ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ: ಸೌಮ್ಯ ಸ್ವಭಾವದಿಂದ ಮನಸ್ಸು ಗೆಲ್ಲಬೇಕು

Last Updated 18 ನವೆಂಬರ್ 2020, 4:57 IST
ಅಕ್ಷರ ಗಾತ್ರ

ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯ

ತನಗಾದ ಆಗೇನು ಅವರಿಗಾದ ಚೇಗೇನು

ತನುವಿನ ಕೋಪ ತನ್ನ ಹಿರಿತನದ ಕೇಡು

ಮನದ ಕೋಪ ತನ್ನ ಅರಿವಿನ ಕೇಡು

ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆ ಮನೆಯ

ಸುಡದು ಕೂಡಲಸಂಗಮದೇವಾ

ಮಾನವನು ತನ್ನ ಸೌಮ್ಯ ಸ್ವಭಾವದಿಂದ ಎಲ್ಲರ ಮನಸ್ಸನ್ನು ಗೆಲ್ಲಬೇಕು. ಅದು ಅವನನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯತ್ತದೆ. ಶಾಂತಿ, ಸಹನೆ ಮಾನವನ ಜೀವನದ ಅವಿಭಾಜ್ಯ ಅಂಗಗಳಾಗಬೇಕು. ಕೋಪ ಮಾನವನ ಬಹಿರಂಗದ ಶತ್ರುವಾಗಿದೆ. ಯಾವ ವ್ಯಕ್ತಿಯು ತನ್ನ ಮೂಗಿನ ನೇರದಲ್ಲಿ ಕೋಪವನ್ನು ಒಳಗೊಂಡಿರುತ್ತಾನೆಯೋ ಅವನಿಂದ ಎಲ್ಲರೂ ದೂರವಾಗುತ್ತಾರೆ. ಶಾಂತ ಸ್ವಭಾವವನ್ನು ಒಳಗೊಂಡಿರುವವರು ಸದಾಕಾಲ ಆದರಣಿಯರಾಗಿರುತ್ತಾರೆ. ಅದಕ್ಕೆ ಬಸವಣ್ಣನವರು ತಮ್ಮ ಮೇಲೆ ಯಾರಾದರೂ ಕೋಪಗೊಂಡರೆ ಮರಳಿ ಅವರ ಮೇಲೆ ಕೋಪಗೊಳ್ಳಬಾರದು. ಹಾಗೇನಾದರೂ ಕೋಪಗೊಂಡರೆ ಅದು ತಮ್ಮ ವ್ಯಕ್ತಿತ್ವವನ್ನು ತೋರಿಸಿಕೊಂಡಂತೆ. ಮನೆಯೊಳಗೆ ಹತ್ತಿದ ಬೆಂಕಿ ಮನೆಯನ್ನು ಮೊದಲು ಆಹುತಿ ತೆಗೆದುಕೊಳ್ಳುವಂತೆ, ಕೋಪವು ಕೂಡ ಮಾನವನ ವ್ಯಕ್ತಿತ್ವವನ್ನು ಹಾಳು ಮಾಡುತ್ತದೆ ಎನ್ನುವುದನ್ನು ಮೇಲಿನ ವಚನದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT