾಟಿನ ಭರದಲ್ಲಿ ಮೌಲ್ಯ ಕಳೆದುಕೊಳ್ಳುತ್ತಿವೆ. ಈಗ ಹೊಸದಾಗಿ ಈ ಭರಾಟೆಗೆ ಬಲಿಯಾಗುತ್ತಿರುವುದು ನಮ್ಮ ಕರೆನ್ಸಿ ರೂಪಾಯಿ. ಕೇವಲ ವಿದೇಶಿ ಹೂಡಿಕೆಗೆ ಕೆಂಪು ಹಾಸು ಹಾಕಿರುವ ಸರ್ಕಾರದ ಕ್ರಮಗಳು ಉತ್ತಮ ಫಲಿತಾಂಶ ನೀಡದೆ ಮತ್ತಷ್ಟು ವೇಗವಾದ ಏರಿಳಿತಗಳಿಗೆ ಕಾರಣವಾಗುತ್ತಿವೆ.

ಇದರ ಫಲಿತಾಂಶ ಸ್ಥಳೀಯವಾಗಿ ಜನಸಾಮಾನ್ಯರ ಬೆಂಬಲ ಲಭ್ಯವಾಗಿದೆ. ಇರುವುದರಲ್ಲಿ ಸುರಕ್ಷಿತ ಹೂಡಿಕೆ ಎಂದು ಬ್ಯಾಂಕ್ ಡಿಪಾಜಿಟ್, ಸಾಲ ಪತ್ರ ನಿಧಿಯತ್ತ ಹೂಡಿಕೆ ಹರಿಯುತ್ತಿದೆ. ಇದು ಹೆಗ್ಗಳಿಕೆಯ ವಿಷಯವಲ್ಲ.

ಯವುದೇ ನಿಯಮ, ಜಾರಿಯಾಗುವುದಕ್ಕಿಂತ ಮುಂಚೆ ಅದರ ಪರಿಣಾಮದ ಪರಿಶೀಲನೆ ಇದ್ದಲ್ಲಿ ಮಾತ್ರ ಅದು ಜವಾಬ್ದಾರಿಯುತವಾಗುತ್ತದೆ. ಎಂ.ಎಂ.ಟಿ.ಸಿ. ಕಂಪೆನಿಯ ಷೇರಿನ ಬೆಲೆ ರೂ 210ರ ಸಮೀಪವಿದ್ದಾಗ ರೂ60ರ ಕನಿಷ್ಠ ಬೆಲೆಯಲ್ಲಿ ಅಫರ್ ಫಾರ್ ಸೇಲ್ನಲ್ಲಿ ಷೇರು ವಿತರಿಸಿದ್ದು ಅತ್ಯಂತ ಬೇಜವಾಬ್ದಾರಿಯ ಕ್ರಮ.

ಇದರ ಹಿಂದಿನ ರಹಸ್ಯ ತನಿಖೆಗೆ ಗುರಿಪಡಿಸಬೇಕಾಗಿದೆ. ಇದೇ ಬೆಲೆಯಲ್ಲಿ ಸಾರ್ವಜನಿಕ ವಿತರಣೆಯಾಗಿದ್ದಲ್ಲಿ ಸಣ್ಣ ಹೂಡಿಕೆದಾರರ ಆಗಮನದಿಂದ ಪೇಟೆಗಳು ಸುಭದ್ರತೆಯತ್ತ ತಿರುಗುತ್ತಿದ್ದವು.

ಈ ಆಫರ್ ಫಾರ್ ಸೇಲ್ನಲ್ಲಿ ವಿತರಿಸಿದ ಷೇರಿಗೆ ಅಪಮೌಲ್ಯದಲ್ಲಿ ವಿತರಣೆ ಅವಕಾಶವಿತ್ತೆ? ಈ ಕ್ರಮದಿಂದ ಕಂಪೆನಿಯಲ್ಲಿ ಹೆಚ್ಚಿನ ಷೇರು ಹೊಂದಿರುವ ಸರ್ಕಾರದ ಆಸ್ತಿ ಮೌಲ್ಯ ಆವಿಯಾಗಿದೆ. ಇಂತಹ ನಿರ್ಧಾರಗಳು ಪರಿಸ್ಥಿತಿ ಸುಧಾರಿಸಲು ಸಹಕಾರಿಯಾಗುವ ಬದಲು ಮಾರಕವಾಗುವುದರಲ್ಲಿ ಸಂಶಯವೇ ಇಲ್ಲ.

ಬ್ಯಾಂಕಿಂಗ್ ಲೈಸೆನ್ಸ್ಗಾಗಿ ಅರ್ಜಿ ಸಲ್ಲಿಸಿದ ಕಂಪೆನಿಗಳಲ್ಲಿ ಎಲ್ ಅಂಡ್ ಟಿ ಫೈನಾನ್ಸ್ ಹೋಲ್ಡಿಂಗ್ಸ್, ಎಲ್.ಐ.ಸಿ. ಹೌಸಿಂಗ್ ಫೈನಾನ್ಸ್, ಐಡಿಎಫ್ಸಿ., ಐಎಫ್ಸಿಐ ಮಾರಾಟದ ಒತ್ತಡದಿಂದ ಬೆಲೆ ಕುಸಿತ ಕಂಡವು.

ಆದಿತ್ಯ ಬಿರ್ಲಾನುವೊ, ರಿಲಯನ್ಸ್ ಕ್ಯಾಪಿಟಲ್, ಬಜಾಜ್ ಫೈನ್ಸರ್ವ್ಗಳು ಏರಿಕೆ ಪಡೆದವು. ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ2ಕ್ಕೆ ಸೀಳಲಿರುವ ಏಷಿಯನ್ ಪೇಂಟ್ಸ್ ಕೊಳ್ಳುವಿಕೆಯಿಂದ ಏರಿಕೆ ಕಂಡಿತು.

ನಕಾರಾತ್ಮಕ ಅಂಶಗಳ ಒತ್ತಡದಿಂದ ಅತೀವ ಕುಸಿತ ಕಂಡಿದ್ದು ರ್ಯಾನ್ಬಾಕ್ಸಿ ಲ್ಯಾಬ್, ಯುಎಸ್ಎಫ್ಡಿಎ ಮತ್ತು ಆಸ್ಟ್ರೇಲಿಯನ್ ನಿಯಂತ್ರಕರು ಕಂಪೆನಿಯ ಉತ್ಪಾದನೆ ಕ್ರಮಬದ್ಧವೆಂಬ ಪ್ರಕಟಣೆ ಷೇರಿನ ಬೆಲೆಯನ್ನು ಗಗನಕ್ಕೇರಿಸಿತು. ಯುನೈಟೆಡ್ ಬ್ರಿವರೀಸ್ ಈ ವಾರ ರೂ 750ರ ಹಂತದಿಂದ ರೂ 922 ರವರೆಗೂ ಚಿಮಿತ್ತು ರೂ 855 ರಲ್ಲಿ ವಾರಾಂತ್ಯ ಕಂಡಿತು.

ಒಟ್ಟಾರೆ ವಾರದಲ್ಲಿ ಎಸ್ ಅಂಡ್ ಪಿ ಸಂವೇದಿ ಸೂಚ್ಯಂಕವು 100 ಅಂಶಗಳಷ್ಟು ಏರಿಕೆ ಪಡೆದು ಮಧ್ಯಮ ಶ್ರೇಣಿ ಸೂಚ್ಯಂಕ 27 ಅಂಶಗಳಷ್ಟು ಹಾಗೂ ಕೆಳಮಧ್ಯಮ ಶ್ರೇಣಿ ಸೂಚ್ಯಂಕ 48 ಅಂಶಗಳಷ್ಟು ಏರಿಕೆಗೆ ಕಾರಣವಾಯಿತು.

ವಿದೇಶಿ ವಿತ್ತೀಯ ಸಂಸ್ಥೆಗಳ ಚಟುವಟಿಕೆಯು ಮಿಶ್ರಿತವಾಗಿ ಒಟ್ಟಾರೆ ರೂ 600 ಕೋಟಿ ಮೊತ್ತದ ಷೇರುಗಳನ್ನು ಮಾರಾಟ ಮಾಡಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ರೂ 372 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಷೇರುಪೇಟೆ ಬಂಡವಾಳ ಮೌಲ್ಯವು ಹಿಂದಿನ ವಾರದ ರೂ 64.05 ಲಕ್ಷ ಕೋಟಿಯಿಂದ ರೂ 64.31 ಲಕ್ಷ ಕೋಟಿಗೆ ಹೆಚ್ಚಾಗಿದೆ.

ಆಫರ್ ಫಾರ್ ಸೇಲ್
ಹಿಂದೂಸ್ಥಾನ್ ಕಾಪರ್ ಲಿ. ಕಂಪೆನಿಯಲ್ಲಿನ 3,71,19,152 ಷೇರನ್ನು ರೂ 70 ರಂತೆ, ಪ್ರತಿ ಷೇರಿಗೆ, ಈ ವಿಶೇಷ ಗವಾಕ್ಷಿಯಲ್ಲಿ 3 ರಂದು ಮಾರಾಟ ಮಾಡಲಾಗಿದೆ.

ಬಿಜಿಆರ್ ಎನರ್ಜಿ ಸಿಸ್ಟಮ್ಸ ಕಂಪೆನಿಯ ಪ್ರವರ್ತಕರು. 21,75,364 ಷೇರುಗಳನ್ನು ಈ ವಿಶೇಷ ಗವಾಕ್ಷಿಯ ಮೂಲಕ ಪ್ರತಿ ಷೇರಿಗೆ ರೂ118 ರಂತೆ, ಸಾರ್ವಜನಿಕ ಭಾಗಿತ್ವ ಹೆಚ್ಚಿಸಿಕೊಳ್ಳಲು 5 ರಂದು ಮಾರಾಟ ಮಾಡಿದ್ದಾರೆ.

ಸುಂದರಂ ಕ್ಲೇಟನ್ ಲಿ. ಕಂಪೆನಿಯಲ್ಲಿ ಸಾರ್ವಜನಿಕ ಭಾಗಿತ್ವದ ಮಿತಿಗಾಗಿ 12,64,501 ಷೇರನ್ನು ಇನ್ಸ್ಟಿಟ್ಯೂಷನಲ್ ಪ್ಲೇಸ್ಮೆಂಟ್ ಪ್ರೋಗ್ರಾಂ ಅಡಿಯಲ್ಲಿ ಅರ್ಹ ವಿತ್ತೀಯ ಸಂಸ್ಥೆಗಳಿಗೆ 5 ರಂದು ವಿತರಣೆ ಮಾಡಿದೆ.

ಹೊಸ ಷೇರಿನ ವಿಚಾರ
ಕ್ವೆಸ್ಟ್ ಸಾಫ್ಟೆರ್ (ಇಂಡಿಯಾ) ಲಿ. ಕಂಪೆನಿಯು ಕಾಂಟಿನೆಂಟಲ್ ಕಂಟ್ರೋಲ್ ಲಿ. ಕಂಪೆನಿಯ ಸಾಫ್ಟ್ವೇರ್ ವಿಭಾಗವನ್ನು ಬೇರ್ಪಡಿಸಿ ರಚಿಸಲಾಗಿದ್ದು ಪ್ರತಿ 2 ಷೇರಿಗೆ 1 ಕ್ವೆಸ್ಟ್ ಸಾಫ್ಟೆಕ್ (ಇಂಡಿಯಾ) ಷೇರು ನೀಡಲಾಗಿದೆ. ಈ ಕಂಪೆನಿಯು ಜುಲೈ 5 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಫ್ಯುಚರ್ ವೆಂಚರ್ಸ್ ಇಂಡಿಯಾ ಲಿ. ಕಂಪೆನಿಯ ಷೇರಿನ ಬಂಡವಾಳವನ್ನು ಶೇ 40 ರಷ್ಟು ಕಡಿತಗೊಳಿಸಿದ ಕಾರಣ, ಷೇರಿನ ಮುಖಬೆಲೆಯು ರೂ10ರಿಂದ ರೂ6ಕ್ಕೆ ಕಡಿತಗೊಂಡಿದೆ ಈ ಹೊಸ ಅವತಾರದ ಷೇರುಗಳು 4 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ವಹಿವಾಟಿಗೆ ಬಿಡುಗಡೆ
ಡಂಕನ್ಸ್ ಇಂಡಸ್ಟ್ರೀಸ್ ಕಂಪೆನಿಯು ಷೇರು ಬಂಡವಾಳವನ್ನು ಶೇ 60 ರಷ್ಟು ಕಡಿತ ಮಾಡಿ ಅಂದರೆ ಷೇರಿನ ಮುಖಬೆಲೆಯನ್ನು ರೂ 10 ರಿಂದ ರೂ4ಕ್ಕೆ ಇಳಿಸಿ, ರೂ4ರ 5 ಷೇರುಗಳನ್ನು ಕ್ರೋಡಿಕರಿಸಿ ರೂ10ರ ಮುಖಬೆಲೆಯ 2 ಷೇರು ನೀಡಿದೆ ಈ ಹೊಸ ಅವತಾರದ ಷೇರುಗಳು. 5 ರಿಂದ ಟಿ ಗುಂಪಿನಲ್ಲಿ ವಹಿವಾಟಿಗೆ ಬಿಡುಗಡೆಯಾಗಿವೆ.

ಬೋನಸ್ ಷೇರಿನ ವಿಚಾರ
ಸಿಸಿಎಲ್ ಪ್ರಾಡಕ್ಟ್ಸ್ ಕಂಪೆನಿ 1:1ರ ಅನುಪಾತದ ಬೋನಸ್ ಪ್ರಕಟಿಸಿದೆ.

ಲಾರ್ಸನ್ ಅಂಡ್ ಟೋಬ್ರೊ ಕಂಪೆನಿ ಪ್ರಕಟಿಸಿರುವ 1:2ರ ಅನುಪಾತದ ಬೋನಸ್ಗೆ 13ನೇ ಜುಲೈ ನಿಗದಿತ ದಿನವಾಗಿದೆ.

ಸಿಂಕಾಂ ಫಾರ್ಮುಲೇಷನ್ಸ್ ಇಂಡಿಯಾ ಕಂಪೆನಿಯು 8 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

ಪೊಲಿ ಮೆಡಿಕ್ಯೂರ್ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್ಗೆ 10ನೇ ಜುಲೈ ನಿಗದಿತ ದಿನವಾಗಿದೆ.

ಶಿಲ್ಪಾ ಮೆಡಿಕಲ್ ಕಂಪೆನಿ ವಿತರಿಸಲಿರುವ 1:2ರ ಅನುಪಾತದ ಬೋನಸ್ಗೆ 18ನೇ ಜುಲೈ ನಿಗದಿತ ದಿನವಾಗಿದೆ.

ಸಹ್ ಪೆಟ್ರೋಲಿಯಂ ಕಂಪೆನಿ ವಿತರಿಸಲಿರುವ 23:19ರ ಬೋನಸ್ಗೆ ಜುಲೈ 10 ನಿಗದಿತ ದಿನವಾಗಿದೆ.

ನಷ್ಟದಲ್ಲಿರುವ ಫೈನ್ ಕರ್ವ್ ಫೈನಾನ್ಶಿಯಲ್ ಸರ್ವಿಸಸ್ 6:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. ಇದು `ಟಿ' ಗುಂಪಿನ ಕಂಪೆನಿ.

ಪಿರಿಯಾಡಿಕ್ ಕಾಲ್
ಕೆಲವು ಕಂಪೆನಿಯ ಷೇರುಗಳಲ್ಲಿ ವಹಿವಾಟಾಗುವುದು ಅತಿ ವಿರಳ. ಅಂತಹ ಕಂಪೆನಿಗಳಲ್ಲಿ ಹಿತಾಸಕ್ತರ ಚಟುವಟಿಕೆಯನ್ನು ತಡೆಯಲೋಸುಗ `ಸೆಬಿ' ಏಪ್ರಿಲ್ 8 ರಿಂದ 2050 ಕಂಪೆನಿಗಳನ್ನು `ಸಮಯಬದ್ಧ ಹರಾಜು ಪ್ರಕ್ರಿಯೆ' ಯೋಜನೆ ಜಾರಿಗೊಳಿಸಿ ಇದರ ಪ್ರಕಾರ ಪ್ರತಿಯೊಂದು ಗಂಟೆಯನಂತರ ನೊಂದಾಯಿತ ಆರ್ಡರ್ಗಳಲ್ಲಿ ಕೆಲವು ವಹಿವಾಟಾಗಿ ಪರಿವರ್ತನೆಯನ್ನು ಬೆಲೆಯಾಧಾರಿತವಾಗಿ, ಕಾಣುವವು. ಉಳಿದ ಅಪರಿವರ್ತಿತ ಆರ್ಡರ್ಗಳು ರದ್ದಾಗಿ, ಮಾರಾಟ ಅಥವಾ ಕೊಳ್ಳುವವರು ಹೊಸದಾಗಿ ಆರ್ಡರ್ನ್ನು ನೊಂದಾಯಿಸಿ ಕೊಳ್ಳಬೇಕಾಗುತ್ತದೆ.

ಈ ಹೊಸ ಪದ್ಧತಿಗೆ ಜುಲೈ 8 ರಿಂದ 274 ಕಂಪೆನಿಗಳನ್ನು ಸೇರಿಸಲಾಗಿದೆ. ಇವುಗಳಲ್ಲಿ ಕಂಪೆನಿಗಳಾದ ಕ್ಯಾಂಫರ್ ಅಂಡ್ ಅಲೈಸ್ ಪ್ರಾಡಕ್ಟ್ಸ್, ಡೆಕ್ಕನ್ ಸೀಮೆಂಟ್, ಜೆ.ಎಂ.ಎಂ. ಫೌಡ್ಲರ್, ಮೆಡ್ಟ್ ಇಂಡಿಯಾ, ಹಿಂದೂಜಾ ಫೌಂಡ್ರೀಸ್, ಅಲ್ಟ್ರಾಮರೈನ್ ಪಿಗ್ಮೆಂಟ್ಸ್, ಆಲ್ಕೈಲ್ ಅಮೈನ್ಸ್, ವಾರನ್ಟೀ ಗಾಂಧಿ ಸ್ಪೆಷಲ್ ಟ್ಯೂಬ್ಸ್, ಇ. ಮೋಟಾರ್ಸ್, ಝಾಡಿಯಕ್ ಕ್ಕಾತಿಂನ್, ಸಯ್ಯಾಜಿ ಹೋಟೆಲ್ಸ್ ರಿದ್ಧಿ ಸಿದ್ಧಿ ಗ್ಲೂಕೊಬಯಲ್ಸ್, ರಾಣೆ (ಮದ್ರಾಸ್) ನಂತಹ ಉತ್ತಮ ಕಂಪೆನಿಗಳೂ ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.