ಬುಧವಾರ, ಸೆಪ್ಟೆಂಬರ್ 29, 2021
19 °C

ವಾರ ಭವಿಷ್ಯ | 09-08-2020ರಿಂದ 15-08-2020ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ ಎನ್ ಲಕ್ಷ್ಮೀನರಸಿಂಹಸ್ವಾಮಿ, ಮೊಬೈಲ್‌ ನಂಬರ್‌: 8197304680 

**
ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಆರೋಗ್ಯದಲ್ಲಿ ಸುಧಾರಣೆ. ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಎಚ್ಚರ ವಹಿಸಿ. ನೆರೆಹೊರೆಯವರಿಂದ ಕಿರಿಕಿರಿ ಎದುರಾಗಬಹುದು. ಧನದ ಒಳಹರಿವು ಮಾಮೂಲಿ. ವ್ಯಾಪಾರದ ಲಾಭದಲ್ಲಿ ನಿಮಗೆ ಸ್ವಲ್ಪ ಹೆಚ್ಚಿನಪಾಲು ಸಿಗುತ್ತದೆ. ಕೋರ್ಟ್ ಕಚೇರಿಯ ವಿಚಾರದಲ್ಲಿ ಅನಿರೀಕ್ಷಿತ ಶುಭ ಸುದ್ದಿ ಸಿಗುತ್ತದೆ. ಹಣ ಕೊಡದೆ ಕಾಡಿಸುತ್ತಿದ್ದ ಸಾಲಗಾರರು ಈಗ ಸಾಲ ಮರುಪಾವತಿಸಲು ಒಪ್ಪುತ್ತಾರೆ. ವಿದ್ಯಾರ್ಥಿಗಳಿಗೆ ಸಾಮಾನ್ಯ ವಾರ. ಮನಸ್ಸಿಗೆ ಒಪ್ಪದ ಕೆಲಸ ಅಥವಾ ವ್ಯಾಪಾರಗಳನ್ನು ಆರಂಭಿಸಬೇಡಿ. ವಾರಾಂತ್ಯಕ್ಕೆ ಖರ್ಚು ಹೆಚ್ಚಾಗಬಹುದು.

**
ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಧನದ ಒಳಹರಿವು ತಕ್ಕಮಟ್ಟಿಗೆ ಇರುತ್ತದೆ. ಖರ್ಚಿಗೆ ಕಡಿವಾಣ ಹಾಕಿ. ಅತ್ಯಂತ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡುವಿರಿ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಫಲ. ಮಕ್ಕಳು ನಿಮಗೆ ಸೂಕ್ತ ಗೌರವ ನೀಡುವರು. ಬಾಯಿ ಹುಣ್ಣು ಸ್ವಲ್ಪ ಕಾಡಬಹುದು. ಸಂಗಾತಿಗೆ ಬರಬೇಕಾಗಿದ್ದ ಅವರ ಆಸ್ತಿ ಭಾಗ ಈಗ ಬರುವ ಕಾಲ. ತಂದೆಯೊಡನೆ ಹೊಂದಾಣಿಕೆಯಿಂದ ವ್ಯವಹಾರ ಮುಂದುವರಿಸುವಿರಿ. ಸಾಮಾಜಿಕ ಚಟುವಟಿಕೆಗಳಲ್ಲಿ ಬಹಳ ಉತ್ಸಾಹ ತೋರುವಿರಿ. ಹಾಲಿನ ಉತ್ಪನ್ನಗಳನ್ನು ಮಾರಾಟ  ಮಾಡುವವರಿಗೆ ವ್ಯವಹಾರ ವೃದ್ಧಿ. ವೃತ್ತಿಯಲ್ಲಿದ್ದ ಗೊಂದಲಗಳು ನಿವಾರಣೆಯಾಗಿ ಶಾಂತತೆ ಒದಗುತ್ತದೆ.

**
ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಖರ್ಚುವೆಚ್ಚಗಳು ಹೆಚ್ಚಾಗಬಹುದು. ಕೈಹಿಡಿದ ಕಾರ್ಯಗಳ ನಿಧಾನಗತಿಯು ಬೇಸರ ಮೂಡಬಹುದು. ಆರೋಗ್ಯದಲ್ಲಿ ಸಣ್ಣ ವ್ಯತ್ಯಾಸ ಕಾಣಬಹುದು. ಮಕ್ಕಳಿಗೆ ಜವಾಬ್ದಾರಿ ಕಲಿಸುವುದು ಅತ್ಯಗತ್ಯವಾಗಿರುತ್ತದೆ. ಹಣದ ಅಡಚಣೆ ಹೆಚ್ಚಾಗಬಹುದು. ರಾಜಕೀಯ ವ್ಯಕ್ತಿಗಳಿಗೆ ಹಣದ ಹರಿವು ನಿಂತು ಕಾರ್ಯಕರ್ತರ ಮುಂದೆ ಮುಜುಗರಕ್ಕೆ ಒಳಗಾಗಬಹುದು. ವೈದ್ಯರಿಗೆ ಹೆಚ್ಚು ಗೌರವ ದೊರೆಯುತ್ತದೆ. ಸಂಸಾರದಲ್ಲಿ ಇದ್ದ ಸಂಕಷ್ಟಗಳು ಹಿರಿಯರ ಮಧ್ಯಪ್ರವೇಶದಿಂದ ನಿವಾರಣೆಯಾಗುತ್ತದೆ. ಅತ್ಯಂತ ಕಷ್ಟ ಸಮಯದಲ್ಲಿ ಸ್ವಲ್ಪ ಹಣ ಒದಗಿ ಮನಸ್ಸು ನಿರಾಳವಾಗುತ್ತದೆ.

**
ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಎಲ್ಲರನ್ನು ವಿಶಾಲ ಮನೋಭಾವದಿಂದ ನೋಡುವ ನಿಮ್ಮನ್ನು ಮೋಸಗೊಳಿಸಲು ಕೆಲವರು ಕಾಯುತ್ತಿರುತ್ತಾರೆ. ಇಂಥವರ ಬಗ್ಗೆ ಎಚ್ಚರದಿಂದಿರಿ. ವ್ಯವಹಾರಗಳಲ್ಲಿ ನೇರವಾಗಿ ಮಾತಾಡುವುದು ಬಹಳ ಒಳ್ಳೆಯದು. ಇದರಿಂದ ವ್ಯವಹಾರದಲ್ಲಿನ ಪಾರದರ್ಶಕತೆ ಉಳಿಯುತ್ತದೆ. ನಿಮ್ಮ ಹೊಸ ಕನಸನ್ನು ಕಾರ್ಯರೂಪಕ್ಕೆ ತರಲು ಅಲ್ಪ ಶ್ರಮ ವಹಿಸಬೇಕು. ಸ್ವಂತ ಉದ್ಯಮ ನಡೆಸುವವರಿಗೆ ನಿಧಾನವಾಗಿ ವ್ಯವಹಾರ ಹೆಚ್ಚುತ್ತದೆ. ಸರ್ಕಾರಿ ಮಟ್ಟದ ಸಾಲಗಳು ಸಿಗುವ ಸೂಚನೆ ಈಗ ದೊರೆಯುತ್ತದೆ. ಆರೋಗ್ಯದ ಬಗ್ಗೆ ಎಚ್ಚರವಹಿಸಿರಿ.

**
ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 
ಈ ಹಿಂದೆ ಆಲೋಚನೆ ಮಾಡಿ ಉಳಿಸಿ ಇಟ್ಟಿದ್ದ  ಹಣವು ಈಗ ಉಪಯೋಗಕ್ಕೆ ಬರುತ್ತದೆ. ನಿಮ್ಮ ಕೈಕೆಳಗಿನ ಕೆಲಸಗಾರರೊಡನೆ ಸಂತಸದಿಂದ ಮಾತಾಡಿದಲ್ಲಿ ಕೆಲಸ ಸರಾಗವಾಗಿ ಆಗುತ್ತದೆ. ಹೆಂಗಸರಿಗೆ ಮನೆಗೆ ಬಂದ ಅತಿಥಿಗಳ ಸೇವೆ ಮಾಡುವಲ್ಲಿ  ದಣಿವು ಉಂಟಾಗಬಹುದು. ಬಂಧುಗಳ ನಡುವೆ ಹಣದ ವಿಚಾರದಲ್ಲಿ ಜಿಜ್ಞಾಸೆ ಮೂಡಬಹುದು. ಬಂಧುಗಳು ನಿಮ್ಮ ವ್ಯವಹಾರದಲ್ಲಿ ಮೂಗು ತೂರಿಸಲು ಅವಕಾಶ ಕೊಡಬೇಡಿ, ಕೊಟ್ಟಲ್ಲಿ ನಿಮಗೆ ಧನ ನಷ್ಟ ಖಂಡಿತ.

**
ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ವ್ಯವಹಾರದಲ್ಲಿ ಯಾವ ವಿಚಾರಕ್ಕೆ ಪ್ರಾಧಾನ್ಯತೆ ಕೊಡಬೇಕೆಂಬ ಗೊಂದಲವಿದ್ದಲ್ಲಿ ತಜ್ಞರ ಸಲಹೆ ಪಡೆಯಿರಿ. ನಿರೀಕ್ಷಿತ ಮೂಲದಿಂದ ಆದಾಯ ಬರದಿದ್ದರೂ ಅನಿರೀಕ್ಷಿತ ಮೂಲಗಳಿಂದ ಆದಾಯ ಬರುತ್ತದೆ. ಉದ್ಯೋಗದಲ್ಲಿನ ವ್ಯತ್ಯಾಸಗಳು ಅತಿ ಚಿಂತೆಗೆ ಕಾರಣವಾಗುತ್ತದೆ. ಅನಾವಶ್ಯ ಖರ್ಚುಗಳನ್ನು ಕಡಿತ ಮಾಡಿ. ವೃತ್ತಿಯಲ್ಲಿನ ಅಪಾರ ಅನುಭವವು ನಿಮ್ಮನ್ನು ಯಶಸ್ಸಿನ ದಿಕ್ಕಿನೆಡೆಗೆ ಕೊಂಡೊಯ್ಯುತ್ತದೆ. ಹೈನುಗಾರಿಕೆ ಮಾಡುತ್ತಿರುವವರಿಗೆ ವ್ಯವಹಾರ ವೃದ್ಧಿಸುತ್ತದೆ.

**
ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಮಕ್ಕಳ ವಿಚಾರದಲ್ಲಿ ಅವರ ನಡವಳಿಕೆ ಬಗ್ಗೆ ಹೆಚ್ಚಿನ ಗಮನ ಅಗತ್ಯ. ಯಾರದೇ ಜಾಮೀನಿನ ಪತ್ರಕ್ಕೂ ಸಹಿಹಾಕಲು ಹೋಗಬೇಡಿ, ಹೋದಲ್ಲಿ ಅದು ಬಹಳ ದುಬಾರಿಯಾಗಬಹುದು. ಯಾರದೋ ಮಾತು ಕೇಳಿ ಇನ್ನೊಬ್ಬರ ಬಗ್ಗೆ ತಪ್ಪು ಭಾವನೆ  ಬೆಳೆಸಿಕೊಳ್ಳಬೇಡಿ. ಹೀಗಾದಲ್ಲಿ ಸಿಗುವ ಸಹಾಯ ನಿಲ್ಲುತ್ತದೆ. ಉದ್ಯೋಗದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳ ಸಹಾಯ ನಿಮಗೆ ಸಿಗುತ್ತದೆ. ಕುಟುಂಬದಲ್ಲಿ ಹಿರಿಯರೊಡನೆ ಜಿಜ್ಞಾಸೆ ಮೂಡಬಹುದು. ಆಸ್ತಿ ಕೊಳ್ಳುವಾಗ ದಾಖಲೆ ಪರಿಶೀಲನೆ ಅತಿ ಅಗತ್ಯ. ಮನೆ ಬದಲಾಯಿಸುವ ಸಂದರ್ಭವಿದೆ.

**
ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)  
ನಿಮ್ಮ ಪ್ರತಿಭೆಯನ್ನು ಯಶಸ್ವಿಯಾಗಿ ಪ್ರದರ್ಶಿಸಿ ನಿಮ್ಮ ವ್ಯಕ್ತಿತ್ವ ಹೆಚ್ಚಿಸಿಕೊಳ್ಳಬಹುದು. ನಿಮ್ಮ ಹಿರಿಯರೊಡನೆ ಮನಬಿಚ್ಚಿ ಮಾತಾಡಿ ಮನಸ್ಸಿನ ಹೊಯ್ದಾಟ ಕಡಿಮೆ ಮಾಡಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಸಾಮಾನ್ಯ. ಮನೆ ಕಟ್ಟುವ ವಿಚಾರವನ್ನು ಸಂಗಾತಿಯು ಕೆದಕಿದರೂ ನಿಮ್ಮ ಶಕ್ತಿ ಸಾಮರ್ಥ್ಯಗಳನ್ನು ತಿಳಿದು ನಂತರ ಮುಂದುವರಿಯಿರಿ. ಹಣದ ಹರಿವು ಸಾಮಾನ್ಯ. ಮಕ್ಕಳ ನಡುವೆ ಹೊಂದಾಣಿಕೆ ಕಡಿಮೆಯಾಗಬಹುದು. ತಂದೆಯ ವ್ಯವಹಾರಗಳನ್ನು ನಿಮಗೆ ಹಂತಹಂತವಾಗಿ ತಿಳಿಸುವರು.  ಯಾವುದೇ ವಿಚಾರದಲ್ಲಿ ಅತಿಯಾದ ಆತುರ ಬೇಡ.

**
ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಉದ್ಯೋಗದಲ್ಲಿ ಉತ್ತಮ ಅವಕಾಶ  ಒದಗಿಬರುವ ಲಕ್ಷಣವಿದೆ. ವಿದ್ಯಾರ್ಥಿಗಳಿಗೆ ಅವರ ಆಸೆಗೆ ತಕ್ಕಂತೆ ವಿಷಯಗಳನ್ನು ಓದುವ ಅವಕಾಶವಿದೆ. ಕಚೇರಿಯಲ್ಲಿ ಅತಿಯಾಗಿ ಯಾರ ಮೇಲೂ ಅವಲಂಬನೆ ಬೇಡ. ಈ ರೀತಿ ಅವಲಂಬಿಸಿದರೆ ಕಹಿ ಅನುಭವ  ಖಂಡಿತ. ಹಣದ ಹರಿವು ತಕ್ಕಮಟ್ಟಿಗೆ ಇರುತ್ತದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಹಿರಿಯರು ಮಾತನಾಡುವಾಗ ಎಚ್ಚರವಿರಲಿ, ಇಲ್ಲವಾದಲ್ಲಿ ತಾವೇ ಸಿಕ್ಕಿ ಬೀಳುವ ಸಾಧ್ಯತೆಯಿದೆ. ಅನಿರೀಕ್ಷಿತವಾಗಿ ಕೆಲವು ಉತ್ತಮ ವ್ಯವಹಾರಗಳಲ್ಲಿ ಭಾಗವಹಿಸಲು ಅವಕಾಶ ಒದಗಿ ಬರುತ್ತದೆ.

**
ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2) 
ಆದಾಯಕ್ಕೆ ಇದ್ದ ಅಡೆ ತಡೆಗಳು ನಿವಾರಣೆಯಾಗುತ್ತವೆ. ವೃತ್ತಿಯಲ್ಲಿ ನಿಮ್ಮ ಕೆಲಸಕ್ಕೆ ಗೌರವ ದೊರೆತು ಪ್ರಸಂಶೆ ಕೇಳಿಬರುತ್ತದೆ. ಅತಿ ಮುಖ್ಯ ಕಾರ್ಯಗಳನ್ನು ಮಾತ್ರ  ಜಾರಿಗೊಳಿಸಿರಿ, ಬಾಕಿ ಕಾರ್ಯಗಳನ್ನು ಸದ್ಯಕ್ಕೆ ಮುಂದೂಡಿ. ಯಾವುದೇ ಕೆಲಸ ಮಾಡುವಾಗ ಅನುಕರಣೆ ಬೇಡ. ನಿಮ್ಮ ಸ್ವಂತಿಕೆ ಬೆಳೆಸಿಕೊಂಡಲ್ಲಿ ಯಶಸ್ಸು ನಿಮ್ಮದೆ. ನಿರೀಕ್ಷಿತ ಸಮಯದಲ್ಲಿ ನಿಮ್ಮ ಸ್ನೇಹಿತರು ನಿಮ್ಮ ಪರ ನಿಲ್ಲುವರು. ಸಾಲ ಕೊಟ್ಟಿದ್ದ ಹಣಗಳು ಹಂತಹಂತವಾಗಿ ವಾಪಸ್ಸು ಬರುತ್ತವೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಯಶಸ್ಸು ಇರುತ್ತದೆ.

**
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ನಿಮ್ಮ ನಿಲುವನ್ನು ಟೀಕಿಸಿದರೂ ಸಹ ಎದೆಗುಂದದೆ ಆಧಾರ ಸಹಿತವಾಗಿ ಮಂಡಿಸಿರಿ, ಯಶಸ್ಸು ನಿಮ್ಮದಾಗುತ್ತದೆ. ನಿಂತಿದ್ದ ವಿದ್ಯೆಗಳನ್ನು ಈಗ ಪೂರ್ಣಗೊಳಿಸಬಹುದು. ನಿಮ್ಮ ಅನುಭವ ಮತ್ತು ಬುದ್ಧಿವಂತಿಕೆಯನ್ನು ನಿಮ್ಮ ಕೈಕೆಳಗಿನ ಕೆಲಸಗಾರರು ಗೌರವಿಸುವರು. ಕೃಷಿಯಿಂದ ಸ್ವಲ್ಪ ಆದಾಯದ ಏರಿಕೆ ಕಾಣಬಹುದು. ಸರ್ಕಾರಿ ಸಾಲಗಳನ್ನು ಪಡೆದು ಸಾಲಗಳನ್ನು ತೀರಿಸಬಹುದು. ಸ್ತ್ರೀಯರ ಏಳಿಗೆ ಉತ್ತಮವಾಗಿರುತ್ತದೆ. ಕ್ರೀಡಾಪಟುಗಳಿಗೆ ಉದ್ಯೋಗ ಸಾಧ್ಯತೆ ಇದೆ. ಕಬ್ಬಿಣ ವ್ಯಾಪಾರದವರಿಗೆ ಅಭಿವೃದ್ಧಿ ಇದೆ.

**
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ  ರೇವತಿ)
ನಿಮ್ಮವರಿಗೆ ನಿಮ್ಮ ಮೇಲೆ ಇರುವ ಅಪನಂಬಿಕೆಗಳು ಈಗ ದೂರವಾಗಲಿವೆ. ಮನೆಯ ಕೆಲವು  ವಿಚಾರಗಳಲ್ಲಿ ಒತ್ತಡವನ್ನು ಅನುಭವಿಸುವಿರಿ. ನಿಮ್ಮ ಸಮಾಜಮುಖಿ ಕೆಲಸಗಳಿಗೆ ದೇಣಿಗೆ ಮತ್ತು  ಜನಸಹಾಯ ಒದಗಿಬರುತ್ತದೆ. ಹಣದ ವ್ಯವಹಾರಗಳಲ್ಲಿ ಹೆಚ್ಚಿನ ಮುಂಜಾಗ್ರತೆ ಅತೀ ಅಗತ್ಯ. ಮಕ್ಕಳ ಅಭಿವೃದ್ಧಿ ಸಾಮಾನ್ಯ. ಪುರಾತನ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ವಿಸ್ತರಣೆ ಇದೆ. ವೃತ್ತಿಯಲ್ಲಿದ್ದ ಗೊಂದಲಗಳು ನಿವಾರಣೆಯಾಗಿ ಸಂತಸ ಮೂಡುತ್ತದೆ. ಆರೋಗ್ಯದ ಕಾಳಜಿ  ಇರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.