2026ರ ಜನವರಿ 3ರಂದು ‘ಬನದ ಹುಣ್ಣಿಮೆ’ ಅಥವಾ ‘ಬನಶಂಕರಿ ಪೂಜೆ’ಯನ್ನು ಆಚರಿಸಲಾಗುತ್ತದೆ. ಈ ದಿನ ಕೆಲವು ಆಚರಣೆಗಳನ್ನು ಪಾಲಿಸಿದರೆ ಪತಿಯ ಆಯಸ್ಸು ಗಟ್ಟಿಯಾಗುತ್ತದೆ. ಅಲ್ಲದೇ ಲಕ್ಷ್ಮೀಯ ಅನುಗ್ರಹವೂ ಪ್ರಾಪ್ತವಾಗುತ್ತದೆ ಎಂಬ ನಂಬಿಕೆ ಇದೆ. ಬನಹುಣ್ಣಿಮೆ ಆಚರಣೆಯಿಂದ ದೊರೆಯುವ ಲಾಭಗಳೇನು ಎಂಬುದನ್ನು ತಿಳಿಯೋಣ.

ಬನದ ಹುಣ್ಣಿಮೆಯನ್ನು ಕೇರಳ ಹಾಗೂ ತಮಿಳುನಾಡಿನಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಆಚರಿಸಲಾಗುತ್ತದೆ. ಈ ದಿನ ಕೆಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಇರುತ್ತದೆ.
.ಸುಖ, ಶಾಂತಿ ನೆಮ್ಮದಿಯ ಜೀವನಕ್ಕಾಗಿ ಸತ್ಯನಾರಾಯಣ ವ್ರತವನ್ನು ಹೀಗೆ ಮಾಡಿ.ಗಮನಿಸಿ: ವಾಸ್ತು ಪ್ರಕಾರ ಈ ದಿಕ್ಕಿನಲ್ಲಿ ಮಲಗುವುದು ನಿಷಿದ್ಧ.
ಹುಣ್ಣಿಮೆಯ ತಿಥಿಯಂದು ಆಚರಿಸುವ ಬನ ಹುಣ್ಣಿಮೆ ದಿನ ಉಪವಾಸವಿದ್ದು, ದೀಪ ಬೆಳಗಿಸಿ, ಮದುವೆಯಾಗಿರುವ ಹೆಣ್ಣು ಮಕ್ಕಳು ತನ್ನ ಪತಿಯ ಆಯಸ್ಸು, ಯಶಸ್ಸು ಹಾಗೂ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿ ಎಂದು ಶಿವನನ್ನು ಪ್ರಾರ್ಥಿಸುತ್ತಾರೆ.

ಈ ದಿನ ಶಾಕಾಂಬರಿ ದೇವಿಯನ್ನು ಪೂಜಿಸುವುದರಿಂದ ಬಡತನ ದೂರವಾಗುವುದರ ಜೊತೆಗೆ ಗಂಡ ಹೆಂಡತಿಯ ಆರೋಗ್ಯ ವೃದ್ಧಿಯಾಗಿ ಆಯಸ್ಸು ಗಟ್ಟಿಯಾಗುತ್ತದೆ ಎಂಬ ನಂಬಿಕೆ ಇದೆ.

ಪೂಜಾ ಸಮಯ: ಜನವರಿ 2ರ ಸಂಜೆ 6:35 ರಿಂದ ಜನವರಿ 3ರ ಮಧ್ಯಾಹ್ನ 03:32ಕ್ಕೆ ಮುಕ್ತಾಯವಾಗುತ್ತದೆ.

ವ್ರತ ಆಚರಿಸುವವರು ಸ್ನಾನ ಮುಗಿಸಿ ಶುಭ್ರವಾದ ಬಟ್ಟೆ ಧರಿಸಬೇಕು. ಶಿವನ ಸ್ವರೂಪವಾದ ನಟರಾಜನ ಫೋಟೊ ಅಥವಾ ಮೂರ್ತಿಯನ್ನು ಇಟ್ಟು, ಹಾಲು ಮತ್ತು ಅಕ್ಕಿಯಿಂದ ಮಾಡಿದ ಪಾಯಸವನ್ನು ನೈವೇದ್ಯ ಮಾಡಬೇಕು.

ಈ ದಿನ ಶಿವನನ್ನು ಪೂಜಿಸುವುದರ ಜೊತೆಗೆ ಪಾರ್ವತಿಯನ್ನು ಪೂಜಿಸಬೇಕು. ಪೂಜೆಯಲ್ಲಿ ವಿಭೂತಿ ಇಡುವುದು ಕಡ್ಡಾಯ. ಪೂಜೆಯಾದ ನಂತರ ಆ ವಿಭೂತಿಯನ್ನು ಪುರುಷರು ಹಣೆಗೆ ಹಚ್ಚಿಕೊಳ್ಳುವುದರಿಂದ ಮನೆಯ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ನಂಬಲಾಗಿದೆ.

ಈ ದಿನ ಶಿವ ಹಾಗೂ ಪಾರ್ವತಿಗೆ ವಿಶೇಷವಾಗಿ ಪೂಜೆ ಸಲ್ಲಿಸುವುದರಿಂದ ಮನೆಯ ಸಮಸ್ಯೆಗಳು ದೂರವಾಗಿ ಸುಖ, ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ ಎಂಬ ನಂಬಿಕೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.