ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಾದಕಾಯ ಸದ್ಬಳಕೆಯಾಗಲಿ

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು
Last Updated 6 ಏಪ್ರಿಲ್ 2021, 3:13 IST
ಅಕ್ಷರ ಗಾತ್ರ

ದೇವರು ಕೊಟ್ಟ ಅಮೂಲ್ಯ ಕೊಡುಗೆ ಈ ಶರೀರ. ಇದಕ್ಕೆ ತನು ಎಂದು ಕರೆಯುತ್ತೇವೆ. ತನುವನ್ನು ಚೆನ್ನಾಗಿ ಬೆಳೆಸಬೇಕು. ಅತಿಯಾಗಿ ತಿಂದು ಕೊಬ್ಬಿಸಬಾರದು. ಅತಿಯಾಗಿ ಉಪವಾಸವಿದ್ದು ಬಳಲಿಸಲೂಬಾರದು. ಶರಣರು ಇದಕ್ಕೆ ಪ್ರಸಾದಕಾಯ ಎಂದು ಕರೆದಿದ್ದಾರೆ.

‘ಕೂಡಲಸಂಗನ ಒಲಿಸಲು ಬಂದ ಪ್ರಸಾದಕಾಯ ಕೆಡಿಸಬಾರದು’ ಎಂದು ಬಸವಣ್ಣ ಹೇಳುತ್ತಾರೆ. ಇದನ್ನು ಚೆನ್ನಾಗಿ ಬಳಸಿದರೆ ಸಮಾಜಕ್ಕೆ ಕೊಡುಗೆಯಾಗುತ್ತದೆ. ಚೆನ್ನಾಗಿ ಬಳಸಬೇಕು. ಚಾಕು, ಈಳಿಗೆ ಅಡುಗೆ ಮನೆಯಲ್ಲಿ ಬಳಸುತ್ತ ಇದ್ದರೆ ಬಹಳ ದಿವಸಗಳವರೆಗೆ ಬಳಕೆಯಾಗುತ್ತವೆ. ಬಳಸದೆ ಬಿಟ್ಟಾಗ ತುಕ್ಕು ಹಿಡಿದು ಕೆಲಸಕ್ಕೆ ಬರುವುದಿಲ್ಲ. ಪ್ರಸಾದಕಾಯ ಸತ್ಕಾರ್ಯಕ್ಕೆ ಬಳಸುತ್ತ ಇದ್ದಾಗ ಇದರ ಸದುಪಯೋಗವಾಗುತ್ತದೆ.

ದೇವರು ಕೊಟ್ಟ ಪ್ರಸಾದಕಾಯ ಒಂದು ನಿಮಿಷ ವ್ಯರ್ಥವಾಗದಂತೆ ಸಮಾಜಕ್ಕೆ ವ್ಯಯ ಮಾಡಿದರೆ ಅದು ದೇವರಿಗೆ ಅರ್ಪಿತ. ಅದು ಲಿಂಗ ತನುವಾಗುತ್ತದೆ. ಮಾಂಸಪಿಂಡವಳಿದು ಮಂತ್ರಪಿಂಡವಾಗುತ್ತದೆ. ಅದಕ್ಕಾಗಿ ಶಿವ ಕೊಟ್ಟಿದ್ದು ಶಿವನಿಗಾಗಿ, ಸಮಾಜಕ್ಕಾಗಿ ಸವೆಸುವುದೇ ನಿಜವಾದ ಅರ್ಪಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT