ಶುಕ್ರವಾರ, ಜೂನ್ 25, 2021
21 °C

ಭಕ್ತಿ ಮಾರ್ಗ ಅನುಸರಿಸಿ: ಡಾ.ಅಲ್ಲಮಪ್ರಭು ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

*****

ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲವಯ್ಯ

ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲವಯ್ಯ

ನಾದವ ಮಾಡಿದ ರಾವಣಂಗೆ ಅರೆಆಯುಷ್ಯವಾಯಿತ್ತು.

ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.

ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,

ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.

ಭಗವಂತನನ್ನು ಒಲಿಸಿಕೊಳ್ಳಲು ಹಲವಾರು ಮಾರ್ಗಗಳಿವೆ. ಅವೆಲ್ಲವುಗಳಲ್ಲಿ ಸರಳವಾದ ಮಾರ್ಗ ಯಾವುದು ಎನ್ನುವುದನ್ನು ಬಸವಣ್ಣನವರು ಇಲ್ಲಿ ತಮ್ಮ ವಚನದ ಮೂಲಕ ತಿಳಿಸಿದ್ದಾರೆ. ಭಗವಂತನು ಸಂಗೀತಪ್ರಿಯ ಎಂದು ಹಲವರು ಸಂಗೀತದ ಮುಖಾಂತರ ಒಲಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ವೇದಾಗಮಗಳಿಗೆ ಭಗವಂತ ಒಲಿಯುತ್ತಾನೆ ಎಂದು ಹಲವರು ವೇದಾಗಮಗಳ ಹೋಗುತ್ತಾರೆ. ರಾವಣನು ಭಗವಂತನನ್ನು ಸಂಗೀತದ ಮುಖಾಂತರವೆ ಒಲಿಸಿಕೊಳ್ಳಲು ಪ್ರಯತ್ನಿಸಿ ತನ್ನ ಆಯುಷ್ಯವನ್ನೇ ಅರ್ಧ ಮಾಡಿಕೊಂಡ. ಸದಾಕಾಲ ವೇದವನ್ನೆ ಪಠಿಸುವ ಬ್ರಹ್ಮನು ತನ್ನ ಒಂದು ಶಿರವನ್ನೇ ಕಳೆದುಕೊಳ್ಳಬೇಕಾಯಿತು. ಅದಕ್ಕೆ ಭಗವಂತ ನಾದಪ್ರಿಯನೂ ಅಲ್ಲ; ವೇದಪ್ರಿಯನು ಅಲ್ಲ. ಆತ ಭಕ್ತಿಪ್ರಿಯನಾಗಿದ್ದಾನೆ ಎನ್ನುವುದು ಈ ವಚನದ ಸಾರವಾಗಿದೆ. ಆದ್ದರಿಂದ ನಾವೆಲ್ಲರೂ ದೇವರ ಬಗ್ಗೆ ಶುದ್ಧ ಭಕ್ತಿಯಿಂದ ಇದ್ದರೆ ಎಲ್ಲವನ್ನೂ ಪಡೆಯಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು