ಮಂಗಳವಾರ, ಡಿಸೆಂಬರ್ 7, 2021
20 °C

ವಚನಾಮೃತ: ದೋಷಗಳನ್ನು ದೂರ ಮಾಡಿಕೊಳ್ಳೋಣ

ಡಾ.ಅಲ್ಲಮಪ್ರಭು ಸ್ವಾಮೀಜಿ Updated:

ಅಕ್ಷರ ಗಾತ್ರ : | |

Prajavani

ಆಸೆ, ಆಮಿಷ, ತಾಮಸ, ಹುಸಿ, ವಿಷಯ,

ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ

ಇವನೆನ್ನ ನಾಲಿಗೆಯ ಮೇಲಿಂದತ್ತ ತೆಗೆದು ಕಳೆಯಯ್ಯಾ

ಅದೇಕೆಂದಡೆ: ನಿಮ್ಮತ್ತಲೆನ್ನ ಬರಲೀಯವು.

ಇದು ಕಾರಣ, ಇವೆಲ್ಲವ ಕಳೆದು ಎನ್ನ

ಪಂಚೈವರ ಭಕ್ತರ ಮಾಡು ಕೂಡಲಸಂಗಮದೇವಾ.

ಭಗವಂತನನ್ನು ಒಲಿಸಿಕೊಳ್ಳಲು ಮಾನವನು ನಿರಂತರ ಪ್ರಯತ್ನಿಸುತ್ತಿರುತ್ತಾನೆ. ಆದರೆ, ಅವನಲ್ಲಿರುವ ಕೆಲವೊಂದಿಷ್ಟು ಗುಣಗಳು ಅವನನ್ನು ಭಗವಂತನ ಪ್ರಾರ್ಥನೆ ಮಾಡದಂತೆ ಮಾಡುತ್ತವೆ. ಆಸೆ, ಆಮಿಷ, ತಾಮಸ, ಹುಸಿ, ವಿಷಯ, ಕುಟಿಲ, ಕುಹಕ, ಕ್ರೋಧ, ಕ್ಷುದ್ರ, ಮಿಥ್ಯೆ ಇವುಗಳೆ ಭಗವಂತನ ಆರಾಧನೆಗೆ ಅಡ್ಡಿಯಾಗುವ ಗುಣಗಳು ಎನ್ನುವುದನ್ನು ಬಸವಣ್ಣನವರು ಈ ವಚನದ ಮೂಲಕ ವಿವರಿಸಿದ್ದಾರೆ. ಸದ್ಗುಣಿಗಳಾದವರಲ್ಲಿ ಈ ಮೇಲಿನ ದೋಷಗಳು ಇರುವುದಿಲ್ಲ. ದುರ್ಗುಣಿಗಳಲ್ಲಿ ಇವು ಮನೆ ಮಾಡಿರುತ್ತವೆ. ಅದಕ್ಕಾಗಿಯೇ ಬಸವಣ್ಣನವರು ಇವುಗಳನ್ನು ನನ್ನಿಂದ ದೂರ ಮಾಡು ಎಂದಿದ್ದಾರೆ. ಸಕಲ ಸದ್ಗುಣಗಳನ್ನು ಒಳಗೊಂಡ ಭಕ್ತಿ ಭಂಡಾರಿ ಎನಿಸಿಕೊಂಡಿರುವ ಬಸವಣ್ಣನವರೇ ಇಂತಹ ಮಾತುಗಳನ್ನು ಈ ಗುಣಗಳ ಕುರಿತು ಹೇಳಿದ್ದಾರೆಂದರೆ, ಸಾಮಾನ್ಯರಾದ ನಾವು ಇವುಗಳಿಂದ ಎಷ್ಟು ತೊಂದರೆಗೆ ಒಳಗಾಗುತ್ತೇವೆ ಎನ್ನುವುದನ್ನು ಆಲೋಚಿಸುವುದು ಮುಖ್ಯವಾಗಿದೆ. ದೋಷಗಳನ್ನು ಮತ್ತು ದುರ್ಗುಣಗಳನ್ನು ದೂರ ಮಾಡಿಕೊಳ್ಳಲು ನಾವೆಲ್ಲರೂ ಪ್ರಯತ್ನಿಸಬೇಕು.

ಲೇಖಕ: ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.