ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇದವ್ಯಾಸರ ಶಿವಪುರಾಣಸಾರ | ಓಂಕಾರ ಮತ್ತು ಲಿಂಗಗಳ ಮಹಾತ್ಮೆ

Last Updated 17 ಫೆಬ್ರುವರಿ 2022, 20:15 IST
ಅಕ್ಷರ ಗಾತ್ರ

ಈಗ ಸೂತಮಹಾಮುನಿಯುಓಂಕಾರಮತ್ತದರ ಆರುಲಿಂಗಗಳಮಹಾತ್ಮೆಮತ್ತುಶಿವಭಕ್ತರು ಮಾಡಬೇಕಾದ ಪೂಜಾಕ್ರಮ ಹೇಳುತ್ತಾನೆ.

ಓಂಕಾರದ ಮತ್ತೊಂದು ಅರ್ಥವಾದ ‘ಪ್ರಣವ’ದಲ್ಲಿ ’ಪ್ರ’ ಎಂದರೆ ಪ್ರಕೃತಿ ಅಥವ ಸಂಸಾರವೆಂದು ಅರ್ಥ. ‘ಣವ’ ಎಂದರೆ ಆ ಸಂಸಾರ ಸಮುದ್ರವನ್ನು ದಾಟಿಸುವಂತಹ ಹೊಸ ನೌಕೆಯೆಂದು ಅರ್ಥ. ಒಟ್ಟಿನಲ್ಲಿ ಸಂಸಾರಸಾಗರವನ್ನು ದಾಟಿಸುವುದು ಎಂದು ಪ್ರಣವದ ಅರ್ಥ. ಹಾಗೇ, ‘ಪ್ರ’ ಎಂದರೆ ಪ್ರಪಂಚ. ‘ನ’ ಎಂದರೆ ಇಲ್ಲ. ‘ವಃ’ ಎಂದರೆ ಬ್ರಹ್ಮಸ್ವರೂಪವಾದ ಜೀವನಿಗೆ ಎಂದು ಅರ್ಥ. ಅಂದರೆ ನಮ್ಮ ಸ್ವರೂಪವಾದ ಬ್ರಹ್ಮವೊಂದೇ ಇರುವುದು. ಅದು ಸತ್ಯವಾದುದು. ಈ ಪ್ರಪಂಚವು ನಿಜವಾಗಿ ಇಲ್ಲ, ಅದು ಶೂನ್ಯಾವಸ್ಥೆ. ಅದು ನಮ್ಮ ಅಜ್ಞಾನದಿಂದ ಕಾಣಿಸುತ್ತಲಿರುವ ಭ್ರಮೆ. ಈ ಭ್ರಾಮಕ ಪ್ರಪಂಚದಿಂದ ಮುಕ್ತಿ ಪಡೆಯುವುದು ಪ್ರಣವದ ಅರ್ಥ. ಅಂದರೆ, ನಾವು ಭ್ರಮೆಯ ಪ್ರಪಂಚದಿಂದ ಹೊರಬರುವುದೇ ಮುಕ್ತಿ. ಇದನ್ನೇ ‘ಪ್ರಣವ’ ಎಂದು ಹೇಳಲಾಗುತ್ತದೆ.

ಪ್ರಣವ ಅಂದರೆಓಂಕಾರ. ಪ್ರಣವಮಂತ್ರವನ್ನು ಜಪಿಸುವಮತ್ತುಸ್ವಸ್ವರೂಪವನ್ನು ಪೂಜಿಸುವ ಯೋಗಿಗಳಿಗೆ ಸಕಲ ಕರ್ಮಗಳೂ ನಾಶವಾಗುವುದು. ಇಂಥ ಶಿವಭಕ್ತರಿಗೆ ಹೊಸದಾಗಿ ದಿವ್ಯ ಬ್ರಹ್ಮಜ್ಞಾನ ಸಿಗುತ್ತದೆ. ಅಲ್ಲದೆ, ಮಾಯೆಯ ಸಂಬಂಧವಿಲ್ಲದ ನಿರ್ವಿಕಾರವಾದ, ವ್ಯಾಪಕವಾದಮತ್ತುಶುದ್ಧವಾದ ಸ್ವರೂಪವುಳ್ಳಂತಹ ಬ್ರಹ್ಮವಸ್ತುವನ್ನು ಸೃಷ್ಟಿಸುತ್ತದೆ ಎಂದು ಪ್ರಣವದ ಅರ್ಥವನ್ನು ವಿವರಿಸಲಾಗಿದೆ. ಪ್ರಣವದಲ್ಲಿ ಸ್ಥೂಲಮತ್ತುಸೂಕ್ಷ್ಮ ಎಂಬ ಎರಡು ವಿಧವಿದೆ. ಸೂಕ್ಷ್ಮಪ್ರಣವ ಎಂದರೆ ಒಂದೇ ಓಂಕಾರವೆಂಬ ಅಕ್ಷರವುಳ್ಳದ್ದು. ಸ್ಥೂಲಪ್ರಣವ ಎಂದರೆ ಐದು ಅಕ್ಷರಗಳುಳ್ಳದ್ದು.

ಸೂಕ್ಷ್ಮಪ್ರಣವದಲ್ಲಿ ಅವ್ಯಕ್ತವಾದ ಐದು ಅಕ್ಷರಗಳಿದ್ದರೆ, ಸ್ಥೂಲದಲ್ಲಿ ವ್ಯಕ್ತವಾದ ಐದು ಅಕ್ಷರಗಳಿವೆ. ಜೀವನ್ಮುಕ್ತಿ ಬಯಸುವವನಿಗೆ ಸರ್ವಶ್ರೇಷ್ಠವಾದ ಸೂಕ್ಷ್ಮಪ್ರಣವ ಪ್ರಶಸ್ತವಾದುದು. ಆತ ಮರಣಪರ್ಯಂತವಾಗಿ ಪ್ರಣವವನ್ನು ಉಚ್ಚುರಿಸುತ್ತಾ ಅದರರ್ಥವನ್ನು ಅನುಸಂಧಾನ (ಸ್ಮರಣೆ)ಮಾಡಿದರೆ ಶಿವನನ್ನು ಸೇರುವನು. ಕೇವಲ ಅರ್ಥವನ್ನು ಸ್ಮರಿಸದೆ, ಮಂತ್ರವನ್ನು ಜಪಿಸಿದರೆ ಯೋಗವು ಲಭಿಸುವುದು.
ಸೂಕ್ಷ್ಮಪ್ರಣವದಲ್ಲಿ ಹ್ರಸ್ವಮತ್ತುದೀರ್ಘವೆಂದು ಎರಡು ವಿಧವಿದೆ. ಅಕಾರ ಉಕಾರ ಮಕಾರಗಳೊಡನೆ ಬಿಂದು–ನಾದಗಳು ಕೂಡಿದ ಓಂಕಾರವು ದೀರ್ಘಪ್ರಣವ. ಇದನ್ನು ಯೋಗಿಗಳು ಸದಾ ಹೃದಯದಲ್ಲಿ ಧ್ಯಾನಿಸುವರು. ಶಿವ, ಶಕ್ತಿಮತ್ತುಶಿವಶಕ್ತಿ–ಐಕ್ಯ ಎಂಬ ಮೂರು ವಸ್ತುಗಳ ಸ್ವರೂಪವುಳ್ಳ ಮಕಾರವು ಹ್ರಸ್ವಪ್ರಣವ. ಸಕಲ ಪಾಪವು ಕ್ಷಯವಾಗಬೇಕೆಂದು ಅಪೇಕ್ಷಿಸುವವರು ಮೂರು ವಸ್ತುಸ್ವರೂಪವಾದ ಹ್ರಸ್ವಪ್ರಣವವನ್ನು ಜಪಿಸಬೇಕು.

ಭೂಮಿ, ವಾಯು, ಸುವರ್ಣ, ಸಾಲ, ಸ್ವರ್ಗ, ಶಬ್ದ ಮೊದಲಾದ ಹತ್ತು ಇಂದ್ರಿಯ ವಿಷಯಗಳು ಹತ್ತು ದಿಕ್ಕುಗಳು. ಇವುಗಳಿಗೆ ಪ್ರವೃತ್ತಗಳೆಂದು ಹೆಸರು. ಗೃಹಸ್ಥರು ಹ್ರಸ್ವಪ್ರಣವವನ್ನೇ ಪಠಿಸಬೇಕು. ವಿರಕ್ತರಾದ ಸನ್ಯಾಸಿಗಳು ದೀರ್ಘಪ್ರಣವವನ್ನು ಉಚ್ಚರಿಸಬೇಕು. ವ್ಯಾಹೃತಿಯೇ ಮುಂತಾದ ಮಂತ್ರಗಳಲ್ಲಿ ಶಬ್ದಕಲೆಗಳಿಂದ ಕೂಡಿರುವ ಪ್ರಣವವನ್ನು ಉಚ್ಚರಿಸಬೇಕು. ವೇದಪಾರಾಯಣದ ಆದಿಯಲ್ಲೂ ಸಂಧ್ಯಾವಂದನೆಗಳಲ್ಲಿಯೂ ದೀರ್ಘಪ್ರಣವವನ್ನು ಉಚ್ಚರಿಸಬೇಕು. ಒಂಬತ್ತು ಕೋಟಿ ಪ್ರಣವಜಪಗಳನ್ನು ಮಾಡಿದ ಪುರುಷನು ಶುದ್ಧನಾಗುವನು. ಮತ್ತೆ ಒಂಬತ್ತು ಕೋಟಿ ಜಪವನ್ನು ಮಾಡಿದರೆ ಪೃಥ್ವಿಯನ್ನು ಜಯಿಸಬಹುದು. ಮತ್ತೊಮ್ಮೆ ಒಂಬತ್ತು ಕೋಟಿ ಜಪಗಳಿಂದ ವಾಯುಜಯವನ್ನು ಪಡೆಯುವನು. ಈ ರೀತಿ ನೂರೆಂಟು ಕೋಟಿ ಪ್ರಣವಜಪಗಳನ್ನು ಮಾಡಿದರೆ, ಶುದ್ಧ ಯೋಗವನ್ನು ಪಡೆಯುವನು. ಶುದ್ಧಯೋಗವನ್ನು ಪಡೆದವನು ಜೀವನ್ಮುಕ್ತನಾಗುವನು.

ಓಂಕಾರರೂಪಿಯಾದ ಶಿವನನ್ನು ಸದಾ ಜಪಿಸುತ್ತಾಮತ್ತುಧ್ಯಾನಿಸುತ್ತಾ ಸಮಾಧಿನಿಷ್ಠನಾಗುವ ಮಹಾಯೋಗಿಯು ಶಿವನೇ ಆಗುವನು ಋಷಿ, ಛಂದಸ್ಸುಮತ್ತುದೇವತೆಗಳನ್ನು ದೇಹದಲ್ಲಿ ವಿನ್ಯಾಸಮಾಡಿ ಪುನಃ ಜಪಿಸಬೇಕು. ಮಾತೃಕಾಕ್ಷರಗಳಿಂದ ಕೂಡಿದ ಅಂಗನ್ಯಾಸ, ಕರನ್ಯಾಸಗಳೊಡನೆ ಪ್ರಣವವನ್ನು ದೇಹದಲ್ಲಿ ವಿನ್ಯಾಸ ಮಾಡಿದರೆ ಋಷಿಯಾಗುವನು. ಹದಿನಾರು ಉಪಚಾರಗಳಿಂದ ಶಿವಯೋಗಿಗಳನ್ನು ಪೂಜಿಸಿದ ಶುದ್ಧವಾದ ನರನು ಸಾಲೋಕ್ಯ ಸೇರಿ ಮುಕ್ತಿಯನ್ನು ಪಡೆಯುವನು ಎಂದು ಸೂತಮುನಿಯು ಪ್ರಯಾಗದ ಋಷಿಗಳಿಗೆ ತಿಳಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT