ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಓದಿನ ಸುಖ| ಪುರಂದರ ದರ್ಶನ

Last Updated 17 ಜನವರಿ 2020, 19:45 IST
ಅಕ್ಷರ ಗಾತ್ರ

ಪುರಂದರದಾಸರು ಹರಿದಾಸರು; ಹರಿಯ ಸೇವೆಗೆಂದು ತಮ್ಮ ಬದುಕನ್ನೆಲ್ಲ ಮೀಸಲಾಗಿ ಇರಿಸಿದವರು. ತಮಗೆ ದೊರೆತಿರುವ ಶರೀರವು ಸಾಧನಾಶರೀರವೆಂದೂ, ಮಾನವಜನ್ಮವನ್ನು ಹಾನಿಮಾಡಿಕೊಳ್ಳದೆ ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದೂ ಹರಿದಾಸರ ನಂಬಿಕೆ.

ಪುರಂದರದಾಸರ ಪಾಲಿಗೆ ಸಿದ್ಧಾಂತಕ್ಕಿಂತ ಸಾಧನೆ ಮುಖ್ಯವಾದುದು. ವ್ಯಾಸಕೂಟ–ದಾಸಕೂಟಗಳ ಭೇದವನ್ನು ನಾವು ಗಮನಿಸಬೇಕು. ನಿಷ್ಠಾವಂತರಾದ, ಶಾಸ್ತ್ರೈಕನಿಷ್ಠರಾದ, ಸ್ವಮತಮಂಡನೆ–ಪರಮತ ಖಂಡನೆಯೇ ಪರಮಾರ್ಥಕ್ಕೆ ಸಾದಿ ಎಂದು ಹಟ ಹಿಡಿದ ಮಡಿಮಡಿಯ ಗುಂಪಿಗೆ ವ್ಯಾಸಕೂಟವೆಂದು ಹೆಸರಾಯಿತು. ಭಕ್ತಿಯ ಅಗತ್ಯವನ್ನು ಪ್ರಮೇಯವಾಗಿ ಗ್ರಹಿಸಿದರೂ ಅವರ ಒಲವೆಲ್ಲ ಜ್ಞಾನದ ಕಡೆಯೇ. ಸಾಧನೆಯ ಸ್ವಾರಸ್ಯವನ್ನು ಅವರು ಗ್ರಂಥಗಳಲ್ಲಿ ಬಲ್ಲರೇ ವಿನಾ ಅನುಭವದಲ್ಲಿ ಕಂಡರಿಯರು. ಆದರೆ ದಾಸಕೂಟದವರಿಗೆ ಭಕ್ತಿ ಮುಖ್ಯ; ಶಾಸ್ತ್ರಜ್ಞಾನ ಗೌಣ; ಸಧನೆಯ ಅನುಭವ ಮುಖ್ಯ, ಸಿದ್ಧಾಂತ ಗೌಣ. ದಾಸರು ವಾದ ವಿವಾದಗಳಿಗೆ ಮನಸೋತವರಲ್ಲ; ವ್ಯಾಸಂಗ–ಪ್ರವನಗಳಲ್ಲಿ ಬಾಳನ್ನು ಕಳೆದವರಲ್ಲ. ಅವರ ಬಾಳಿನಲ್ಲಿ ಸಾಧನೆಗೆ ಹಿರಿಯ ಪಟ್ಟ. ಸಾಧನೆಯೆಂದರೆ ಭಗವತತ್ತ್ವ, ಸಾಕ್ಷಾತ್ಕಾರ, ಭಕ್ತಿ – ಇವು. ಇವಕ್ಕೆ ಯಾವುದೇ ಮತನಿಷ್ಠವಾದ ಸಿದ್ಧಾಮತವೊಂದರ ಕಟ್ಟುಪಾಡನ್ನು ತೊಡಿಸುವುದು ಸರಿಯಲ್ಲ. ಎಲ್ಲ ಸಂತರಿಗೂ ಸಮಾನವಾದ ಗುಣವನ್ನು ನಾವು ಪುರಂದರದಾಸರಲ್ಲಿ ಗುರುತಿಸಬೇಕು. ಅವರು ಕೇವಲ ಮಾಧ್ವಸಂಪ್ರದಾಯದ ಪ್ರಚಾರಕರು ಎಂದು ಕಾಣಿಸಿದರೆ ತಪ್ಪಾಗುತ್ತದೆ’ ಅವರ ಎತ್ತರವನ್ನು ಮುಟ್ಟಿದಂತೆ ಆಗುವುದಿಲ್ಲ.

(ಪ್ರೊ. ಸಾ. ಕೃ. ರಾಮಚಂದ್ರರಾವ್‌ ಅವರು ಸಂಪಾದಿಸಿರುವ ‘ಪುರಂದರ ಸಾಹಿತ್ಯ ದರ್ಶನ’ದಿಂದ ಆರಿಸಿದ ಭಾಗ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT