ಭಾನುವಾರ, ಫೆಬ್ರವರಿ 23, 2020
19 °C

ಸ್ಮರಣೆ| ಮತ್ತೊಮ್ಮೆ ಅವತರಿಸಿ

ಕ. ಗ. ಪ್ರೇಮಲತ Updated:

ಅಕ್ಷರ ಗಾತ್ರ : | |

ಸಿದ್ಧಗಂಗಾಶ್ರೀಮಠದ ಶಿವಕುಮಾರಸ್ವಾಮಿಗಳು ಶಿವೈಕ್ಯರಾಗಿ ಒಂದು ವರ್ಷವಾಯಿತು. ಸ್ವಾಮಿಗಳನ್ನು ಸ್ವರಿಸುತ್ತ ಈ ನುಡಿನಮನಗಳು...

ಇಡೀ ಭಾರತದ ಅತ್ಯಮೂಲ್ಯ ಸಂಪತ್ತು;  ಕಣ್ಣಿಗೆ ಕಾಣಿಸುತ್ತಿದ್ದ ದೇವರು; ಸನ್ಯಾಸಜೀವನ ಎಂಬ ಪಥದಲ್ಲಿ ಪರಮಾದ್ಭುತವಾಗಿ ನಡೆದಾಡುತ್ತಿದ್ದ ದೇವರು; ತ್ರಿವಿಧ ದಾಸೋಹದ ಸಿರಿಯನ್ನು ಇಡೀ ಜಗತ್ತಿಗೆ ಸಾರಿದ ತ್ಯಾಗಜೀವಿ; ಅಗಣಿತರ ಬಾಳನ್ನು ಬೆಳಗಿದ ದಿವ್ಯಮಾನವ; ಸಿದ್ಧಗಂಗೆಯ ಅವತಾರಪುರುಷ; ಕಲ್ಲುಬಂಡೆಗಳ ಪ್ರದೇಶವಾಗಿದ್ದ ಸಿದ್ಧಗಂಗೆಯನ್ನು ನಂದನವನವನ್ನಾಗಿ ಪರಿವರ್ತಿಸಿದ ಋಷಿವರ್ಯ; ಸಿದ್ಧಗಂಗೆಕ್ಷೇತ್ರ ಶಿಕ್ಷಣಕಾಶಿಯಾಗಲು ಕಾಲವೆಲ್ಲವನ್ನೂ ಕರ್ಮದಲ್ಲೇ ಮಣಿಸಿ ಮುನ್ನಡೆದ ಕಾಯಕಯೋಗಿ; ಶೈಕ್ಷಣಿಕ ಸಾಮಾಜಿಕ ಸಾಂಸ್ಕೃತಿಕ ಆಧ್ಯಾತ್ಮಿಕ ಧಾರ್ಮಿಕ ಕ್ಷೇತ್ರಗಳಲ್ಲಿ ಶ್ರೀಮಠವನ್ನು ಅತ್ಯನ್ನತ ಮಟ್ಟಕ್ಕೆ ಏರಿಸಿದ ಶತಮಾನದ ಸಂತ; ಬತ್ತದ ಜೀವನದಿಯಾಗಿ ಬದುಕಿ, ಅನಂತದೆಡೆಗೆ ನಡೆದ ಯುಗಪುರುಷ; ಜಗಮೆಚ್ಚಿದ ಶಾಂತಿದೂತ; ತಪಸ್ವಿ; ಅನಾಥಬಂಧು; ಕೋಟ್ಯಂತರ ಭಕ್ತರ ದಾರಿದೀಪ; ಅಧ್ಯಾತ್ಮಜೀವಿ; ಮಹಾಮಾನವತಾವಾದಿ; ಲಕ್ಷಾಂತ ಮಕ್ಕಳಿಗೆ ಆಶ್ರಯದಾತ, ಅನ್ನದಾತ: ಮಠಾಧಿಪತಿಯಾಗಿ ಪವಾಡಗಳನ್ನು ಸೃಷ್ಟಿಸಿದ ಮಹಾಪುರುಷ; ಪ್ರಶಸ್ತಿ ಹೊಗಳಿಕೆ ಪ್ರಶಂಸೆಗಳಿಗೆ ಆಸೆಪಡದ ವೈರಾಗ್ಯಮೂರ್ತಿ; ಜಾತಿ ಮತ ಕುಲ ಪಂಗಡಗಳಿಗೆ ಅತೀತವಾಗಿ ಶ್ರೀಮಠವನ್ನು ಭಾವೈಕ್ಯತೆಗೆ ಸಾಕ್ಷಿಯಾಗಲು ಕಾರಣರಾದ ‘ಬುದ್ಧಿಯವರು’; ಸನ್ಯಾಸಾಶ್ರಮದ ರೀತಿ–ರಿವಾಜುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಮಹಾಸನ್ಯಾಸಿ; ‘ವಸುದೈವ ಕುಟುಂಬಕಮ್‌’ ಎಂಬ ಮಾತಿಗೆ ಉದಾಹರಣೆಯಾಗಿ ಪವಿತ್ರಜೀವನವನ್ನು ನಡೆಸಿದ ಪರಮಯೋಗಿ; ಜನಮಾಸದಲ್ಲಿ ಶಾಶ್ವತವಾಗಿ ನೆಲೆಸಿರುವ ಸಿದ್ಧಗಂಗಾರತ್ನ; ಕರ್ನಾಟಕದ ಅನರ್ಘ್ಯರತ್ನ; ಭಾರತಮಾತೆಯ ಹೆಮ್ಮೆಯ ಪುತ್ರ; ವಿಶ್ವಮಾನ್ಯರಾದ ಮೇರುವ್ಯಕ್ತಿತ್ವ; ಜಗದ್ವಂದ್ಯ; ಶಿವೈಕ್ಯರಾಗಿ ಆತ್ಮರೂಪಿಯಾಗಿ ಗದ್ದುಗನ್ನೆಯನ್ನೇರಿ ಕೈಲಾಸವನ್ನು ಸೇರಿದ ಶಿವಕುಮಾರಸ್ವಾಮಿಯವರಿಗೆ ಗುರುಭಕ್ತಿಪೂರ್ವಕ ನುಡಿನಮನಗಳು.

ವಿಶ್ವಕಲ್ಯಾಣಕ್ಕಾಗಿ ಮತ್ತೊಮ್ಮೆ ಅವತರಿಸಿ ಬನ್ನಿ!

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು