ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲುಕೋಟೆ ಉತ್ಸವ

Last Updated 29 ಜನವರಿ 2020, 19:45 IST
ಅಕ್ಷರ ಗಾತ್ರ

ಚೆಲುವನಾರಾಯಣಸ್ವಾಮಿಯ ದಿವ್ಯಸಾನ್ನಿಧ್ಯವಿರುವ ಮಂಡ್ಯಜಿಲ್ಲೆಯ ಮೇಲುಕೋಟೆ ದೇವಾಲಯದಲ್ಲಿ ವರ್ಷವಿಡಿ ಉತ್ಸವಗಳು, ಮಹೋತ್ಸವಗಳು, ಜಾತ್ರೆಗಳು ನಡೆಯುತ್ತವೆ. ಇವುಗಳಲ್ಲಿಜಾನಪದದ ವೈಭವವನ್ನು ಪ್ರೋತ್ಸಾಹಿಸುವ ಮಹೋತ್ಸವ ರಥಸಪ್ತಮಿ ಮೆರವಣಿಗೆ ವಿಶೇಷವಾಗಿದೆ. ಧಾರ್ಮಿಕ ಮಹತ್ವದೊಂದಿಗೆ ಜಾನಪದ ಕಲೆಯ ಹಲವು ಆಯಾಮಗಳು ಸೇರಿಕೊಂಡು ಪ್ರವಾಸಿಗರನ್ನೂ ಆಕರ್ಷಿಸುತ್ತಿದೆ.ಫೆಬ್ರುವರಿ ಒಂದರಂದು, ಬೆಳಗ್ಗೆ 6 ಗಂಟೆಯಿಂದ 9ರವರೆಗೆ ಸೂರ್ಯಮಂಡಲವಾಹನ ಸಾಗುವ ಮೆರವಣಿಗೆಯುದ್ದಕ್ಕೂ 50ಕ್ಕೂ ಹೆಚ್ಚು ಕಲಾತಂಡಗಳು ಭಾಗವಹಿಸಲಿವೆ.

ಕಲಾಪ್ರಕಾರಗಳು: ಚಿಲಿಪಿಲಿಗೊಂಬೆ ಮರಗಾಲುಕುಣಿತ, ಕೀಲುಕುದುರೆ ಕರಗದನೃತ್ಯ, ಮೈಸೂರುನಗಾರಿ, ನಾಸಿಕ್‌ಡೋಲ್, ಜಾಂಜ್‌ಮೇಳ , ಕರಡಿಮಜಲು, ನಂದಿಕಂಬ, ಪಟಾಕುಣಿತ. ಗಾರುಡಿಗೊಂಬೆ, ಹುಲಿವೇಷ, ವೀರಗಾಸೆ. ಕೋಲಾಟ, ಡೊಳ್ಳುಕುಣಿತ, ಜಾಂಜ್ ಮೇಳ, ಸೋಮನಕುಣಿತ. ಚಕ್ರಾದಿಬಳೆ, ಖಡ್ಗಪವಾಡ, ವೀರಭದ್ರನಕುಣಿತ, ಗಾರುಡಿಗೊಂಬೆಗಳು, ವೀರಮಕ್ಕಳಕುಣಿತ, ಕಂಸಾಳೆ, ನಾದಸ್ವರ, ಚಂಡೆನಗಾರಿ ಜಡೆಕೋಲಾಟ, ಭಾಗವಂತಿಕೆಮೇಳ, ಕರಡಿಕುಣಿತ ವಿಧದ ಜಾನಪದ ಕಲೆಗಳ ತಂಡಗಳು ಗ್ರಾಮೀಣ ಕಲೆಗಳ ಸೊಗಡನ್ನು ಉಣಬಡಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT