ಮೈಸೂರು: ದಸರಾ ಚಲನಚಿತ್ರೋತ್ಸವ ಉಪ ಸಮಿತಿಯಿಂದ ದಸರಾ ಚಲನಚಿತ್ರೋತ್ಸವದ ಉದ್ಘಾಟನೆಯು ಅ.3ರಂದು ನಡೆಯಲಿದ್ದು, ಅ.4ರಿಂದ 10ರವರೆಗೆ ವೈವಿಧ್ಯಮಯ ಚಲನಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ.

ಗ್ರಾಮಾಂತರ ಪ್ರದೇಶದಲ್ಲಿ ಸಿನಿ ಪ್ರಿಯರಿಗೆ ಹಾಗೂ ಸಿನಿಮಾಸಕ್ತರಿಗೆ ಸುಲಭವಾಗಿ ಲಭ್ಯವಾಗುವಂತೆ ಆನ್‌ಲೈನ್ ಮೂಲಕ ಆಧಾರ್ ಕಾರ್ಡ್ ಬಳಸಿ https://sevasindhuservices.karnataka.gov.in/directApply.do?serviceId=2310 ನೋಂದಣಿ ಮಾಡಿ ಪಾಸ್ ಕಾಯ್ದಿರಿಸುವುದು ಹಾಗೂ ಮಾಹಿತಿ ಪಡೆಯಬಹುದಾಗಿದೆ.

ರಾಜ್ಯದಾದ್ಯಂತ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಗ್ರಾಮ ಒನ್ ಮತ್ತು ನಗರ, ಪಟ್ಟಣ ವ್ಯಾಪ್ತಿಯಲ್ಲಿ ಕರ್ನಾಟಕ ಒನ್ ಹಾಗೂ ಮೈಸೂರು ಓನ್ ಕೇಂದ್ರದ ಸೇವಾ ಪೋರ್ಟಲ್‌ನಲ್ಲಿ ಯಾವುದೇ ನೋಂದಣಿ ಮಾಡದೆ ಅಗತ್ಯ ಮಾಹಿತಿ ನೀಡಿ ಸಿನಿಮಾ ಪಾಸ್‌ಗಳನ್ನು ಪಡೆಯಬಹುದು. ಚಲನಚಿತ್ರೋತ್ಸವ ಪಾಸ್ ದರ ವಿದ್ಯಾರ್ಥಿಗಳಿಗೆ ಹಾಗೂ ಹಿರಿಯ ನಾಗರಿಕರಿಗೆ ₹300 ಹಾಗೂ ಇತರರಿಗೆ ₹500 ಆಗಿದೆ.

ನಗರದ ಜನಸಂದಣಿ ಸ್ಥಳಗಳಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ, ರೈಲು ನಿಲ್ದಾಣ, ಚಾಮರಾಜೇಂದ್ರ ಮೃಗಾಲಯದ ಎದುರಿನ ಪಾರ್ಕಿಂಗ್ ಆವರಣ, ಬಯಲು ರಂಗಮಂದಿರದ ಯುವ ಸಂಭ್ರಮದ ವೇದಿಕೆಯ ಆವರಣದಲ್ಲಿ ಪಾಸ್ ಪಡೆಯಲು ಅನುಕೂಲವಾಗುವಂತೆ ಕಿಯೋಸ್ಕ್‌ಗಳನ್ನು ಸಹ ಸ್ಥಾಪಿಸಲಾಗುತ್ತಿದೆ ಎಂದು ಚಲನಚಿತ್ರೋತ್ಸವ ಉಪ ಸಮಿತಿ ತಿಳಿಸಿದೆ.

ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶ ವ್ಯಾಪ್ತಿಯಲ್ಲಿ 346 ಗ್ರಾಮ ಒನ್ ಕೇಂದ್ರಗಳು, ನಗರ ಹಾಗೂ ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ 52 ಕರ್ನಾಟಕ ಒನ್ ಕೇಂದ್ರಗಳಲ್ಲೂ ಸಿನಿಮಾ ಪಾಸ್‌ಗಳು ಲಭ್ಯವಿರುತ್ತವೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.