ಗುರುವಾರ , ಏಪ್ರಿಲ್ 9, 2020
19 °C

ವಾರ ಭವಿಷ್ಯ | 1 -03 -2020 ರಿಂದ 7-03 -2020ರ ವರೆಗಿನ ರಾಶಿ ಭವಿಷ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಷ ರಾಶಿ
ನಿಮ್ಮ ಸತತ ಪ್ರಯತ್ನ ನಿಮ್ಮನ್ನು ಗುರಿಯತ್ತ ಕೊಂಡೊಯ್ಯುವುದು. ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿಸುವವರಿಗೆ ಮತ್ತು ಅಭಿವೃದ್ಧಿ ಪಡಿಸುವವರಿಗೆ ಯಶಸ್ಸು ಇದೆ. ಇವರ ವ್ಯವಹಾರ ಏರು ಮುಖವಾಗಿರುತ್ತದೆ. ತಂದೆ ಮತ್ತು ಮಕ್ಕಳ ಸಂಬಂಧದಲ್ಲಿ ಸ್ವಲ್ಪ ವ್ಯತ್ಯಾಸ ಇರುತ್ತದೆ. ಸ್ತ್ರೀಯರಿಗೆ ವ್ಯವಹಾರದಲ್ಲಿ ಲಾಭ ಹೆಚ್ಚುತ್ತದೆ ಹಾಗೂ ಹಾಗೂ ವ್ಯವಹಾರ ವಿಸ್ತರಣೆಯಾಗಿ ಹೊಸ ಶಾಖೆಗಳನ್ನು ತೆರೆಯಬಹುದು. ಧನದ ಒಳಹರಿವು ಸಾಮಾನ್ಯವಾಗಿರುತ್ತದೆ.

ವೃಷಭ ರಾಶಿ 
ತಾಯಿಯ ಆಶೀರ್ವಾದವೂ ನಿಮಗೆ ಸಂಪೂರ್ಣ ಇರುತ್ತದೆ. ಒಡಹುಟ್ಟಿದವರಿಂದ ಸಹಾಯಗಳು ಹರಿದುಬರುತ್ತವೆ. ಮಕ್ಕಳ ವಿಚಾರದಲ್ಲಿ ಒಳ್ಳೆಯ ಸಮಾಚಾರಗಳು ಕೇಳಿಬರುತ್ತವೆ. ಹರಿತ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರ, ಅವುಗಳಿಂದ ಗಾಯಗಳಾಗುವ ಸಾಧ್ಯತೆ ಇದೆ. ಆರೋಗ್ಯ ವಿಚಾರದಲ್ಲಿ ಸ್ವಯಂವೈದ್ಯ ನಿಮ್ಮನ್ನು ಇನ್ನೂ ಕಷ್ಟಕ್ಕೆ ಈಡುಮಾಡಬಹುದು. ವಿದೇಶದಲ್ಲಿರುವ ಮಕ್ಕಳಿಂದ ಧನಸಹಾಯ ಬರುತ್ತದೆ. ಮಕ್ಕಳನ್ನು ನೋಡಿಬರಲು ವಿದೇಶಕ್ಕೆ ಹೋಗಿಬರಬಹುದು.

ಮಿಥುನ ರಾಶಿ
ಸರ್ಕಾರಕ್ಕೆ ಸಂಬಂಧಿಸಿದ ಕೆಲಸಗಳು ಸರಾಗವಾಗಿ ಆಗುತ್ತವೆ ಮತ್ತು ಭೂಮಿಗೆ ಸಂಬಂಧಿಸಿದ ದಾಖಲೆಗಳ ವಿಚಾರದಲ್ಲಿ ಇದ್ದ ವ್ಯತ್ಯಾಸಗಳು ಸರಿಯಾಗುತ್ತವೆ. ಹಿರಿಯರಿಂದ ಧನಸಹಾಯಗಳು ಹರಿದುಬರುತ್ತವೆ. ವಿವಾಹಿತ ಮಹಿಳೆಯರು ವಿದೇಶದಲ್ಲಿರುವ ತಮ್ಮ ಸಂಗಾತಿಯನ್ನು ಹೋಗಿ ಸೇರಿಕೊಳ್ಳಬಹುದು. ವಿದೇಶದಲ್ಲಿರುವವರೆಗೆ ತಮ್ಮ ಮಾತೃ ಭೂಮಿಯಲ್ಲಿ ಸ್ಥಿರಾಸ್ತಿ ಕೊಳ್ಳುವ ಯೋಗವಿದೆ. ಅವಿವಾಹಿತ ವಯಸ್ಕರಿಗೆ ವಿವಾಹವಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಕಟಕ ರಾಶಿ
ನೀವು ಸಾಲ ತೀರಿಸಬೇಕಾಗಿದ್ದ ಸಂಸ್ಥೆಯವರು ನಿಮಗೆ ಸಾಲ ತೀರಿಸಲು ಹೆಚ್ಚಿನ ಕಾಲಾವಕಾಶ ಕೊಡುವರು. ಹಿರಿಯರು ಮತ್ತು ಉದ್ಯೋಗಿಗಳ ಸಹಾಯದಿಂದ ನಿಮ್ಮ ಯೋಜಿತ ಕೆಲಸಗಳಲ್ಲಿ ಉತ್ತಮ ಫಲಿತಾಂಶ ದೊರಕುವುದು. ಹೊಸದಾಗಿ ಕೊಂಡ ಆಸ್ತಿಯ ಬೆಲೆ ಸ್ವಲ್ಪ ದುಬಾರಿ ಆಗಬಹುದು. ಹಿರಿಯರಿಂದ ವ್ಯವಹಾರದ ಒಳಗುಟ್ಟುಗಳು ತಿಳಿಯುತ್ತವೆ. ನಿಮ್ಮ ಸಕಾರಾತ್ಮಕ ಚಿಂತನೆ ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯಲು ಸಹಾಯ ಮಾಡುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ಲಾಭ ಹೆಚ್ಚು.

ಸಿಂಹ ರಾಶಿ
ಸಂತಾನಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದವರಿಗೆ ಶುಭ ಸಮಾಚಾರಗಳು ದೊರೆಯುತ್ತವೆ. ಅನಾರೋಗ್ಯ ಪೀಡಿತ ಮಕ್ಕಳ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಪಡೆಯುವ ಅವಕಾಶವಿದೆ. ವಿದೇಶದಲ್ಲಿ ವ್ಯಾಪಾರಿ ಸಂಸ್ಥೆಗಳನ್ನು ನಡೆಸುವವರಿಗೆ ಇದ್ದ ಕಾನೂನಿನ ತೊಂದರೆಗಳು ಪರಿಹಾರವಾಗುತ್ತವೆ. ಧನದ ಒಳಹರಿವು ಸಾಮಾನ್ಯ. ಖರ್ಚಿನ ಹತೋಟಿ ಒಳ್ಳೆಯದು.

ಕನ್ಯಾ ರಾಶಿ
ಆಸ್ತಿಯ ವಿಚಾರವಾಗಿ ಹಿರಿಯರೊಡನೆ ವಾಗ್ವಾದಗಳು ನಡೆಯಬಹುದು. ಆದರೆ ಅವರ ಮಾತನ್ನು ಕೇಳಿದಲ್ಲಿ ನಿಮಗೇ ಲಾಭ. ವಿದೇಶದಲ್ಲಿರುವವರು ತಮ್ಮ ಸಂಸಾರ ಮತ್ತು ಸ್ನೇಹಿತರನ್ನು ಕರೆಸಿಕೊಳ್ಳುವ ಅವಕಾಶವಿದೆ. ಕರಿದ ತಿಂಡಿಗಳನ್ನು ತಯಾರಿಸಿ ಮಾರುವವರಿಗೆ ಲಾಭ ಹೆಚ್ಚುತ್ತದೆ. ಕುಕ್ಕುಟ ಸಾಕಾಣಿಕೆ ಮಾಡುವವರಿಗೆ ಹೆಚ್ಚಿನ ಸಹಾಯಧನಗಳು ಒದಗಿಬರುತ್ತವೆ ಮತ್ತು ವ್ಯವಹಾರ ವಿಸ್ತರಿಸುವ ಅವಕಾಶ ಇರುತ್ತದೆ.

ತುಲಾ ರಾಶಿ
ನಿಮಗೆ ತಿಳಿಯದಂತಹ ವಿಚಾರವೊಂದು ತಿಳಿದು ಅತೀವ ಸಂತೋಷ ಉಂಟುಮಾಡುತ್ತದೆ. ಮಕ್ಕಳ ಮೇಲೆ ಪ್ರೀತಿಯು ಹೆಚ್ಚಾಗುತ್ತದೆ. ವೃತ್ತಿಯಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗಿ ಉತ್ತಮ ಸೌಕರ್ಯಗಳು ದೊರೆಯುತ್ತವೆ. ಕುಟುಂಬದಲ್ಲಿನ ಕಾರ್ಮೋಡಗಳು ದೂರವಾಗಿ ಸಂತಸದ ಅಲೆಗಳು ಮೂಡುತ್ತವೆ. ಕೊಟ್ಟಿದ್ದ ಸಾಲಗಳು ವಾಪಸ್ಸು ಬರುವುದು ನಿಧಾನವಾದರೂ ಹಂತಹಂತವಾಗಿ ಬರುತ್ತದೆ. ನಿಮ್ಮ ದಾಯಾದಿಗಳು ನಿಮ್ಮ ವಿರುದ್ಧ ಹೂಡಿದ್ದ ದಾವೆಗಳು ನಿಮ್ಮ ಪರವಾಗಿ ಆಗುತ್ತವೆ.

ವೃಶ್ಚಿಕ ರಾಶಿ 
ತಾಯಿಯು ನಿಮ್ಮ ವ್ಯವಹಾರಗಳು ಸುಸೂತ್ರವಾಗಿ ನಡೆಯಲು ಧನಸಹಾಯ ಮತ್ತು ಮಾರ್ಗದರ್ಶನವನ್ನು ನೀಡುವರು. ಕೆಲವು ಸರ್ಕಾರಿ ಅಧಿಕಾರಿಗಳಿಗೆ ಖಾಸಗಿ ಸಂಸ್ಥೆಗಳಿಂದ ಉನ್ನತ ಹುದ್ದೆ ಮತ್ತು ಉತ್ತಮ ಸಂಬಳದ ಆಹ್ವಾನ ಬರುವುದು. ನಿಮ್ಮ ಮಡದಿ ಮತ್ತು ತಾಯಿಯ ನಡುವೆ ಇದ್ದ ತಪ್ಪು ಕಲ್ಪನೆಗಳು ದೂರವಾಗುತ್ತವೆ. ಸಂಗಾತಿಯು ನಿಮ್ಮ ಸಾಲಗಳನ್ನು ತೀರಿಸಲು ಧನ ಕ್ರೋಡೀಕರಣ ಮಾಡುವರು. ಈ ಹಿಂದೆ ನಿಮ್ಮಿಂದ ಸಹಾಯ ಪಡೆದವರು ಈಗ ನಿಮಗೆ ಸಹಾಯವನ್ನು ಮಾಡುವರು.

ಧನಸ್ಸು ರಾಶಿ 
ನಿಮ್ಮ ಪಿತ್ರಾರ್ಜಿತ ಆಸ್ತಿಯ ದಾಖಲೆಗಳು ನಿಮ್ಮ ಬಂಧುಗಳಿಂದ ನಿಮಗೆ ದೊರೆಯುತ್ತವೆ. ನಿಮ್ಮ ಯೋಜಿತ ಕೆಲಸಗಳು ಈಗ ವೇಗ ಪಡೆಯುತ್ತವೆ. ಮಂದಗತಿಯಲ್ಲಿ ಇದ್ದ ಹಣದ ಹರಿವು ಸ್ವಲ್ಪ ಚೇತರಿಕೆ ಕಾಣುತ್ತದೆ. ಕಂಚು ತಾಮ್ರ ಇತ್ಯಾದಿ ಲೋಹಗಳಲ್ಲಿ ಮೂರ್ತಿಗಳನ್ನು ಮಾಡುವವರಿಗೆ ಉತ್ತಮ ಅವಕಾಶಗಳು ದೊರೆಯುತ್ತವೆ. ವಿದೇಶದಲ್ಲಿರುವ ನಿಮ್ಮ ಸಂಗಾತಿಯು ನಿಮಗೆ ಧನಸಹಾಯ ಮಾಡುವರು. ಬರಲಾರದು ಎಂದು ಅಂದುಕೊಂಡಿದ್ದ ಸಾಲಗಳು ಈಗ ವಾಪಸ್ಸು ಬರಲಾರಂಭಿಸುತ್ತವೆ.

ಮಕರ ರಾಶಿ
ಸಂಗಾತಿಯ ಸಕಾಲಿಕ ಎಚ್ಚರಿಕೆಗಳು ನಿಮಗೆ ಆಗಬಹುದಾಗಿದ್ದ ನಷ್ಟ ತಪ್ಪಿಸುತ್ತವೆ. ಸರ್ಕಾರಿ ಗುತ್ತಿಗೆ ಕೆಲಸಗಳನ್ನು ಮಾಡುವವರೆಗೆ ಬಾಕಿ ಹಣ ಬಿಡುಗಡೆಯಾಗುತ್ತದೆ. ಭೂಮಿ ಅಭಿವೃದ್ಧಿಪಡಿಸಿ ಮಾರುವವರಿಗೆ ಉತ್ತಮ ವ್ಯವಹಾರ ನಡೆಯುತ್ತದೆ. ಆಸ್ತಿ ಕೊಳ್ಳಲು ಸಾಲಕ್ಕಾಗಿ ಪರದಾಡುತ್ತಿದ್ದ ನಿಮಗೆ ಈಗ ಸಾಲ ದೊರೆಯುತ್ತದೆ. ಮಹಿಳಾ ಉದ್ಯೋಗಿಗಳಿಗೆ ವೃತ್ತಿಯಲ್ಲಿ ಉನ್ನತ ಸ್ಥಾನ ದೊರೆಯುವುದು. ಕೆಲವರಿಗೆ ನಿರೀಕ್ಷಿತ ಜಾಗಕ್ಕೆ ವರ್ಗಾವಣೆ ದೊರೆಯುವುದು.

ಕುಂಭ ರಾಶಿ
ಪುಸ್ತಕ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರದ ಜೊತೆಗೆ ಲಾಭವೂ ಹೆಚ್ಚುತ್ತದೆ. ಕೆಲವು ಪ್ರಮುಖ ಸಂಸ್ಥೆಗಳಿಂದ ಪುಸ್ತಕಗಳಿಗಾಗಿ ಬೇಡಿಕೆ ಬರುತ್ತದೆ. ಭಾಷಣಕಾರರಿಗೆ ಉತ್ತಮ ಜನ ಸ್ಪಂದನೆ ದೊರೆತು ಅವರಿಗೆ ಬೇಡಿಕೆ ಹೆಚ್ಚುತ್ತದೆ. ಬರಹಗಾರರು ಮತ್ತು ಪ್ರಕಾಶಕರ ನಡುವೆ ಇದ್ದ ವೈಮನಸ್ಯ ಅಳಿದುಹೋಗಿ ಸಂಬಂಧಗಳು ವೃದ್ಧಿಸುತ್ತವೆ. ಆಶ್ರಮಗಳನ್ನು ನಡೆಸುವವರಿಗೆ ಉತ್ತಮ ದೇಣಿಗೆ ಮತ್ತು ಜನ ಸಹಾಯ ದೊರೆಯುತ್ತದೆ. ಹಣಕಾಸಿನ ಒಳಹರಿವು ನಿರೀಕ್ಷೆಗಿಂತ ಹೆಚ್ಚು ಇರುತ್ತದೆ.

ಮೀನ ರಾಶಿ
ವೃತ್ತಿಯ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ತೊಂದರೆ ಬಂದರೂ ಕಿರಿಯ ಅಧಿಕಾರಿಗಳ ಸಹಾಯದಿಂದ ನಿವಾರಣೆ ಆಗುತ್ತದೆ. ಉದ್ಯೋಗ ಅರಸುತ್ತಿರುವವರಿಗೆ ಈಗ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ನಾಟಕಕಾರರಿಗೆ ಉತ್ತಮ ಸಂಭಾವನೆ ದೊರೆತು ಸಂತಸವಾಗುತ್ತದೆ. ಮನೆ ಪಾಠ ಮಾಡುವವರಿಗೆ ಉತ್ತಮ ಶಿಷ್ಯ ಸಂಖ್ಯೆ ದೊರೆತು ಧನ ಸಂಗ್ರಹ ಏರಿಕೆಯಾಗುತ್ತದೆ. ಉಪಾಧ್ಯಾಯರಿಗೆ ಸಂಘ-ಸಂಸ್ಥೆಗಳಿಂದ ಗೌರವ ದೊರೆಯುತ್ತದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು