ದೇಶದ ಪ್ರಜೆಗಳನ್ನು ಉದ್ದೇಶಿಸಿ ಈಚೆಗೆ ದೂರದರ್ಶನದ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸ ಘೋಷವಾಕ್ಯವನ್ನು ಬಳಸಿದರು. ‘ನಾಗರಿಕ ದೇವೋಭವ’ ಎನ್ನುವ ಮೂಲಕ ಅವರು ದೇಶದ ಪ್ರಜೆಗಳನ್ನು ದೇವರಿಗೆ ಸಮಾನರೆಂದು ಕರೆದರು. ಜಿಎಸ್ಟಿ ಸುಧಾರಣಾ ಕ್ರಮಗಳನ್ನು ಘೋಷಿಸುವ ಸಂದರ್ಭವನ್ನು ಅವರು ಜಾಗತಿಕ ಮಟ್ಟದಲ್ಲಿನ ಬೆಳವಣಿಗೆಗಳ ಬಗ್ಗೆ ಅವಲೋಕಿಸಲು, ಭಾರತವು ಆತ್ಮನಿರ್ಭರ ಆಗುವುದಕ್ಕೆ ಗಮನ ನೀಡಬೇಕಿರುವುದರ ಅಗತ್ಯವನ್ನು ಹೇಳಲು ಬಳಸಿದರು.

ಸುಂಕದ ವಿಚಾರವಾಗಿ ಅಮೆರಿಕ ಮತ್ತು ಭಾರತದ ನಡುವೆ ಸಂಘರ್ಷ ತೀವ್ರವಾದ ಹಿನ್ನೆಲೆಯಲ್ಲಿ ಈ ವಿಚಾರವು ಹೆಚ್ಚಿನ ಮಹತ್ವ ಪಡೆಯುತ್ತದೆ. ದೇಶದ ಆಂತರಿಕ ಶಕ್ತಿಗಳ ಮೇಲೆ ಹೆಚ್ಚು ಗಮನ ಹರಿಸಬೇಕು, ದೇಶದ ಕೆಲವು ಯೋಜನೆಗಳನ್ನು ಆ ದಿಸೆಯಲ್ಲಿ ಮರುಹೊಂದಿಸಬೇಕು ಎಂಬುದಕ್ಕೆ ದೇಶದ ನಾಯಕತ್ವವು ಗಮನಹರಿಸಿದೆ ಎಂಬುದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸಲಾಗಿದೆ. ಇದಕ್ಕೆ ಇನ್ನಷ್ಟು ಹೆಚ್ಚು ಗಮನ ನೀಡಬೇಕಿದೆ. ಬಹಳ ಶಕ್ತಿಶಾಲಿಯಾದ ಮಾತುಗಳನ್ನು ಎಲ್ಲರಿಗೂ ಒಪ್ಪಿಗೆಯಾಗುವಂತೆ ವಾಸ್ತವಕ್ಕೆ ತರುವುದು ಹೇಗೆ? ಈ ಬರಹದ ಕೇಂದ್ರಬಿಂದು ಇದು.

ವಿಕಸಿತ ಭಾರತ ನಿರ್ಮಾಣಕ್ಕಾಗಿನ ಸಿದ್ಧತೆಗಳ ಕೇಂದ್ರದಲ್ಲಿ ಪ್ರಜೆಗಳು ಇದ್ದಾರೆ ಎಂದಾದರೆ, ಈ ಪರಿವರ್ತನೆಯಲ್ಲಿ ಮುಂಚೂಣಿ ಪಾತ್ರವನ್ನು ಅವರು ನಿರ್ವಹಿಸುವಂತಾಗಲು ನಾವು ಸಜ್ಜುಗೊಳಿಸಬೇಕಿರುವ ವ್ಯವಸ್ಥೆ ಹೇಗಿರಬೇಕು? ಈ ವಿಚಾರದ ಬಗ್ಗೆ ಅವಲೋಕನ ನಡೆಸಿದಾಗ ಭಗವದ್ಗೀತೆಯ ಜನಪ್ರಿಯ ಸಾಲುಗಳು ನೆನಪಿಗೆ ಬರುತ್ತವೆ. ಅದರಲ್ಲಿ ಭಗವಂತ ಶ್ರೀಕೃಷ್ಣನು ಅರ್ಜುನನಿಗೆ ಹೀಗೆ ಸಲಹೆ ನೀಡುತ್ತಾನೆ: ‘ಏನೆಲ್ಲ ಆಗಿದೆಯೋ ಅವೆಲ್ಲವೂ ಒಳ್ಳೆಯದಕ್ಕೆ ಆಗಿವೆ. ಈಗ ಆಗುತ್ತಿರುವುದು ಒಳ್ಳೆಯದಕ್ಕಾಗಿಯೇ. ಭವಿಷ್ಯದಲ್ಲಿ ಆಗುವುದು ಕೂಡ ಒಳ್ಳೆಯದಕ್ಕಾಗಿಯೇ’. ಕೃಷ್ಣನ ಈ
ಮಾತುಗಳು ಭಾರತದ ಪರಿವರ್ತನೆಯನ್ನು ಕೂಡ ಪ್ರತಿಫಲಿಸುತ್ತವೆ.

ಸಮಕಾಲೀನ ಜಾಗತಿಕ ಸಂದರ್ಭದಲ್ಲಿ ಭಾರತದ ಇರುವಿಕೆಗೆ ಸಂಬಂಧಿಸಿದ ಚರ್ಚೆಯನ್ನು ಗಮನಿಸುವಾಗ, ನಾವು ತಳಮಟ್ಟದಿಂದ ಪರಿಶೀಲಿಸಲು ಮುಂದಾಗಬೇಕಾಗುತ್ತದೆ. ಪ್ರಜೆಗಳನ್ನು ದೇವರ ಸಮಕ್ಕೆ ಏರಿಸಬೇಕು ಎಂದಾದರೆ, ಈ ಪ್ರಜೆಗಳು ತಮ್ಮ ದೇಶವನ್ನು ಹೇಗೆ ಕಾಣಬೇಕು? 1992ರಲ್ಲಿ ಮೊದಲ ಬಾರಿಗೆ ವಿದೇಶಕ್ಕೆ ತೆರಳಿದ್ದಾಗ ನಡೆದಿದ್ದ ಒಂದು ಘಟನೆಯು ಈ ಲೇಖಕನಿಗೆ ಸ್ಪಷ್ಟವಾಗಿ ನೆನಪಿದೆ. ‘ಭಾರತಕ್ಕೆ ಭವಿಷ್ಯವಿದೆಯೇ’ ಎಂಬ ಪ್ರಶ್ನೆಯು ಆಗಾಗ ಕೇಳುತ್ತಿತ್ತು. ಆದರೆ, ಈ ಲೇಖಕ ಈ ವರ್ಷ ವಿದೇಶಕ್ಕೆ ತೆರಳಿದ್ದಾಗ ‘ಭಾರತಕ್ಕೆ ಭವಿಷ್ಯವಿದೆ’ ಎಂಬ ಮಾತು ಕೇಳಿಸಿತು. ಮೊದಲ ಮಾತು, ಮೂರು ದಶಕಗಳ ಹಿಂದೆ ವಿದೇಶಗಳಲ್ಲಿದ್ದ ಭಾವನೆಯನ್ನು ಹೇಳುತ್ತಿತ್ತು. ಈಗಿನ ಮಾತು, ಈಗ ಇರುವ ವಾಸ್ತವವನ್ನು ಹೇಳುತ್ತಿದೆ.

ಜಾಗತಿಕ ಭೂಪಟದಲ್ಲಿ ಭಾರತವು ಔನ್ನತ್ಯಕ್ಕೆ ಏರಿದ್ದುದು ಭಾರತದ ಜೊತೆಗಿನ ಕೊಡು–ಕೊಳ್ಳುವಿಕೆಯು ಹೆಚ್ಚುತ್ತಿರುವುದರಲ್ಲಿಯೂ ಕಾಣಿಸುತ್ತಿದೆ. ಈಚೆಗೆ ಈ ಲೇಖಕ ವಿದೇಶಕ್ಕೆ ಹೋಗಿದ್ದಾಗ ಸ್ಥಳೀಯರೊಬ್ಬರು ಸಿಕ್ಕಿದ್ದರು. ‘ನಾನು ಭಾರತದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು. 1990ರ ದಶಕದಲ್ಲಿ ಈ ಮಾತು ಕೇಳಲು ಆಗುತ್ತಿರಲಿಲ್ಲ. ಆದರೆ, ಈಗ ಇಂತಹ ಮಾತುಗಳು ಸಾಮಾನ್ಯವಾಗಿವೆ. ವಿದೇಶಗಳಲ್ಲಿನ ಜನ ಈಗ ಇನ್ಫೊಸಿಸ್, ವಿಪ್ರೊ, ಟಾಟಾ, ರಿಲಯನ್ಸ್, ಅದಾನಿ, ಭಾರ್ತಿ, ಕೋಟಕ್ ಮತ್ತು ಬಿರ್ಲಾದಂತಹ ಭಾರತದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದ ಸರ್ಕಾರಿ ಸ್ವಾಮ್ಯದ ಮುಂಚೂಣಿ ಕಂಪನಿಗಳು ಕೈಗೆತ್ತಿಕೊಂಡ ಯೋಜನೆಗಳಲ್ಲಿ ಕೆಲಸ ಮಾಡಲು ಭಾರತೀಯರು ವಿದೇಶಗಳಲ್ಲಿ ನೆಲೆ ಕಂಡುಕೊಳ್ಳುವುದು ಈಗ ಅಪರೂಪವೇನೂ ಅಲ್ಲ. ದೇಶದ ಈ ಔದ್ಯಮಿಕ ಸಂಸ್ಥೆಗಳು ವಿದೇಶಗಳಲ್ಲಿ ಅಸ್ತಿತ್ವ ಹೊಂದಿರುವುದು ಜಾಗತಿಕ ಮಟ್ಟದಲ್ಲಿ ನಮ್ಮ ಇರುವಿಕೆಗೆ ಬಲ ನೀಡುವ ಕೆಲಸ ಮಾಡುತ್ತದೆ.

ಹೀಗಿದ್ದರೂ, ಇಲ್ಲಿ ಒಂದಿಷ್ಟು ಎಚ್ಚರಿಕೆಯ ಮಾತುಗಳನ್ನು ಆಡಬೇಕಾಗುತ್ತದೆ. ಏಕೆಂದರೆ ಇಲ್ಲಿ ಇರುವ ಸಂಕಥನವು ಭಾರತದ ಪ್ರಜೆಗಳ ಗೌರವಾರ್ಹತೆಗೆ ಸಂಬಂಧಿಸಿದ್ದು, ಅವರನ್ನು ‘ದೈವತ್ವಕ್ಕೆ’ ಏರಿಸುವುದಕ್ಕೆ ಸಂಬಂಧಿಸಿದ್ದು. ಈಚೆಗೆ ದೇಶದ ಬಹುತೇಕ ಪ್ರದೇಶಗಳನ್ನು ಒಳಗೊಂಡು ನಡೆದ ಒಂದು ಅಧ್ಯಯನದ ಮೂಲಕ ಎರಡು ಅಂಶಗಳು ಗೊತ್ತಾದವು. ನಾವು ರಫ್ತಿನ ಮೇಲೆ ಗಮನ ನೀಡುತ್ತಿರುವ ಹೊತ್ತಿನಲ್ಲೇ, ಅದರ ಬಗ್ಗೆ ಗಮನ ನೀಡುತ್ತಲೇ ದೇಶಿ ಮಾರುಕಟ್ಟೆಗಳನ್ನು ಬಲಪಡಿಸುವುದರ ಮಹತ್ವವನ್ನು ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರು ಹೇಳಿದರು. ಅಲ್ಲದೆ, ಜಾಗತಿಕ ಮಟ್ಟದಲ್ಲಿ ನಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ವಿಪರೀತ ಆದ್ಯತೆ ನೀಡುವುದಕ್ಕಿಂತ ಹೆಚ್ಚಾಗಿ ಆಂತರಿಕ ಸವಾಲುಗಳ ಬಗ್ಗೆ ಗಮನ ನೀಡಬೇಕು ಎಂಬುದನ್ನು ಅವರು ಮುಖ್ಯವಾಗಿ ಹೇಳಿದರು. ದೇಶಿ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದಾಗ, ಅದರ ಫಲವಾಗಿ ಜಾಗತಿಕ ಮಟ್ಟದಲ್ಲಿ ನಮ್ಮ ಪ್ರತಿಷ್ಠೆಯೂ ಹೆಚ್ಚಾಗುತ್ತದೆ ಎಂಬ ಅಭಿಪ್ರಾಯವು ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರಿಂದ ವ್ಯಕ್ತವಾಯಿತು.

ದೇಶದ ಜನಸಂಖ್ಯೆಯ ಸ್ವರೂಪವನ್ನು ಗಮನದಲ್ಲಿ ಇರಿಸಿಕೊಂಡು ಜಾಗತಿಕವಾಗಿ ಸೃಷ್ಟಿಯಾಗುತ್ತಿರುವ ಅವಕಾಶಗಳು, ಸವಾಲುಗಳ ಬಗ್ಗೆ ಚರ್ಚೆ ನಡೆಯುತ್ತಿರುತ್ತದೆ. ಭಾರತದ ಜನಸಂಖ್ಯೆಯಲ್ಲಿ ಯುವಕರ ಪಾಲು ಹೆಚ್ಚಿದೆ. ಭಾರತೀಯರ ಸರಾಸರಿ ವಯಸ್ಸು ಈಗ 28.8 ವರ್ಷಗಳು. 2050ರ ಸುಮಾರಿಗೆ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುವವರಲ್ಲಿ ಶೇ 40ರಷ್ಟು ಮಂದಿ ಭಾರತ ಮೂಲದವರಾಗಿರುತ್ತಾರೆ. ಇದು ಭಾರತಕ್ಕೆ ಒಂದು ಅವಕಾಶ ಸೃಷ್ಟಿಸುತ್ತದೆ. ಆದರೆ ಆ ಪರಿಸ್ಥಿತಿಯ ಪ್ರಯೋಜನ ಪಡೆದುಕೊಳ್ಳಲು ನಾವು ಸಿದ್ಧತೆ ನಡೆಸುತ್ತಿದ್ದೇವೆಯೇ? ಇದು ನಮ್ಮ ಮುಖ್ಯ ಸವಾಲು. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ದೇಶದ ಮುಂದೆ ಇರಿಸಿ, ಅದರ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ‘ಭವಿಷ್ಯಕ್ಕಾಗಿ ನಾವು ಸಿದ್ಧತೆ ನಡೆಸುತ್ತಿದ್ದೇವೆಯೇ’ ಎಂಬ ಪ್ರಶ್ನೆ ಕೇಳಿದ್ದರು. ‘ಯಾವುದನ್ನು ಕಲಿಯಬೇಕು’ ಎಂಬ ಸ್ಥಿತಿಯಿಂದ ‘ಹೇಗೆ ಕಲಿಯಬೇಕು’ ಎಂಬ ಸ್ಥಿತಿಗೆ ಸಾಗುವುದಕ್ಕೆ ಅವರು ಒತ್ತು ನೀಡಿದ್ದರು. ಇದು ಜಾಗತಿಕ ಕಾರ್ಮಿಕ ಶಕ್ತಿಗೆ ನಮ್ಮ ದೇಶದ ಪ್ರಜೆಗಳು ಕೊಡುಗೆ ನೀಡುವುದಕ್ಕೆ ಹಾಗೂ ಅಲ್ಲಿ ಆಗುವ ಬದಲಾವಣೆಗಳಿಗೆ ಸೂಕ್ತವಾಗುವ ಬಗೆಯಲ್ಲಿ ಹೊಂದಿಕೊಳ್ಳುವುದಕ್ಕೆ ಮಹತ್ವದ್ದಾಗುತ್ತದೆ. ಎಲ್ಲ ಸಂದರ್ಭಗಳಲ್ಲಿಯೂ ತರಗತಿಗಳಿಂದ ಉತ್ತರ ಬಯಸದೆ ಸ್ವತಂತ್ರವಾಗಿ ಕಲಿಯುವುದಕ್ಕೆ ಅವರನ್ನು ಸಜ್ಜುಗೊಳಿಸುವುದು ಬಹುಮುಖ್ಯವಾಗುತ್ತದೆ.

2050ರ ವೇಳೆಗೆ ಜಗತ್ತಿನಲ್ಲಿ ಕಾರ್ಮಿಕರ ಬಲದಲ್ಲಿ ಭಾರತೀಯರ ಸಂಖ್ಯೆಯು ಅಂದಾಜು 100 ಕೋಟಿ ಇರಲಿದೆ. ಹೀಗಿರುವಾಗ ಮೂರು ಅಂಶಗಳು ಮತ್ತು ಅವುಗಳಿಗೆ ಸಂಬಂಧಿಸಿದ ಕೆಲವು ಕ್ಷೇತ್ರಗಳ ಮೇಲೆ ಗಮನ ನೀಡಬೇಕಿದೆ. ಜನಸಂಖ್ಯಾ ಸ್ವರೂಪದಲ್ಲಿ ಭಾರತ ಹೊಂದಿರುವ ಅನುಕೂಲವನ್ನು ದಕ್ಕಿಸಿಕೊಳ್ಳುವ ಅಗತ್ಯವನ್ನು ಗುರುತಿಸುವುದು, ದೇಶದ ಮಹತ್ವಾಕಾಂಕ್ಷೆಗಳಿಗೆ ಅನುಗುಣವಾಗಿ ಸ್ಪಂದಿಸುವುದು, ಆತ್ಮನಿರ್ಭರ ಭಾರತ ಗುರಿಯನ್ನು ಭಾರತದ ಮಾನಸಿಕ ವಿಮೋಚನೆಯ ದೃಷ್ಟಿಯಿಂದ ನೋಡುವುದು ಆ ಅಂಶಗಳು.

ಜನಸಂಖ್ಯಾ ಸ್ವರೂಪದ ಅನುಕೂಲವನ್ನು ನಾವು ಪಡೆದುಕೊಳ್ಳಬೇಕು ಎಂದಾದರೆ ನಮ್ಮ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಬಹಳ ಜಾಗರೂಕವಾಗಿ ಸಂಘಟಿಸಬೇಕಾಗಿದೆ. ಇದರ ಬಗ್ಗೆ ಬಹಳಷ್ಟು ಮಾತುಗಳನ್ನು ಹೇಳಲಾಗಿದೆ. ಆದರೆ ಬದಲಾವಣೆಯ ಗತಿಯು ತಳಮಟ್ಟದಲ್ಲಿ ಬಹಳ ನಿಧಾನವಾಗಿದೆ. ಕೌಶಲ, ಸಾಮರ್ಥ್ಯ ಮತ್ತು ವಾಸ್ತವ ಕಲಿಕೆಯ ಮೇಲಿನ ಗಮನವು ಸ್ಥಿರವಾಗಿರಬೇಕು, ಕಲಿಕೆಯ ಮೇಲಿನ ಪ್ರೀತಿಯಿಂದ ಅದು ಹುಟ್ಟಿರಬೇಕು.

ಉನ್ನತ ಶಿಕ್ಷಣ ವಲಯದಿಂದ ಸರ್ಕಾರಗಳು ಹಿಂದಕ್ಕೆ ಸರಿಯುತ್ತಿರುವುದು ಗೋಚರಿಸುತ್ತಿರುವಾಗ, ಖಾಸಗಿ ವಲಯ ಹಾಗೂ ಸರ್ಕಾರಿ ಸಂಸ್ಥೆಗಳ ನಡುವೆ ಅರ್ಥಪೂರ್ಣವಾದ ಪಾಲುದಾರಿಕೆಯೊಂದು ಈ ಹೊತ್ತಿನ ಅಗತ್ಯ ಎಂದು ಅನ್ನಿಸುತ್ತಿದೆ. ಯುವ ಭಾರತವು ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಹಾಗೆಯೇ ಯುವ ಭಾರತವು ಅಸಮಾನತೆಯನ್ನು ಒಳಗೊಂಡಿದೆ ಎಂಬುದೂ ಗೋಚರಿಸುತ್ತಿದೆ. ಮಹತ್ವಾಕಾಂಕ್ಷೆಗಳಿಗೆ ಸ್ಪಂದಿಸುವುದು ಹಾಗೂ ಸಾಮಾಜಿಕ ಸಮಾನತೆಯನ್ನು ಮತ್ತು ಸಾಮಾಜಿಕ ನ್ಯಾಯವನ್ನು ಖಾತರಿಪಡಿಸುವುದು ಮುಂದೆ ನಾವು ಸಾಗಬೇಕಿರುವ ಹಾದಿಯಾಗಿ ಕಾಣುತ್ತಿದೆ.

ನಾವು ಸ್ವಾತಂತ್ರ್ಯದ 100ನೇ ವರ್ಷವನ್ನು ಆಚರಿಸುವ 2047ಕ್ಕೆ ಮೊದಲು ಆತ್ಮನಿರ್ಭರ ಭಾರತ ನಿರ್ಮಾಣ ಆಗಬೇಕು ಎಂಬ ಕರೆಯು ಹಲವು ಅಂಶಗಳಲ್ಲಿ ಸ್ವಾವಲಂಬನೆಯನ್ನು ಬಯಸುತ್ತದೆ. ಹೀಗೆ ಮಾಡುವುದರಿಂದ ಪ್ರಜೆಗಳ ಸಬಲೀಕರಣವು ನಿಜವಾಗಿಯೂ ಆಗುತ್ತದೆ. ಇದರಲ್ಲಿ ಮುಖ್ಯವಾದುದು ಮನಸ್ಸನ್ನು ಮುಕ್ತವಾಗಿಸುವುದು. ಭಗವದ್ಗೀತೆಯತ್ತ ಮತ್ತೆ ಮುಖ ಮಾಡಿದರೆ, ಅರ್ಜುನನಿಗೆ ಭಗವಂತ ಶ್ರೀಕೃಷ್ಣ ಹೇಳಿದ ಮುಖ್ಯವಾದ ಮಾತೊಂದು ಕಾಣುತ್ತದೆ. ತನ್ನ ಗುರುಗಳು, ತನ್ನ ಹಿರಿಯರು, ತನ್ನ ಸಂಬಂಧಿಕರನ್ನು ಯುದ್ಧದಲ್ಲಿ ಎದುರಿಸಬೇಕೇ ಎಂಬ ಗೊಂದಲದಲ್ಲಿ ಅರ್ಜುನ ಇದ್ದಾಗ ಶ್ರೀಕೃಷ್ಣ ಅವನಿಗೆ, ಮುಂದೆ ಸಾಗಬೇಕು ಎಂದಾದರೆ ಮನಸ್ಸನ್ನು ಮುಕ್ತವಾಗಿಸಬೇಕು ಎಂಬುದನ್ನು ಹೇಳಿದ. ಸ್ವಾವಲಂಬನೆ ಅಂದರೆ ಮನಸ್ಸನ್ನು ಮುಕ್ತಗೊಳಿಸುವುದೂ ಸೇರಿದೆ. ಪ್ರಜೆಗಳನ್ನು ದೈವತ್ವಕ್ಕೆ ಏರಿಸಬೇಕು ಎಂದಾದರೆ ನಮ್ಮ ಪ್ರಮುಖ ಗಮನವು ಇದರ ಮೇಲಿರಬೇಕು.

ಕೊನೆಯಲ್ಲಿ ದೂರದೃಷ್ಟಿಯ ನಾಯಕತ್ವದ ಶಕ್ತಿ, ಆಂತರಿಕ ಅನಿವಾರ್ಯಗಳನ್ನು ಪರಿಹರಿಸಿಕೊಳ್ಳುವುದು, ನಮ್ಮ ಮೃದು ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು, ದೇಶದ ಯುವಕರು ಭವಿಷ್ಯವನ್ನು ಎದುರಿಸಲು ಸಜ್ಜಾಗಿರುವಂತೆ ಮಾಡುವುದು ದೇಶದ ಪ್ರಜೆಗಳ ಸಶಕ್ತೀಕರಣದ ಕೇಂದ್ರಭಾಗದಲ್ಲಿ ಇರುತ್ತವೆ. ಸವಾಲುಗಳನ್ನು ಪರಿಹರಿಸಿಕೊಂಡು, ಜಾಗತಿಕ ಅವಕಾಶಗಳನ್ನು ಬಳಸಿಕೊಳ್ಳುವುದಕ್ಕೆ ಇದೇ ಮಾರ್ಗ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.