ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು ದಸರಾ: ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ಓಡಾಟ

Published : 25 ಸೆಪ್ಟೆಂಬರ್ 2024, 16:27 IST
Last Updated : 25 ಸೆಪ್ಟೆಂಬರ್ 2024, 16:27 IST
ಫಾಲೋ ಮಾಡಿ
Comments

ಮೈಸೂರು: ದಸರಾ ವೇಳೆ ಸಾರಿಗೆ ಇಲಾಖೆಯ ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ಗಳು ನಗರದಲ್ಲಿ ಒಂದು ಗಂಟೆ ಓಡಾಡಲಿದ್ದು, ಮೇಲಿನ ಆಸನಕ್ಕೆ ₹500 ಹಾಗೂ ಕೆಳಗೆ ₹250 ದರ ನಿಗದಿಪಡಿಸಲಾಗಿದೆ.‌

ಹೋಟೆಲ್‌ ಮಯೂರ ಹೊಯ್ಸಳದಿಂದ ಬಸ್‌ ಹೊರಟು ಹಳೇ ಡಿಸಿ ಕಚೇರಿ, ಕ್ರಾಫರ್ಡ್‌ ಭವನ, ಓರಿಯೆಂಟಲ್‌ ಸೆಂಟ್ರಲ್‌ ಲೈಬ್ರೆರಿ, ರಾಮಸ್ವಾಮಿ ವೃತ್ತ, ಸಂಸ್ಕೃತ ಪಾಠಶಾಲಾ, ಅರಮನೆ ದಕ್ಷಿಣ ದ್ವಾರ, ಜಯ ಮಾರ್ತಾಂಡ ಸರ್ಕಲ್ ಗೇಟ್‌, ಹಾರ್ಡಿಂಜ್‌ ವೃತ್ತ, ಕೆ.ಆರ್‌.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೈದ್ಯಕೀಯ ಕಾಲೇಜು, ರೈಲ್ವೆ ನಿಲ್ದಾಣದ ಮೂಲಕ ಮಯೂರ ಹೊಯ್ಸಳ ಹೋಟೆಲ್ ತಲುಪಲಿದೆ.

ಸಂಜೆ 6.30, ರಾತ್ರಿ 8 ಹಾಗೂ 9.30ಕ್ಕೆ ಬಸ್‌ಗಳು ಹೊರಡಲಿದ್ದು, ಇಲಾಖೆಯ ವೆಬ್‌ಸೈಟ್‌ www.kstdc.coನಲ್ಲಿ ಮುಂಗಡ ಸೀಟ್ ಕಾಯ್ದಿರಿಸಬಹುದು. ಮಾಹಿತಿಗೆ ದೂ.ಸಂ. 0821–2423652 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT