ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಂದನ: ಋತುಬಂಧವಾಗುತ್ತಿದೆಯೇ? ಡಾ. ವೀಣಾ ಎಸ್. ಭಟ್ ಅವರ ಅಂಕಣ

ಡಾ. ವೀಣಾ ಎಸ್. ಭಟ್ ಅವರ ಅಂಕಣ
Published 27 ಏಪ್ರಿಲ್ 2024, 2:03 IST
Last Updated 27 ಏಪ್ರಿಲ್ 2024, 2:03 IST
ಅಕ್ಷರ ಗಾತ್ರ

ನಾನು ಎರಡು ಮಕ್ಕಳ ತಾಯಿ, ಗೃಹಿಣಿ, ವಯಸ್ಸು 51 ನನಗೆ ಈಗ ಋತುಚಕ್ರ ನಿಲ್ಲುವ ಸಮಯವೆಂದು ಅನಿಸುತ್ತಿದೆ. ಋತುಚಕ್ರ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಋತುಮತಿಯಾದ ಸಂದರ್ಭದಲ್ಲಿ ತುಂಬಾ ಯಾತನೆ ಅನುಭವಿಸುತ್ತಿದ್ದೇನೆ. ಅತಿ ತೀವ್ರರಕ್ತಸ್ರಾವ, ತೀವ್ರತಲೆನೋವು, ಕೈಕಾಲುಗಳಲ್ಲಿ ಸೆಳೆತ ಇವು ಮುಖ್ಯ ಲಕ್ಷಣಗಳು. ದೈನಂದಿನ ಕೆಲಸಗಳನ್ನು ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ನನ್ನ ಅಕ್ಕ ತಂಗಿಯರಲ್ಲಿ ವಿಚಾರಿಸಿದಾಗ ಅವರು ಕೂಡ ಹೀಗೆ ಆಗಿತ್ತು ಎಂದು ಹೇಳಿದರು. ಸಲಹೆ ನೀಡಿ. 

ವೈದೇಹಿ, ಬೆಂಗಳೂರು.

 

ವೈದೇಹಿಯವರೇ ಋತುಬಂಧದ ಅಥವಾ ಮುಟ್ಟುನಿಲ್ಲುವ ಸಮಯದಲ್ಲಿ ಮುಟ್ಟಿನ ಸಮಯದಲ್ಲಿ ವ್ಯತ್ಯಾಸವಾಗ ಬಹುದು ಅಂದರೆ ಪದೇ ಪದೇ ಮುಟ್ಟಾಗುವುದು (ಎರಡು ಮೂರುವಾರಗಳೊಳಗಾಗಿ) ಅಥವಾ ತಡವಾಗಿ ಮುಟ್ಟಾಗುವುದು ಸಹಜ. ಆದರೆ ಅತಿಯಾಗಿ ಮುಟ್ಟಿನಲ್ಲಿ ರಕ್ತಸ್ರಾವವಾಗುವುದು ಋತುಬಂಧದ ಸಮಯದಲ್ಲಿ ಅಸಹಜವಾದದ್ದು. ಅದಕ್ಕಾಗಿ ನೀವು ತಜ್ಞರಿಂದ ಸೂಕ್ತತಪಾಸಣೆಗೆ ಒಳಗಾಗಲೇ ಬೇಕು.  ಅಕ್ಕಂದಿರಿಗೆ ಆದ ಹಾಗೇ ನಿಮಗೆ ಆಗಬೇಕೆಂದೇನು ಇಲ್ಲ.

ಮುಟ್ಟಿನ ಸಮಯದಲ್ಲಾಗುವ ಅತಿರಕ್ತಸ್ರಾವದಿಂದ ನಿಮಗೆ ರಕ್ತಹೀನತೆಯಾಗಿರಬಹುದು ಮತ್ತು ರಕ್ತಹೀನತೆಯಿಂದ ಸುಸ್ತು, ತಲೆನೋವು, ಕೈಕಾಲು ಸೆಳೆತ ಇವೆಲ್ಲವೂ ಆಗುತ್ತಿದೆ ಎಂದು ನನ್ನ ಅನಿಸಿಕೆ. ನೀವು ನಿಮ್ಮ ಹತ್ತಿರದ ತಜ್ಞವೈದ್ಯರ ಸಲಹೆ ಪಡೆದು ಒಂದು ಅಲ್ಟ್ರಾಸ್ಕ್ಯಾನಿಂಗ್‌ ಪರೀಕ್ಷೆ ಮಾಡಿಸಿಕೊಳ್ಳಿ ಅದರಲ್ಲಿ ನಿಮ್ಮ ಅತಿರಕ್ತಸ್ರಾವಕ್ಕೆ ಕಾರಣವೇನೆಂಬುದು ತಿಳಿಯಬಹುದೇನೋ. ಯಾಕೆಂದರೆ ಈ ವಯಸ್ಸಿನಲ್ಲಿ ಅತಿರಕ್ತಸ್ರಾವ ಗರ್ಭಕೋಶದ ಪೈಬ್ರಾಯ್ಡ್ (ನಾರುಗಡ್ಡೆ) ಅಥವಾ ಹೆಣ್ತನದ ಹಾರ್ಮೋನುಗಳಾದ ಈಸ್ಟ್ರೋಜನ್‌ ಮತ್ತು ಪ್ರೊಜೆಸ್ಟ್ರಾನ್ ಹಾರ್ಮೋನು ಅಸಮತೋಲನಗಳಿಂದ ಗರ್ಭಕೋಶದ ಪದರ ಅತಿಯಾಗಿ ಬೆಳೆಯುವುದು (ಎಂಡೋಮೆಟ್ರಿಯಲ್ ಹೈಪರ್ ಪ್ಲೇಸಿಯಾ) ಇವುಗಳಿಂದ ಹೆಚ್ಚಾಗಿ ಅತಿರಕ್ತಸ್ರಾವ ಉಂಟಾಗುತ್ತದೆ. ನಿಮ್ಮ ರಕ್ತದ ಹಿಮೋಗ್ಲೋಬಿನ್ ಮಟ್ಟ ಎಷ್ಟಿದೆ ಎಂಬುದನ್ನು ಕೂಡಾ ಪರೀಕ್ಷಿಸಿಕೊಳ್ಳಿ. ಹಾಗೇಯೇ ಥೈರಾಯ್ಡ್ ಹಾರ್ಮೋನ್ ಮಟ್ಟವನ್ನು ಪರೀಕ್ಷಿಸಿಕೊಳ್ಳಿ. ರಕ್ತಹೀನತೆ ಇದ್ದಲ್ಲಿ ಕಬ್ಬಿಣಾಂಶದ ಮಾತ್ರೆಗಳನ್ನ ವೈದ್ಯರು ಕೊಡಬಹುದು. ಸೂಕ್ತತಪಾಸಣೆ ಹಾಗೂ ಚಿಕಿತ್ಸೆಯಿಂದ ನಿಮ್ಮ ಸಮಸ್ಯೆ ಸರಿಹೋಗುತ್ತದೆ.

Manjunath C. Bhadrashetti
Manjunath C. Bhadrashetti

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT