ಬುಧವಾರ, ಸೆಪ್ಟೆಂಬರ್ 28, 2022
26 °C

ಸಾವು ಜಗತ್ತಿಗೆ ತಿಳಿಯುವಂತಾಗಲಿ: ಮಹಾಂತ ಸ್ವಾಮೀಜಿ ಮುದಗಲ್

ಮಹಾಂತ ಸ್ವಾಮೀಜಿ ಮುದಗಲ್ Updated:

ಅಕ್ಷರ ಗಾತ್ರ : | |

Prajavani

ಹುಟ್ಟು ಆಕಸ್ಮಿಕ, ಸಾವು ಖಚಿತ. ಹುಟ್ಟು ನಮ್ಮ ಸಂಭ್ರಮದ ಕ್ಷಣಕ್ಕೆ ಕಾರಣವಾದರೆ ಸಾವು ನಮ್ಮನ್ನು ಇನ್ನಿಲ್ಲದ ದುಃಖಕ್ಕೀಡು ಮಾಡುತ್ತದೆ. ಇದು ಸಹಜ ಪ್ರಕ್ರಿಯೆ. ಜನನ ಕೇವಲ ಕುಟುಂಬಕ್ಕಷ್ಟೇ ತಿಳಿವುದು. ಆದರೆ, ಸಾವು ಜಗತ್ತಿಗೇ ತಿಳಿಯುವಂತಾಗಬೇಕು. ಅದು ನಿಜವಾದ ಬದುಕಿನ ಸಾರ್ಥಕತೆ.

ಪ್ರತಿನಿತ್ಯವೂ ಸಾವುಗಳು ನಮ್ಮ ಸುತ್ತ ಮುತ್ತಲು ಜರುಗುತ್ತಲೇ ಇರುತ್ತವೆ. ಸಾವು ಕೇವಲ ದೇಹಕ್ಕೆ ಮಾತ್ರ. ಆದರೆ, ಮೃತ ವ್ಯಕ್ತಿ ಇಡೀ ಜೀವಮಾನದಲ್ಲಿ ಅಳವಡಿಸಿಕೊಂಡ ವ್ಯಕ್ತಿತ್ವದ ಪರಾಮರ್ಶೆ ಸಾವಿನ ಬಳಿಕ ನಡೆಯುತ್ತದೆ. ಆ ವ್ಯಕ್ತಿಯನ್ನು ಕೇಂದ್ರವಾಗಿಸಿಕೊಂಡು ಬದುಕಿನ ಅವಲೋಕನ ಸಾಗುತ್ತದೆ. ಆ ವ್ಯಕ್ತಿಯ ಸಾಧನೆ ಮತ್ತು ಸಾಮಾಜಿಕ ಕೊಡುಗೆಯ ಆಧಾರದ ಮೇಲೆ ಅವನ ಅಮರತ್ವ ಸಾಬೀತಾಗುತ್ತದೆ. ವ್ಯಕ್ತಿ ಬದುಕಿದ ರೀತಿ, ಅವನ ಕಾರ್ಯವೈಕರಿ, ಇತರರೊಂದಿಗಿನ ಒಡನಾಟ ಮತ್ತು ಬಾಂಧವ್ಯ ಎಲ್ಲವೂ ಗಣನೆಗೆ ಬರುವ ಸಮಯ ಸಾವಿನ ಸಮಯ.‌

ಜೀವ ಮತ್ತು ಜೀವನ ಎಷ್ಟು ಅಮೂಲ್ಯ ಎನ್ನುವದು ಆ ಗಳಿಗೆಯಲ್ಲಿ ಎಂಥವರಿಗೂ ಅನಿಸದಿರದು. ಸಿಕ್ಕ ಬದುಕನ್ನು ನಾವು ಎಷ್ಟು ಚಂದಗಾಣಿಸಿ ಗೊಂಡಿದ್ದೇವೆ? ಎಷ್ಟು ಹದಗೆಡಿಸಿಕೊಂಡಿದ್ದೇವೆ? ಎಂಬ ಆತ್ಮಾವಲೋಕನವೂ ನಡೆಯುತ್ತದೆ. ಕೊನೆಗೆ ಅರಿವಾಗುವ ಸತ್ಯ ಬದುಕಿದ್ದಾಗ ಇತರರ ಬದುಕಿನಲ್ಲಿ ನಾವೆಷ್ಟು ಪ್ರಮುಖ ಪಾತ್ರ ವಹಿಸಿದ್ದೇವೆ ಎಂಬುದು.

ಸಂಗ್ರಹ: ಎಂ.ಬಿ.ಕಟ್ಟಿಮನಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು