ಗುರುವಾರ, 1 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ ಭವಿಷ್ಯ| 2023ರ ಏಪ್ರಿಲ್‌ 1ರಿಂದ 30ರ ವರೆಗೆ

Last Updated 1 ಏಪ್ರಿಲ್ 2023, 9:11 IST
ಅಕ್ಷರ ಗಾತ್ರ

ಮೇಷ

ಕುಟುಂಬದವರಿಂದ ಹಾಗೂ ಅಧಿಕಾರಿವರ್ಗದವರಿಂದ ಸಹಕಾರ. ಕಬ್ಬಿಣ, ಉಕ್ಕು, ಸಿಮೆಂಟ್, ಕಟ್ಟಿಗೆ ವ್ಯಾಪಾರಸ್ಥರಿಗೆ ಯಶಸ್ಸು. ಉದ್ಯೋಗಿಗಳಿಗೆ ಸ್ಥಳ ಬದಲಾವಣೆ ಸಾಧ್ಯತೆ. ಸರಕಾರಿ ಅಧಿಕಾರಿಗಳು, ರಾಜಕಾರಣಿಗಳು, ಜನಾನುರಾಗ ಗಳಿಸುವಿರಿ.

ಶುಭ: 10, 18, 22 ಅಶುಭ: 12, 16, 24.

ವೃಷಭ

ಹೊರನೋಟಕ್ಕೆ ನೀವು ಸುಖಿಗಳಾಗಿ ಕಂಡರೂ ಆಂತರಿಕವಾಗಿ ದುಃಖಿಗಳಾಗಿರುವಿರಿ. ಬಂದುಗಳು, ಹಿತಚಿಂತಕರೂ ನಿಮ್ಮಿಂದ ದೂರ ಸರಿದಾರು. ಈ ತಿಂಗಳು ನೀವು ಆದಷ್ಟು ತಾಳ್ಮೆಯಿಂದ ವರ್ತಿಸಬೇಕಾಗುವುದು. ತಿಂಗಳಾಂತ್ಯಕ್ಕೆ ಸಮಸ್ಯೆಗಳು ಪರಿಹಾರವಾಗುತ್ತವೆ.

ಶುಭ: 14, 19, 28 ಅಶುಭ: 16, 20, 26.

ಮಿಥುನ

ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಿರಿ. ಶೈಕ್ಷಣಿಕ ಕ್ಷೇತ್ರದಲ್ಲಿರುವವರಿಗೆ ಉದ್ಯೋಗದಲ್ಲಿ ಬಡ್ತಿ ಸಾಧ್ಯತೆ. ಕೃಷಿ ಉತ್ಪನ್ನ ಮಾರಾಟಗಾರರಿಗೆ ಲಾಭ. ಮೈಕೈ ನೋವು, ನೆಗಡಿ ಕಾಡಬಹುದು. ಸಂಗಾತಿಗಳ ನಡುವೆ ವೈಮನಸ್ಸು ಉಂಟಾಗಬಹುದು, ತಾಳ್ಮೆಯಿಂದಿರಿ.

ಶುಭ: 14, 16, 22 ಅಶುಭ: 11, 17, 26.

ಕರ್ಕ

ಸಂಶಯ ವಿನಾಶಕ್ಕೆ ಕಾರಣ. ವಿನಾಕಾರಣ ಸಂಶಯದಿಂದ ಮಾನಸಿಕ ನೆಮ್ಮದಿ ಕಳೆದುಕೊಳ್ಳಬೇಡಿ. ದೃಢ ವಿಶ್ವಾಸದಿಂದ ಹೆಜ್ಜೆಯಿಡಿ. ಸ್ವತಂತ್ರ ಉದ್ಯೋಗ ಮಾಡುವವರಿಗೆ ವ್ಯವಹಾರದಲ್ಲಿ ನಷ್ಟ. ಆರೋಗ್ಯದಲ್ಲಿ ಆಗಾಗ ತೊಂದರೆಗಳು ಕಾಣಿಸಬಹುದು.

ಶುಭ: 11, 18, 26 ಅಶುಭ: 13, 27, 29.

ಸಿಂಹ

ಸಂಪತ್ತನ್ನು ಯೋಗ್ಯವಾದ ಮಾರ್ಗದಲ್ಲಿ ಉಪಯೋಗಿಸಿ. ಭೂಮಿ, ಮನೆ ಖರೀದಿಗೆ ಉತ್ತಮ ಸಮಯ. ನೌಕರರಿಗೆ ಉದ್ಯೋಗಿಗಳಿಗೆ ಸ್ಥಳ ಬದಲಾವಣೆ ಸಂಭವ. ವಾಹನ, ಯಂತ್ರೋಪಕರಣ ಕಬ್ಬಿಣಕ್ಕೆ ಸಂಬಂಧಿಸಿದ ಉದ್ಯಮದಲ್ಲಿ ಉತ್ತಮ ಲಾಭ.

ಶುಭ: 14, 19, 26 ಅಶುಭ: 12, 16, 27.

ಕನ್ಯಾ

ಬಂಧುಗಳು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ಉದ್ಯೊಗದಲ್ಲಿ ಕಿರಿಕಿರಿ ಎದುರಾಗಬಹುದು. ಆಸ್ತಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆತುರದ ನಿರ್ಧಾರ ಬೇಡ. ಸಾಲದ ವ್ಯವಹಾರದಲ್ಲಿ ಎಚ್ಚರವಿರಲಿ. ಈ ತಿಂಗಳು ಸ್ವಲ್ಪ ತಾಳ್ಮೆಯಿಂದ ವರ್ತಿಸಿ.

ಶುಭ: 15, 18, 24 ಅಶುಭ: 13, 16, 29.

ತುಲಾ

ಮನೆಯಲ್ಲಿ ಸ್ನೇಹದ ವಾತಾವರಣ. ವೈವಾಹಿಕ ಜೀವನದಲ್ಲಿ ಸಂತಸ. ಹಳೆಯ ಸಾಲಗಳನ್ನು ತೀರಿಸುವಿರಿ. ಭೂಮಿ, ವಹಿವಾಟು, ಕೃಷಿ ಮಾರಾಟಗಾರರಿಗೆ ಉತ್ತಮ ಲಾಭ. ಜನರೊಂದಿಗೆ ನಿಷ್ಠುರವಾಗಿ ವರ್ತಿಸದಿರಿ. ಅಜೀರ್ಣದಿಂದ ತೊಂದರೆ ಕಾಣಿಸಬಹುದು.

ಶುಭ: 08, 15, 21. ಅಶುಭ: 10, 14, 23.

ವೃಶ್ಚಿಕ

ಗುರು ಹಿರಿಯರ ಆಶೀರ್ವಾದ ಪಡೆದು ಮಹತ್ವದ ನಿರ್ಣಯ ತೆಗೆದುಕೊಳ್ಳಿ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿ. ಅಗ್ನಿಯಿಂದ ಅವಘಡ ಸಾಧ್ಯತೆ, ಎಚ್ಚರಿಕೆಯಿಂದಿರಿ. ಹಳೆಯ ಕೋರ್ಟ್ ಪ್ರಕರಣಗಳು ಇದ್ದಲ್ಲಿ ಪರಿಹಾರವಾಗುತ್ತವೆ. ಕುಟುಂಬ ಸಮೇತ ಪ್ರವಾಸ ಮಾಡುವಿರಿ.

ಶುಭ: 12, 19, 28 ಅಶುಭ: 10, 16, 24.

ಧನು

ವಾಹನ, ಅಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ. ಸಂಗೀತ, ಸಾಹಿತ್ಯ, ಲೇಖನ ಕ್ಷೇತ್ರದಲ್ಲಿರುವವರಿಗೆ ಸನ್ಮಾನ. ಆಕಸ್ಮಿಕ ಧನಲಾಭ. ತಂದೆತಾಯಿ ಆರೋಗ್ಯದಲ್ಲಿ ಚೇತರಿಕೆ. ಮನೆಯ ವ್ಯವಹಾರಗಳಲ್ಲಿ ನೆಮ್ಮದಿ. ಹೊಟ್ಟೆ ನೋವು, ಸಂದಿನೋವು ಕಾಣಿಸಿಕೊಳ್ಳಬಹುದು, ಎಚ್ಚರಿಕೆ.

ಶುಭ: 14, 18, 22 ಅಶುಭ: 16, 19, 27.

ಮಕರ

ಆರ್ಥಿಕ ಅನುಕೂಲತೆ. ಹಳೆಯಸಾಲ ತೀರಿಸುವಿರಿ. ವಿರೋಧಿಗಳ ಆಟ ನಿಮ್ಮ ಮುಂದೆ ನಡೆಯದು. ಕಲೆ, ಸಂಸ್ಕೃತಿ, ಹೋಟೆಲ್, ಸಿನಿಮಾ ಕ್ಷೇತ್ರದಲ್ಲಿರುವವರಿಗೆ ಉನ್ನತಿ. ಸರ್ಕಾರದ ಕೆಲಸಗಳು ಸುಗಮವಾಗುವವು. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವಿವಾದ ಇತ್ಯರ್ಥ.

ಶುಭ: 16, 23, 26 ಅಶುಭ: 14, 18, 22.

ಕುಂಭ

ಸಜ್ಜನರ ಸಹವಾಸ, ಆಧ್ಯಾತ್ಮಿಕ ಚಿಂತನೆಯ ಅವಶ್ಯಕತೆ ಇದೆ. ಜನರು ನಿಮ್ಮ ನಂಬಿಕೆಯನ್ನು ಕಳೆದುಕೊಳ್ಳುವರು. ವೈವಾಹಿಕ ಸಂಬಂಧಗಳು ಹದಗೆಡಬಹುದು. ಆಡುವ ಮಾತಿನ ಮೇಲೆ ನಿಗಾವಹಿಸಿ. ಮಕ್ಕಳಿಂದ ಶುಭಸುದ್ದಿ. ಆರೋಗ್ಯದಲ್ಲಿ ಚೇತರಿಕೆ.

ಶುಭ: 16, 18, 24 ಅಶುಭ: 17, 19, 27.

ಮೀನ

ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಸೋದರ ಸೋದರಿಯರ ಜತೆಗೆ ಬಾಂಧವ್ಯ ಗಟ್ಟಿಯಾಗಲಿದೆ. ಹೆಸರಾಂತ ಸಂಸ್ಥೆಯೊಂದರಲ್ಲಿ ಉದ್ಯೋಗ ದೊರೆಯುವ ಅವಕಾಶ ಇದೆ. ಪದೋನ್ನತಿ ಸಿಗುವ ಯೋಗ ಇದೆ.

ಶುಭ: 18, 25, 29 ಅಶುಭ: 12, 16, 22.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT