ಹೀಗೆ ದಾಸತ್ವದ ಬಿಡುಗಡೆಗೆ ಬೆಲೆಯನ್ನು ಘೋಷಿಸಿ ಬೋಧಿಸತ್ವ, ಮಕ್ಕಳನ್ನು ಪರ್ಣಕುಟಿಗೆ ಕರೆದೊಯ್ದ. ಅಲ್ಲಿ ಕಮಂಡಲದಲ್ಲಿ ನೀರನ್ನು ತೆಗೆದುಕೊಂಡು, ಬ್ರಾಹ್ಮಣನ್ನು ಹತ್ತಿರಕ್ಕೆ ಕರೆದು, ‘ಈ ನನ್ನ ದಾನ ಸರ್ವಜ್ಞ ಜ್ಞಾನದ ಪ್ರತ್ಯಯವಾಗಲಿ’ ಎಂದು ಪ್ರಾರ್ಥಿಸಿ. ಇಬ್ಬರೂ ಮಕ್ಕಳನ್ನು ಬ್ರಾಹ್ಮಣನಿಗೆ ದಾನ ಮಾಡಿಬಿಟ್ಟ. ‘ಹೇ ಬ್ರಾಹ್ಮಣ, ನನ್ನ ನೂರು, ಸಾವಿರ, ಲಕ್ಷ ಪುತ್ರರಿಗಿಂತ, ಈ ಸರ್ವಜ್ಞ ದಾನ ನನಗೆ ತುಂಬ ಪ್ರಿಯವಾದದ್ದು’ ಎಂದ. ಹೀಗೆ ಸಿವಿರಾಷ್ಟ್ರದ ರಾಜಕುಮಾರ, ಕುಮಾರಿಯರನ್ನು ದಾನ ಮಾಡಿದಾಗ ಪೃಥ್ವಿ ಕಂಪಿಸಿತು, ಭಯಂಕರ ಸದ್ದಾಯಿತು. ಸಿವಿರಾಜ್ಯದಲ್ಲಿ ಎಲ್ಲರಿಗೆ ರೋಮಾಂಚನವಾಯಿತು. ಅವರು ಕಾರಣ ತಿಳಿಯದೆ ತತ್ತರಿಸಿದರು.

ಬೋಧಿಸತ್ವ ದಾನದ ನಂತರ ಮಕ್ಕಳನ್ನು ಕರುಣೆಯಿಂದ ನೋಡತೊಡಗಿದ. ಆಗ ದಾನ ಪಡೆದ ಬ್ರಾಹ್ಮಣ ಕ್ರೂರನಾಗಿ ವರ್ತಿಸತೊಡಗಿದ. ತನ್ನ ಅಲುಗಿನಂತಿದ್ದ ಕೆಲವೇ ಹಲ್ಲುಗಳನ್ನು ಬಳಸಿಕೊಂಡು ಹತ್ತಿರವಿದ್ದ ಬಳ್ಳಿಯನ್ನು ಕತ್ತರಿಸಿದ. ಒಂದೇ ಬಳ್ಳಿಯಿಂದ ಕುಮಾರನ ಬಲಗೈಯನ್ನು ಕೃಷ್ಣಾಜಿನಳ ಎಡಗೈಗೆ ಬಿಗಿಯಾಗಿ ಕಟ್ಟಿದ. ಅದೇ ಬಳ್ಳಿಯ ಮತ್ತೊಂದು ತುದಿಯನ್ನು ಛಡಿಯನ್ನಾಗಿ ಮಾಡಿಕೊಂಡು, ಬೋಧಿಸತ್ವನ ಎದುರಿಗೇ ಅವರನ್ನು ರಪರಪನೇ ಹೊಡೆಯುತ್ತ, ದರದರನೇ ಎಳೆದುಕೊಂಡು ನಡೆದ. ಬೋಧಿಸತ್ವದ ಮುಖದ ಮೇಲೆ ಯಾವ ವಿಕಾರವೂ ಕಾಣಲಿಲ್ಲ.

ಮಕ್ಕಳಿಗೆ ಹೀಗೆ ಹೊಡೆದಾಗ ಪೆಟ್ಟು ಬಿದ್ದಲ್ಲೆಲ್ಲ ಚರ್ಮ ಸುಲಿಯುತ್ತಿತ್ತು. ರಕ್ತ ಜಿನುಗುತ್ತಿತ್ತು. ಏಟು ತಿಂದು ಬೀಳುವಾಗ ಮಕ್ಕಳು ಒಬ್ಬರಿಗೊಬ್ಬರು ಆಧಾರ ಕೊಡುತ್ತಿದ್ದರು. ಅವರನ್ನು ಹೀಗೆ ಹೊಡೆಯುವಾಗ ಒಮ್ಮೆ ಮುದುಕ ಬ್ರಾಹ್ಮಣ ತಾನೇ ಜಾರಿ ಬಿದ್ದ. ಮಕ್ಕಳ ಕೈಗೆ ಕಟ್ಟಿದ ಕಟ್ಟು ಬಿಚ್ಚಿಹೋಯಿತು. ತಕ್ಷಣವೇ ಅವರಿಬ್ಬರೂ ಅಳುತ್ತಾ, ಓಡಿ ಬೋಧಿಸತ್ವನ ಬಳಿಗೆ ಮರಳಿ ಬಂದರು. ನೀರು ತುಂಬಿದ ಕಣ್ಣುಗಳಿಂದ ತಂದೆಯನ್ನು ನೋಡುತ್ತ ಜಾಲಿಕುಮಾರ ಹೇಳಿದ, ‘ತಂದೆ, ಅಮ್ಮ ಮನೆಯಲ್ಲಿ ಇಲ್ಲ. ಆಕೆ ಇಲ್ಲದಾಗ ನಮ್ಮನ್ನು ಆ ಬ್ರಾಹ್ಮಣನ ವಶಕ್ಕೆ ಕೊಡುತ್ತಿದ್ದೀರಿ. ಅಮ್ಮ ಬರುವವರೆಗೆ ನಮ್ಮನ್ನು ಕೊಡಬೇಡಿ. ನಾವು ಅಮ್ಮನನ್ನು ನೋಡಿದ ಮೇಲೆ ಕೊಡಿ. ಆಮೇಲೆ ಬೇಕಾದರೆ ಬ್ರಾಹ್ಮಣ ನಮ್ಮನ್ನು ಹೊಡೆಯಲಿ, ಕೊಲ್ಲಲಿ ಅಥವಾ ಮಾರಲಿ. ಅಪ್ಪಾ, ಆ ಬ್ರಾಹ್ಮಣ ಭಯಂಕರನಾಗಿದ್ದಾನೆ. ಅಗಲವಾದ ಕಾಲು, ಕೊಳೆತ ಉಗುರುಗಳು, ಉದ್ದವಾದ ನೇತಾಡುವ ತುಟಿ, ತೊಟ್ಟಿಕ್ಕುತ್ತಿರುವ ಜೊಲ್ಲು, ಮುರಿದ ಮೂಗು, ಗಡಿಗೆಯಂಥ ಹೊಟ್ಟೆ, ತಾಮ್ರವರ್ಣದ ಮುಖ, ಕೆಂಪು ಕೂದಲು, ಸುಕ್ಕುಗಟ್ಟಿದ ಚರ್ಮ, ಕೆಂಪಾದ ಕಣ್ಣುಗಳು, ಬೆನ್ನು ಬಾಗಿದ ಸೊಂಟ, ಕಟಕಟ ಸಪ್ಪಳ ಮಾಡುವ ಮೂಳೆಗಳು, ಜಿಂಕೆಯ ಚರ್ಮವನ್ನು ಹೇಗೆ ಹೇಗೂ ಸುತ್ತಿಕೊಂಡು ಬ್ರಾಹ್ಮಣ ಬಹಳ ಕ್ರೂರಿಯಾಗಿದ್ದಾನೆ. ಈತ ನಿಜವಾಗಿಯೇ ಯಾಚಕನೋ ಅಥವಾ ಮನುಷ್ಯರ ರಕ್ತ ಮಾಂಸಗಳನ್ನು ತಿನ್ನುವ ಯಕ್ಷನೋ, ಪಿಶಾಚಿಯೋ? ಅಪ್ಪಾ, ನೀವು ನೋಡುತ್ತಲೇ ಇದ್ದೀರಿ. ನಿಮ್ಮ ಹೃದಯ ನಮ್ಮ ವಿಷಯದಲ್ಲಿ ಕಬ್ಬಿಣದಂತೆ ಕಠೋರವಾಗಿದೆ. ಆ ಧನ ಲೋಭಿ ಬ್ರಾಹ್ಮಣ ನಮ್ಮನ್ನು ಪಶುಗಳಂತೆ ಹೊಡೆಯುತ್ತಿದ್ದಾನೆ. ನಾನು ಹೇಗಾದರೂ ತಡೆದುಕೊಂಡೇನು. ಆದರೆ ನನ್ನ ಪ್ರೀತಿಯ ತಂಗಿ ಕೃಷ್ಣೆ ಇದನ್ನು ಸಹಿಸಲಾರಳು. ಆಕೆ ಇಲ್ಲೇ ಇರಲಿ, ನಾನು ಮಾತ್ರ ಅವನೊಂದಿಗೆ ಹೋಗುತ್ತೇನೆ” ಎಂದು ಬೇಡಿಕೊಂಡ. ಆದರೆ ಸಹನೆಯ ಮೂರ್ತಿಯಂತಿದ್ದ ಬೋಧಿಸತ್ವ ಯಾವ ಮಾತನ್ನೂ ಹೇಳಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.