ಎಂತು ಶಿವಭಕ್ತಿಯ ನಾನುಪಮಿಸುವೆನಯ್ಯಾ?

ಎಂತು ಶಿವಾಚಾರವೆನಗೆ ವೆದ್ಯವಪ್ಪುದಯ್ಯಾ?

ಕಾಮ, ಕ್ರೋಧ, ಲೋಭ, ಮೋಹ, ಮದ,

ಮತ್ಸರದಿಂದ ಕಟ್ಟುವಡೆದೆನು.

ಹಸಿವು, ತೃಷೆ, ವ್ಯಸನದಿಂದ ಕುದಿಯುತ್ತಿದ್ದೇನೆ.

ಪಂಚೇಂದ್ರಿಯ, ಸಪ್ತಧಾತು ಹರಿಹಂಚು ಮಾಡಿ ಕಾಡಿಹವಯ್ಯಾ!

ಅಯ್ಯಾ,ಅಯ್ಯಾ ಎನ್ನ ಹುಯ್ಯಲ ಕೇಳಯ್ಯಾ

ಕೂಡಲಸಂಗಮದೇವಾ ನಾನೇವೆನೇವೆನಯ್ಯಾ!

ಭಕ್ತನಾದವನು ಭಗವಂತನ ಸ್ಮರಣೆ ಮಾಡಬೇಕೆಂದರೆ ಹಲವು ಅಡ್ಡಿ–ಆತಂಕಗಳು ಬರುವುದು ಸಹಜ. ಅವುಗಳನ್ನು ಮೀರಿ ಭಗವಂತನ ಪೂಜೆ ಪ್ರಾರ್ಥನೆಗಳನ್ನು ಭಕ್ತಿ ಶ್ರದ್ಧೆಯಿಂದ ಮಾಡಬೇಕು. ಮಾನವನ ಅಂತರಂಗದಲ್ಲಿರುವ ಹಲವಾರು ದುರ್ಗುಣಗಳು ಆತನನ್ನು ಭಗವಂತನ ಆರಾಧನೆ ಮಾಡದಂತೆ ತಡೆಯುತ್ತವೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಎಂಬ ಷಡ್‌ವೈರಿಗಳು; ಹಸಿವು, ತೃಷೆ, ವ್ಯಸನಗಳಿಂದ ನಾನು ಕಂಗೆಟ್ಟಿದ್ದೇನೆ. ಪಂಚೇಂದ್ರಿಯಗಳು ಹಾಗೂ ಸಪ್ತಧಾತು (ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜ, ಶುಕ್ರ)ಗಳು ನನ್ನನ್ನು ಹರಿದು ಹಂಚಿದ್ದಾವೆ. ಅಯ್ಯಾ ಭಗವಂತನೆ ನನ್ನ ಮೊರೆಯನ್ನು ಕೇಳಿ ಇವುಗಳ ಪ್ರಭಾವದಿಂದ ಮುಕ್ತನನ್ನಾಗಿಸಿ ಶಿವಭಕ್ತಿ, ಶಿವಾಚಾರದಲ್ಲಿ ತೊಡಗುವಂತೆ ಮಾಡು ಎಂದು ಬಸವಣ್ಣನವರು ಪರಿ, ಪರಿಯಿಂದ ಭಗವಂತನಲ್ಲಿ ಪ್ರಾರ್ಥನೆ ಇಟ್ಟಿದ್ದಾರೆ.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.