ರಾಬರ್ಟ್ ಸಿಯಾಲ್ಡಿನಿ ಎಂಬಾತ ಇನ್ಫ್ಲುಯೆನ್ಸ್ ಎಂಬ ಸುಂದರ ಪುಸ್ತಕ ಬರೆದಿದ್ದಾರೆ. ಅದರಲ್ಲಿ ನಾವು ಹೇಗೆ, ಯಾವಾಗ, ಯಾರಿಂದ ಪ್ರಭಾವಿತರಾಗುತ್ತೇವೆ ಎಂಬುದನ್ನು ವಿವರಿಸುತ್ತ ಇದನ್ನು ವ್ಯಾಪಾರದಲ್ಲಿ ಹೇಗೆ ಬಳಸಿಕೊಳ್ಳುತ್ತಾರೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ.

ಈಗ ಒಂದು ಪ್ರಸಂಗ ಊಹಿಸಿಕೊಳ್ಳಿ. ಇಬ್ಬರು ಸ್ನೇಹಿತರು ಒಂದು ಬಟ್ಟೆಯ ಅಂಗಡಿಯನ್ನಿಟ್ಟುಕೊಂಡಿದ್ದಾರೆ. ಅವರ ಹೆಸರು ರಾಮ ಮತ್ತು ಜೋಸೆಫ್ ಎಂದಿಟ್ಟುಕೊಳ್ಳೋಣ. ಅದರಲ್ಲಿ ರಾಮ ಬಟ್ಟೆ ಹೊಲಿಯುತ್ತಾನೆ, ಜೋಸೆಫ್ ಬಟ್ಟೆ ಮಾರುತ್ತಾನೆ. ರಾಮ ಸ್ವಲ್ಪ ದೂರದಲ್ಲಿ, ಅಂಗಡಿಯ ಒಳಭಾಗದಲ್ಲಿ ಕೆಲಸ ಮಾಡಿದರೆ, ಜೋಸೆಫ್ ಮುಂದೆಯೇ ಕೌಂಟರ್ನಲ್ಲಿ ಕುಳಿತು ವ್ಯಾಪಾರ ಮಾಡುತ್ತಾನೆ. ಆಗ ಒಬ್ಬ ಗಿರಾಕಿ ಬರುತ್ತಾನೆ. ತಕ್ಷಣ ಜೋಸೆಫ್ ಎದ್ದು ವಿಚಾರಿಸುತ್ತಾನೆ. ಗಿರಾಕಿಗೆ ಒಂದು ಒಳ್ಳೆಯ ಸೂಟ್ ಖರೀದಿಸಬೇಕಾಗಿದೆ. ಜೋಸೆಫ್ ಅವನ ಮುಂದೆ ಹತ್ತಾರು ಸೂಟ್ಗಳನ್ನು ತೋರಿಸುತ್ತಾನೆ. ಅದರಲ್ಲಿಯ ನೀಲಿ ಉಲ್ಲನ್ ಸೂಟು ಗಿರಾಕಿಗೆ ಇಷ್ಟವಾಗುತ್ತದೆ ಎನ್ನಿಸುತ್ತದೆ.

ಆತ ಅದನ್ನು ಹಿಡಿದುಕೊಂಡು ಕನ್ನಡಿಯ ಮುಂದೆ ನಿಂತು ಅದರ ಚೆಂದವನ್ನು, ಅದರಲ್ಲಿ ತನ್ನ ಆಕಾರವನ್ನು ನೋಡಿ ಸಂತೋಷಪಡುತ್ತಿದ್ದ. ನಂತರ ಜೋಸೆಫ್ನನ್ನು ಕೇಳಿದ, ‘ಈ ಸೂಟಿನ ಬೆಲೆ ಎಷ್ಟು?’ ತಕ್ಷಣ ಜೋಸೆಫ್ ಕೂಗಿದ, ‘ರಾಮಾ, ಈ ರೇಮಂಡ್, ನೀಲಿ ಉಲ್ಲನ್ ಸೂಟಿನ ಬೆಲೆ ಎಷ್ಟು?’ ಒಳಗಿನಿಂದ ರಾಮ ಉತ್ತರಿಸಿದ, ‘ಅದೇ, ಬೆಲೆ ಹದಿನೈದು ಸಾವಿರ ರೂಪಾಯಿ’. ಗಿರಾಕಿಗೆ ಆ ಬೆಲೆ ಹೆಚ್ಚೆನಿಸಿತು. ಆದರೆ ರಾಮನ ಮಾತು ಜೋಸೆಫ್ನಿಗೆ ಸರಿಯಾಗಿ ಕೇಳಿಸಿರಲಿಕ್ಕಿಲ್ಲ. ಮತ್ತೆ ಕೂಗಿದ, ‘ರಾಮಾ, ಈ ಸೂಟಿನ ಬೆಲೆ ಎಷ್ಟೋ?’.

ರಾಮ ಮತ್ತಷ್ಟು ಜೋರಾಗಿ ಕೂಗಿದ, ‘ಹೇ ಕಿವುಡಾ, ಆದರ ಬೆಲೆ ಹದಿನೈದು ಸಾವಿರ’. ಜೋಸೆಫ್, ‘ಯಾಕಷ್ಟು ಜೋರಾಗಿ ಅರಚುತ್ತಿ, ಕೇಳಿಸಿತು ಬಿಡು. ಸ್ವಾಮಿ ಈ ಸೂಟಿನ ಬೆಲೆ ಹತ್ತು ಸಾವಿರವಂತೆ’ ಎಂದ. ಗಿರಾಕಿಗೆ ಆಶ್ಚರ್ಯವಾಯಿತು. ರಾಮ ಹದಿನೈದು ಸಾವಿರ ಎಂದು ಎರಡು ಬಾರಿ ಕೂಗಿದ್ದನ್ನು ಕೇಳಿದ್ದಾನೆ. ಆದರೆ, ಈ ಕಿವುಡನಿಗೆ ಅದು ಹತ್ತು ಸಾವಿರವೆಂದು ಕೇಳಿಸಿದೆ. ಆ ಗಿರಾಕಿ ಏನು ಮಾಡುತ್ತಾನೆ ಗೊತ್ತೇ? ಜೋಸೆಫ್ ಮತ್ತೊಮ್ಮೆ ರಾಮನನ್ನು ಕೇಳಿ ಬೆಲೆ ಗೊತ್ತು ಮಾಡುವ ಮೊದಲೇ ಹತ್ತು ಸಾವಿರ ರೂಪಾಯಿ ಕೊಟ್ಟು ಸೂಟು ತೆಗೆದುಕೊಂಡು ಜಾಗ ಖಾಲಿಮಾಡುತ್ತಾನೆ.

ಸೂಟು ತುಂಬ ಕಡಿಮೆದರದಲ್ಲಿ ದೊರೆಯಿತೆಂದು ಸಂತೋಷಪಡುತ್ತಾನೆ. ಮನೆ ಮಂದಿಗೆಲ್ಲ ತನ್ನ ಬುದ್ಧಿವಂತಿಕೆಯ ಟಾಂ, ಟಾಂ ಮಾಡುತ್ತಾನೆ. ಆದರೆ, ಅವನಿಗೆ ತಾನು ಹೋದ ಮೇಲೆ ಅಂಗಡಿಯಲ್ಲಿ ನಡೆದ ವ್ಯವಹಾರ ಗೊತ್ತಿಲ್ಲ. ಗಿರಾಕಿ ಹೊರಗೆ ಹೋದೊಡನೆ ಜೋಸೆಫ್ನ ಕಿವುಡು ಮಾಯವಾಗುತ್ತದೆ. ಆತ ರಾಮನಿಗೆ ಹೇಳುತ್ತಾನೆ, ‘ಬಕರಾ, ಹಳ್ಳಕ್ಕೆ ಬಿತ್ತು. ಎಂಟು ಸಾವಿರ ರೂಪಾಯಿಯ ಸೂಟಿಗೆ ಹತ್ತು ಸಾವಿರ ಕಕ್ಕಿ ಹೋಯಿತು’. ಇಬ್ಬರೂ ನಗುತ್ತಾರೆ. ಮತ್ತೊಂದು ಗಿರಾಕಿ ಬಂದಾಗ ಜೋಸೆಫ್ನಿಗೆ ಮತ್ತೆ ಕಿವುಡುತನ ಬರುತ್ತದೆ.

ಇದು ಯಾಕೆ ಹೀಗಾಗುತ್ತದೆ ಎಂದರೆ ಯಾವುದೇ ವಸ್ತುವಿನ ನಿಜವಾದ ಬೆಲೆ ನಮಗೆ ತಿಳಿದಿಲ್ಲ. ಒಬ್ಬರು ಅದರ ಬೆಲೆಯನ್ನು ತುಂಬ ಎತ್ತರದಲ್ಲಿ ಹೇಳಿದಾಗ ಮತ್ತೊಬ್ಬರು ಅದನ್ನು ಸ್ವಲ್ಪ ಕೆಳಗಿಳಿಸಿ ಹೇಳಿದರೆ, ತುಂಬ ಅಗ್ಗವಾಯಿತಲ್ಲ ಎನ್ನಿಸುತ್ತದೆ. ಈ ತತ್ವದ ಮೇಲೆಯೇ ಇಡೀ ವ್ಯಾಪಾರದ ಡಿಸ್ಕೌಂಟ್ ಪದ್ಧತಿ ನಿಂತಿದೆ. ಹಬ್ಬದ ಸಮಯದಲ್ಲಿ 30 ಪರ್ಸೆಂಟ್, ಐವತ್ತು ಪರ್ಸೆಂಟ್ ಆಫ್ ಎಂದು ಜಾಹೀರಾತು ಬಂದಾಗ ಬೆಲೆ ತುಂಬ ಕಡಿಮೆಯಾಯಿತೆಂದು ಹರ್ಷಪಟ್ಟುಕೊಳ್ಳುತ್ತೇವೆ.

ಯಾರಾದರೂ ಅಂಗಡಿಯನ್ನು ದಿವಾಳಿಯಾಗಲು ತೆರೆದಿರುತ್ತಾರೆಯೇ? ಏರಿಸಿ, ಇಳಿಸಿದ ದರ ಆಕರ್ಷಕವಾಗಿ ಕಾಣುತ್ತದೆ, ಕೊಳ್ಳುವಂತೆ ಮಾಡುತ್ತದೆ. ಇದೇ ರೀತಿ ಮನುಷ್ಯರ ಬೆಲೆಯೂ ಬದಲಾಗುತ್ತದೆ. ಅದೇ ಸಾಮಾನ್ಯ ಮನುಷ್ಯ, ಎತ್ತರದ ಸ್ಥಾನಗಳಿಗೆ ಹೋದಂತೆ ಅವನ ಬೆಲೆ ಹೆಚ್ಚುತ್ತ ಹೋಗುತ್ತದೆ. ಆ ಸ್ಥಳದಿಂದ ಯಾವುದೋ ಕಾರಣಕ್ಕೆ ಕುಸಿತವಾದರೆ ಅದಕ್ಕೂ ಡಿಸ್ಕೌಂಟ್ ಆಗುತ್ತದೆ. ಹಾಗೆ ಡಿಸ್ಕೌಂಟ್ ಆಗದಂತೆ ಬದುಕನ್ನು ನಡೆಸಿದರೆ ಚೆಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.