ಕೊಚ್ಚಿ: ಬೆಂಗಳೂರು ಫುಟ್‌ಬಾಲ್ ಕ್ಲಬ್ ತಂಡವು ಗುರುವಾರ ಇಲ್ಲಿ ಆರಂಭವಾದ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ನಿರಾಶೆ ಅನುಭವಿಸಿತು.
ಸುನಿಲ್ ಚೆಟ್ರಿ ಗೈರುಹಾಜರಿಯಲ್ಲಿ ಕಣಕ್ಕಿಳಿದ ಬಿಎಫ್‌ಸಿ ತಂಡವು 1–2ರಿಂದ ಕೇರಳ ಬ್ಲಾಸ್ಟರ್ ತಂಡದ ಎದುರು ಮಣಿಯಿತು.
ಬಿಎಫ್‌ಸಿ ತಂಡದ ಕೆಝೈ ವೀನ್‌ಡ್ರಾಪ್ ಅವರು 52ನೇ ನಿಮಿಷದಲ್ಲಿ ನೀಡಿದ ‘ಉಡುಗೊರೆ’ ಗೋಲಿನಿಂದ ಆತಿಥೇಯ ತಂಡವು 1–0 ಮುನ್ನಡೆ ಗಳಿಸಿತು. 69ನೇ ನಿಮಿಷದಲ್ಲಿ ಕೇರಳದ ಅಡ್ರಿಯನ್ ಲೂನಾ ಗೋಲು ಗಳಿಸಿದರು. ಇದರಿಂದಾಗಿ 2 ಗೋಲುಗಳ ಮುನ್ನಡೆ ಪಡೆಯಿತು.
90 ನೇ ನಿಮಿಷದಲ್ಲಿ ತಿರುಗೇಟು ಕೊಟ್ಟ ಬಿಎಫ್‌ಸಿಯ ಕರ್ಟಿಸ್ ಮೇನ್ ಗೋಲು ಹೊಡೆದರು. ಇದರಿಂದ ಸೋಲಿನ ಅಂತರ ಕಡಿಮೆಯಾಯಿತಷ್ಟೇ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.