ಮೊನೆ ಮೂರು, ಹಿನ್ನೆ ಒಂದು.
ಆ ಸೂಜಿಯಲ್ಲಿ ಹೊಲಿದೆಹೆನೆಂದಡೆ ಕುಪ್ಪಸಕ್ಕೆ ಚಿಪ್ಪು ಒಡಗೂಡವು ನೋಡಾ.
ಮೊನೆಯೊಂದು, ಹಿನ್ನೆ ಮೂರಾಗಿ ಹೊಲಿದಡೆ,
ಹಿನ್ನೆಯ ಮೂರುದಾರ ಮೊನೆಯ ನಾಳದಲ್ಲಿ ಅಡಗಿದವು ನೋಡಾ.
ಆ ಮೂರ ಹಿಂಚಿ ಹಾಕಿ, ಮೊನೆಯೊಂದರಲ್ಲಿ ಬೇರೆ ಬೇರೆ ಹೊಲಿಯಬಲ್ಲಡೆ
ಪ್ರಸ್ನನ್ನ ಕಪಿಲಸಿದ್ಧಮಲ್ಲಿಕಾರ್ಜುನಲಿಂಗವ ಬಲ್ಲವ.

-ಸೂಜಿಕಾಯಕದ ರಾಮಿತಂದೆ

ತತ್ವಜ್ಞಾನ, ಅನುಭಾವದ ಸಾಧನೆ, ಆತ್ಮಸಾಕ್ಷಾತ್ಕಾರ ಇವೆಲ್ಲ ಸಾಮಾನ್ಯರಿಗೆ ಅಲ್ಲ ಮತ್ತು ಸಲ್ಲ ಎಂಬ ಅಲಿಖಿತ ಕಾನೂನು ಜಾರಿಯಲ್ಲಿತ್ತು, ನಮ್ಮ ಹಿಂದಿನ ಪರಂಪರೆಯಲ್ಲಿ. ಅದನ್ನು ಕಿತ್ತೊಗೆದು, ವರ್ಗ, ವರ್ಣ, ಲಿಂಗಭೇದಗಳಿಲ್ಲದೆ, ಎಲ್ಲರೂ ಅವುಗಳನ್ನು ಸಾಧಿಸಬಹುದು ಎಂಬುದನ್ನು ಕ್ರಿಯಾತ್ಮಕವಾಗಿ ತೋರಿಸಿಕೊಟ್ಟರು ಕನ್ನಡ ಶರಣರು. ಈ ಕಾರ್ಯಕ್ಕೆ ಅವರು ಬಳಸಿಕೊಂಡದ್ದು, ಶ್ರಮಜೀವಿಗಳ ಕಾಯಕದ ರೀತಿ ಮತ್ತು ಪರಿಕರಗಳನ್ನು. ಬಟ್ಟೆ ಹೊಲಿಯುವ ವೃತ್ತಿ ಮಾಡುತ್ತಿದ್ದ ಸೂಜಿಕಾಯಕದ ರಾಮಿತಂದೆಯ ಈ ವಚನ ಅಂಥ ಒಂದು ಪ್ರಾಯೋಗಿಕ ಸತ್ಯವನ್ನೇ ನಮ್ಮ ಕಣ್ಮುಂದೆ ತಂದು ನಿಲ್ಲಿಸುತ್ತದೆ.

ನಮ್ಮ ಮನಸ್ಸು ಮತ್ತು ಕ್ರಿಯೆಗಳನ್ನು ಸತ್ವ, ರಜ, ಮತ್ತು ತಮ ಎಂಬ ಮೂರು ಗುಣಗಳು ಸದಾ ನಿಯಂತ್ರಿಸುತ್ತಿರುತ್ತವೆ. ಒಳ್ಳೆಯ, ಮಧ್ಯಮ ಮತ್ತು ಕೆಟ್ಟ ಎಂಬ ಅರ್ಥವನ್ನು ಈ ಮೂರೂ ಪ್ರತಿನಿಧಿಸುತ್ತಿದ್ದು, ಇದರಲ್ಲಿ ಸತ್ವಗುಣವು ಮನುಷ್ಯನ ಬದುಕು ಮತ್ತು ವ್ಯಕ್ತಿತ್ವಕ್ಕೆ ಬೆಳಕನ್ನು ತರುವಂಥದ್ದು. ಅನುಭಾವದ ಸಾಧಕನಿಗೆ ಸತ್ವಗುಣದ ಅನುಸರಣೆ ಅತ್ಯಗತ್ಯ. ಇದನ್ನು ನುಡಿ ಮತ್ತು ನಡೆ ಎರಡರಲ್ಲೂ ಆಚರಿಸುವುದೇ ಅನುಭಾವ ಸಾಧನೆಯ ನಿಜವಾದ ಮಾರ್ಗವೆಂದು ಶರಣರು ಪ್ರತಿಪಾದಿಸಿದರು.

ಇಂಥ ಸತ್ವಗುಣದ ಕ್ರಿಯಾತ್ಮಕ ಸಾಧನೆಯ ಮಾರ್ಗವನ್ನು, ಸೂಜಿ ಕಾಯಕದ ರಾಮಿತಂದೆ ಬಟ್ಟೆ ಹೊಲಿಯುವ ತನ್ನ ಕಾಯಕದ ಕ್ರಮ ಮತ್ತು ಸಲಕರಣೆಗಳ ಮೂಲಕ ಈ ವಚನದಲ್ಲಿ ಅನನ್ಯವಾಗಿ ಕಟ್ಟಿಕೊಡುತ್ತಾನೆ. ಸತ್ವ, ರಜ ಮತ್ತು ತಮ-ಈ ಮೂರೂ ಗುಣಗಳನ್ನು ಆತ ಇಲ್ಲಿ ದಾರ ಪೋಣಿಸಿದ ಮೂರು ಸೂಜಿಗಳಿಗೆ ಸಮೀಕರಿಸಿ, ಅವುಗಳಿಂದ ಬಟ್ಟೆ ಹೊಲಿಯುವ ಪ್ರಾತ್ಯಕ್ಷಿಕೆ ತೋರಿಸುತ್ತಾನೆ. ಇಂಥ ಮೂರು ಮೊನೆಗಳ (ತುದಿಯ) ಹಾಗೂ ಒಂದು ಹಿನ್ನೆಯ (ಹಿಂಭಾಗ) ಸೂಜಿಯಿಂದ ಚುಚ್ಚಿ ಬಟ್ಟೆ ಹೊಲಿದರೆ, ಅದರಿಂದ ಖಂಡಿತವಾಗಿ ಹೊಲಿಗೆ ಬೀಳಲಾರದು. ಇದನ್ನು ಯಾರಾದರೂ ಮಾಡಿ ನೋಡಬಹುದು.

ಇದಕ್ಕೆ ಬದಲಾಗಿ ಒಂದು ಮುಂಭಾಗ (ಮೊನೆ) ಮತ್ತು ಮೂರು ಹಿಂಭಾಗ (ಹಿನ್ನೆ) ಇರುವ ಸೂಜಿಯಿಂದ ಹೊಲಿದರೆ, ಆ ಮೂರೂ ದಾರಗಳು ಒಂದೇ ರಂದ್ರದಲ್ಲಿ ಅಡಗಿಬಿಡುತ್ತವೆ. ಇದೇನೋ ನಿಜ, ಆದರೆ ಅದರಲ್ಲಿ ಒಳ್ಳೆಯ, ಮಧ್ಯಮ ಮತ್ತು ಕೆಟ್ಟ ಗುಣದ ಮೂರೂ ದಾರಗಳೂ ಸೇರುವ ಕಾರಣ, ಸದುದ್ದೇಶದ ಹೊಲಿಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಆತ, ಈ ಮೂರೂ ಸೂಜಿಗಳನ್ನು ಹಿಂದೆ ಸರಿಸಿ, ಕೇವಲ ಸತ್ವಗುಣದ ಒಂದೇ ಸೂಜಿಯಿಂದ ಹೊಲಿದರೆ, ಆಗ ನಮ್ಮ ಅಪೇಕ್ಷೆಯ ಹೊಲಿಗೆ ಬೀಳುತ್ತದೆಯೆಂದೂ, ಅದುವೇ ನಿಜವಾದ ಅರಿವಿನ ಕ್ರಿಯೆಯೆಂದೂ ಸೂಚಿಸುತ್ತಾನೆ. ಹೀಗೆಯೇ ಅನುಭಾವದ ಸಾಧನೆಯಲ್ಲಿಯೂ ಸತ್ವಗುಣದ ಮಾರ್ಗವೊಂದೇ ನಿಜವಾದ ಸಾಧನಾಪಥವೆಂಬುದನ್ನು ವಚನ ಅರ್ಥವತ್ತಾಗಿ ಬಿಂಬಿಸುತ್ತದೆ.

ಶರೀರ ಮತ್ತು ಆತ್ಮಗಳಿಂದ ಕೂಡಿದ ವ್ಯಕ್ತಿತ್ವದ ಬಟ್ಟೆಯನ್ನು, ರಜ ಮತ್ತು ತಮ ಗುಣಗಳಿಲ್ಲದ, ಕೇವಲ ಸತ್ವಗುಣದ ಸೂಜಿಯಿಂದ ಮಾತ್ರ ಹೊಲಿಯಬೇಕೆಂಬ ಆಶಯವನ್ನು ರಾಮಿತಂದೆ ಇಲ್ಲಿ ತನ್ನ ಕಾಯಕದ ರೂಪಕದೊಂದಿಗೆ ಹೇಳುತ್ತಾನೆ. ಶರಣರು ಸತ್ವಗುಣದ ಕಾಯಕದಲ್ಲಿಯೇ ಕೈಲಾಸ ಕಂಡವರು. ಅಂಥ ಅನನ್ಯ ಸಾಧನೆಯ ಮಾರ್ಗವೇ ಇಲ್ಲಿ ಸೂಚಿತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.