ಪಾರ್ವತೀ–ಪರಮೇಶ್ವರರನ್ನು ಜಗತ್ತಿನ ಆದಿ ದಂಪತಿಗಳು ಎಂದು ನಮ್ಮ ಪರಂಪರೆ ಒಕ್ಕಣಿಸಿದೆ. ಸೃಷ್ಟಿಯ ಪ್ರತಿಯೊಂದು ವಸ್ತು–ವ್ಯಕ್ತಿಗೂ ತಂದೆ–ತಾಯಿ ಎಂದರೆ ಶಿವ ಮತ್ತು ಪಾರ್ವತಿಯರೇ ಹೌದು ಎಂಬ ವಿಶಾಲ ತತ್ತ್ವವೇ ಈ ಕಲ್ಪನೆಗೆ ಮೂಲ. ಈ ಕಲ್ಪನೆಯ ಹಿಂದೆ ನಮ್ಮ ಪರಂಪರೆಯ ಔದಾರ್ಯ ಎದ್ದುಕಾಣುತ್ತದೆ. ನಾವು ಯಾರೂ ಎಂದಿಗೂ ಅನಾಥರಲ್ಲ – ಎಂಬ ಭರವಸೆಯನ್ನೂ ಧೈರ್ಯವನ್ನೂ ಈ ಕಲ್ಪನೆ ಕೊಡುತ್ತದೆ. ಆಧುನಿಕ ಮನಸ್ಸುಗಳನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ ಎಂದರೆ ಅನಾಥಪ್ರಜ್ಞೆಯೇ ಹೌದು. ಒಂಟಿತನದ ಈ ಮಾನಸಿಕತೆಯೇ ನಮ್ಮನ್ನು ಹೆಚ್ಚು ಗಲಿಬಿಲಿಗೊಳಿಸುವುದು, ಉದ್ವೇಗಕ್ಕೆ ತಳ್ಳುವುದು, ಪಾಪಕೃತ್ಯಗಳಿಗೂ ಪ್ರೇರಿಸುವುದು. ಈ ಹಿನ್ನೆಲೆಯಲ್ಲಿ ನಾವು ಗೌರೀಗಣೇಶನ ಹಬ್ಬಗಳನ್ನು ವಿಶ್ಲೇಷಿಸಿದರೆ ಆಗ ಹಬ್ಬಗಳು ನಮಗೆ ಒದಗಿಸುವ ಜೀವನೋತ್ಸಾಹ ಮತ್ತು ಜೀವನಪ್ರೀತಿಗಳು ಅರಿವಿಗೆ ಬರುತ್ತವೆ.

ಪಾರ್ವತಿಗೆ ಹಲವು ಹೆಸರುಗಳು; ಅವುಗಳಲ್ಲಿ ‘ಗೌರೀ’ ಎಂಬುದೂ ಒಂದು; ಬೆಳ್ಳಗಿರುವವಳು ಎಂದು ಅರ್ಥ. ಮಾತ್ರವಲ್ಲ, ಅವಳು ಸ್ವರ್ಣಗೌರೀ; ಬಂಗಾರದಂತೆ ಶುಭ್ರವಾಗಿ ಹೊಳೆಯುತ್ತಿರುವವಳು. ಅವಳ ಈ ಶುಭ್ರತೆಯು ಅವಳು ತನ್ನ ಮಕ್ಕಳನ್ನು ಪೊರೆಯುವಾಗ ಕಂಗೊಳಿಸುವಂಥದ್ದು. ನಾವೆಲ್ಲರೂ ಅವಳ ಮಕ್ಕಳೇ ಹೌದು. ಅವಳಿಗೆ ನಮ್ಮ ಬಗ್ಗೆ ಮಾತೃಪ್ರೀತಿ ಇದೆ. ನಮಗೂ ಅವಳ ಬಗ್ಗೆ ಮಾತೃಭಕ್ತಿ ಇರಬೇಕೆನ್ನಿ! ಗೌರೀಹಬ್ಬದ ಮರುದಿನವೇ ಕಾಣಿಸಿಕೊಳ್ಳುವ ಗಣೇಶನ ಹಬ್ಬ ಈ ಅಮ್ಮ–ಮಕ್ಕಳ ಬಾಂಧವ್ಯವನ್ನು ಸೊಗಸಾಗಿ ಧ್ವನಿಸುತ್ತದೆ. ಗೌರಿಯ ಸಂಸಾರ ಎಂದರೆ ಅದು ಆದರ್ಶ ಕುಟುಂಬ; ಹಲವು ವೈರುದ್ಧ್ಯಗಳ ನಡುವೆಯೂ ಸಾಮರಸ್ಯದಲ್ಲಿರುವ ಕುಟುಂಬವದು. ಈ ಸಾಮರಸ್ಯವನ್ನು ಕಾಪಾಡುವಲ್ಲಿ ಗೌರಿಯ ಪಾತ್ರ ದೊಡ್ಡದು.

ಶಿವ–ಪಾವರ್ತಿಯರ ಆದರ್ಶ ದಾಂಪತ್ಯವನ್ನು ಕಾಳಿದಾಸನು ಮಾತು–ಅರ್ಥಗಳ ಸಾಮರಸ್ಯದಲ್ಲಿ ಕಂಡು ಆರಾಧಿಸಿದ್ದಾನೆ. ಮಾತು–ಅರ್ಥಗಳ ಸಾಮರಸ್ಯ ಬೇರೆ ಅಲ್ಲ, ನಮ್ಮ ಜೀವ–ಜೀವನಗಳ ಸಾಮರಸ್ಯ ಬೇರೆ ಅಲ್ಲ. ಪರಂಪರೆಯು ಪಾರ್ವತಿಯನ್ನು ಶಕ್ತಿಯ ಸ್ವರೂಪದಲ್ಲಿಯೇ ಪೂಜಿಸುವುದೂ ವಿಶೇಷವಾಗಿದೆ. ಶಕ್ತಿಯನ್ನು ಮಾತೃಸ್ವರೂಪದಲ್ಲಿಯೇ ಕಂಡರಿಸುವುದು ಕೂಡ ಗಮನಾರ್ಹ. ನಮ್ಮ ಜೀವನದ ನೆಮ್ಮದಿಗೂ ಕುಟುಂಬಕ್ಕೂ ತಾಯಿಪ್ರೀತಿಗೂ ಇರುವ ನಂಟನ್ನು ಗೌರೀ–ಗಣೇಶನ ಹಬ್ಬಗಳು ಸುಂದರವಾಗಿ ಪ್ರತಿಪಾದಿಸುತ್ತವೆ.

ಗೌರೀಹಬ್ಬದಂದು ಪಾರ್ವತಿಯು ಕೈಲಾಸದಿಂದ ಹೊರಟು ಭೂಲೋಕಕ್ಕೆ ಬರುತ್ತಾಳೆ; ಹೆಣ್ಣೊಬ್ಬಳು ತವರುಮನೆಗೆ ಬರುವಂತೆ. ಅಮ್ಮನನ್ನು ಬಿಟ್ಟಿರಲಾರದ ಗಣಪ ಕೂಡ ಅವಳ ಹಿಂದೆಯೇ ಓಡೋಡಿ ಬರುತ್ತಾನೆ! ತವರಿಗೆ ಬಂದವಳನ್ನು ಆದರಿಸುವುದು, ಆರಾಧಿಸುವುದು ನಮ್ಮ ಕರ್ತವ್ಯ. ತವರಿನ ಸೊಗಸು–ಶಕ್ತಿಗಳನ್ನು ಹೆಣ್ಣುಮಕ್ಕಳೇ ಸರಿಯಾಗಿ ಬಲ್ಲವರು. ಇದಕ್ಕೇ ಇರಬೇಕು, ಗೌರೀಹಬ್ಬದ ಸಂಭ್ರಮ ಹೆಣ್ಣುಮಕ್ಕಳಲ್ಲಿಯೇ ಹೆಚ್ಚು. ಮನೆಯನ್ನು ಸಿದ್ಧಗೊಳಿಸಿ, ಮನವನ್ನು ಶುದ್ಧಗೊಳಿಸಿ, ಗೌರಿಗೆ ಬಾಗಿನವನ್ನು ಸಮರ್ಪಿಸುವ ಮಾನಿನಿಯರ ಮಾತೃಪ್ರೇಮದ ಸೌರಭದಲ್ಲಿಯೇ ಹಬ್ಬದ ದಿಟವಾದ ಸಂಭ್ರಮ ನೆಲೆಗೊಳ್ಳುವುದು. ಇಡಿಯ ಸೃಷ್ಟಿಯನ್ನೇ ಶಕ್ತಿರೂಪದಲ್ಲಿ, ಮಾತೃಸ್ವರೂಪದಲ್ಲಿ ಕಂಡಿರುವ ನಮ್ಮ ಸಂಸ್ಕೃತಿಯ ಕಾಣ್ಕೆ ಬಹಳ ವಿಶೇಷವಾದುದು. ಜಗತ್ತಿನ ಚರಾಚರ ವಸ್ತುಗಳೊಂದಿಗೆ ಸಾಧಿಸಬಲ್ಲ ಸೌಹಾರ್ದದ ಅಂತಃಕರಣಕ್ಕೆ ಮೂಲವೇ ನಮ್ಮ ಪರಂಪರೆಯ ಈ ದರ್ಶನ. ಈ ಅರಿವೇ ನಮ್ಮ ಭಾವ–ಬುದ್ಧಿಗಳ ಶುಭ್ರತೆಗೆ ಕಾರಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.