ಶನಿವಾರ, ಜನವರಿ 28, 2023
15 °C

ವಾರ ಭವಿಷ್ಯ: ನವೆಂಬರ್ 13, 2022ರಿಂದ ನವೆಂಬರ್ 19, 2022ರವರೆಗೆ

ಎಂ. ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಉದ್ಯಮಿಗಳು ನೂತನ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಎಲ್ಲಾ ಲಕ್ಷಣಗಳಿವೆ. ಇದಕ್ಕೆ ಬೇಕಾದ ಪೂರಕ ಮಾಹಿತಿಗಳು ಈಗ ಒದಗಿಬರುತ್ತವೆ. ಒಡಹುಟ್ಟಿದವರೊಡನೆ ಸಂಬಂಧ ಸ್ವಲ್ಪಮಟ್ಟಿಗೆ ಸುಧಾರಿಸಬಹುದು. ಭೂಮಿ ಖರೀದಿ ವಿಚಾರದಲ್ಲಿ ಅತಿಯಾದ ಆತುರ ಬೇಡ. ಉದ್ಯೋಗದಲ್ಲಿ ಎಚ್ಚರಿಕೆಯ ಹೆಜ್ಜೆ ಇಟ್ಟಲ್ಲಿ ಪ್ರಗತಿಯನ್ನು ಕಾಣಬಹುದು. ನಿವೇಶನಗಳ ವ್ಯವಹಾರವನ್ನು ಮಾಡುವವರಿಗೆ ಆದಾಯ ವೃದ್ಧಿಸುತ್ತದೆ. ಲೇವಾದೇವಿ ಮಾಡುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಧನಾದಾಯ ಕಡಿಮೆ ಇರುತ್ತದೆ. ಒಡವೆ ಕೊಳ್ಳುವಾಗ ಎಚ್ಚರವಿರಲಿ, ಮೋಸ ಆಗುವ ಸಾಧ್ಯತೆ ಇದೆ. ಹೊಸ ವ್ಯಾಪಾರಸ್ಥರ ಸಂಪರ್ಕದಿಂದ ನಿಮ್ಮ ವ್ಯಾಪಾರ ವೃದ್ಧಿಸುತ್ತದೆ ಹಾಗೂ ಹೊಸ ಹೂಡಿಕೆಗೆ ಅವಕಾಶಗಳು ತೆರೆದುಕೊಳ್ಳುತ್ತವೆ.

ವೃಷಭ ರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)
ಹಣ್ಣು, ತರಕಾರಿ ವ್ಯಾಪಾರ ಮಾಡುವವರಿಗೆ ವ್ಯಾಪಾರದಲ್ಲಿ ವೃದ್ಧಿ ಇರುತ್ತದೆ ಹಾಗೂ ಆದಾಯದಲ್ಲಿ ಚೇತರಿಕೆ ಕಾಣಬಹುದು. ಸಂಗಾತಿಯ ಕಡೆಯ ಶುಭಕಾರ್ಯಗಳಿಗೆ ಹೋಗಿ ಬರುವ ಸಾಧ್ಯತೆಗಳಿವೆ. ಕೃಷಿ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ದೊರಕುತ್ತದೆ. ಕೃಷಿಕರಿಗೆ ಉತ್ತಮ ಸಾಲ ಸೌಲಭ್ಯ ಒದಗಿಬರುತ್ತದೆ. ಬಹಳ ದಿನಗಳಿಂದ ಬಯಸುತ್ತಿದ್ದ ಹೆಚ್ಚಿನ ಮೊತ್ತದ ಸರ್ಕಾರಿ ಸಾಲ ಈಗ ದೊರೆಯುತ್ತದೆ. ಪಾಲುದಾರಿಕೆ ಅಥವಾ ಮಧ್ಯಸ್ಥಿಕೆ ವ್ಯವಹಾರಗಳಲ್ಲಿ ಕಠಿಣ ಮಾತು ಬೇಡ. ಇದು ವ್ಯವಹಾರವನ್ನು ಹಾಳುಗೆಡವಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಹಲ್ಲುನೋವು ಅಥವಾ ಗಂಟಲು ನೋವು ಬಾಧಿಸಬಹುದು. ಸ್ವಂತ ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿತ್ಯ ಕೆಲಸಗಳಲ್ಲಿ ಹೊಸ ಉತ್ಸಾಹ ಮೂಡಿ ಕೆಲಸ ಕಾರ್ಯಗಳಲ್ಲಿ ಚುರುಕುತನ ತೋರುವಿರಿ. ವಿಶ್ವಾಸಿಗಳ ಸಹಕಾರದಿಂದ ವ್ಯಾಪಾರದಲ್ಲಿ ಮುನ್ನಡೆಯನ್ನು ಕಾಣಬಹುದು. ಹೈನುಗಾರಿಕೆ ನಡೆಸುವವರು ಉತ್ತಮ ಆದಾಯವನ್ನು ನಿರೀಕ್ಷಿಸಬಹುದು. ಮನೆಯಲ್ಲಿ ದೈವ ಸಂಬಂಧದ ಕಾರ್ಯಕ್ರಮಕ್ಕಾಗಿ ಸಿದ್ಧತೆಗಳನ್ನು ಮಾಡುವಿರಿ. ಅನಾರೋಗ್ಯ ಪೀಡಿತರ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ನಿಮ್ಮ ಗಡಸು ಮಾತಿನಿಂದ ಮನೆಯಲ್ಲಿ ಅಶಾಂತಿ ಮೂಡಬಹುದು. ವಿದ್ಯಾರ್ಥಿಗಳಿಗೆ ಉತ್ತಮ ಸೌಕರ್ಯಗಳು ಒದಗಿಬರುತ್ತವೆ. ಸರ್ಕಾರಿ ಮಟ್ಟದ ಕೆಲಸಗಳು ಸರಾಗವಾಗಿ ಆಗುತ್ತವೆ. ಸರ್ಕಾರಿ ಸಂಸ್ಥೆಗಳಿಗೆ ಕಚ್ಚಾ ವಸ್ತುಗಳನ್ನು ಪೂರೈಸಿದವರಿಗೆ ನಿಂತಿದ್ದ ಹಣ ಈಗ ಬರುತ್ತದೆ. ಆರ್ಥಿಕ ಸ್ಥಿತಿಯು ಚೇತರಿಕೆ ಹಾದಿಯಲ್ಲಿ ಮುಂದುವರಿಯುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಸಹೋದರಿಗೆ ಸಾಕಷ್ಟು ಸಹಾಯ ಮಾಡುವಿರಿ. ಅವರ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳನ್ನು ಸರಿ ಮಾಡಿಕೊಳ್ಳಲು ಸೂಕ್ತ ಮಾರ್ಗದರ್ಶನ ನೀಡುವಿರಿ. ಕಾನೂನಾತ್ಮಕ ವ್ಯವಹಾರಗಳಲ್ಲಿ ಸೂಕ್ತ ಮಾರ್ಗದರ್ಶನ ಪಡೆದು ವ್ಯವಹರಿಸುವುದು ಒಳ್ಳೆಯದು. ಕಚೇರಿ ಕೆಲಸದ ನಿಮಿತ್ತ ದೂರಪ್ರಯಾಣ ಮಾಡಬೇಕಾಗಬಹುದು. ಇದಕ್ಕೆ ಬೇಕಾದ ಸೌಕರ್ಯಗಳು ಸಿಗುತ್ತವೆ. ಕೆಲವು ಅಧಿಕಾರಿಗಳು ಕೆಳಗಿನವರ ಮೇಲೆ ತೋರುವ ಔದಾರ್ಯವು ಗುರುತಿಸಲ್ಪಟ್ಟು ಸಾಮಾಜಿಕವಾಗಿ ಗೌರವಿಸಲ್ಪಡುತ್ತಾರೆ. ವಾಹನ ರಿಪೇರಿ ಮಾಡುವವರಿಗೆ ಕೈ ತುಂಬಾ ಕೆಲಸ ದೊರೆತು ಸಾಕಷ್ಟು ಸಂಪಾದನೆ ಇರುತ್ತದೆ. ಹಣದ ಒಳಹರಿವಿನಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ. ಸಂಸಾರದಲ್ಲಿ ಕಾವೇರಿದ ಮಾತುಗಳಾದರೂ ನಂತರ ಸರಿಯಾಗುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನೌಕರ ವರ್ಗದವರ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆತು ಉದ್ಯೋಗದಲ್ಲಿ ಸೂಕ್ತ ಬದಲಾವಣೆಯ ಸಾಧ್ಯತೆ ಇದೆ. ವಾಹನ ಚಾಲನೆ ವೇಳೆ ಹೆಚ್ಚಿನ ಜಾಗರೂಕತೆ ಅಗತ್ಯ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಉನ್ನತ ಅಧಿಕಾರಿಗಳ ಸಹಾಯದಿಂದ ನೌಕರಿಯಲ್ಲಿ ಅನುಕೂಲ ಕಂಡುಬರುತ್ತದೆ. ಸಮಾಜಸೇವೆ ಮಾಡುವವರು ತಮ್ಮ ಕಾಯಕದಲ್ಲಿ ಸಂತೋಷ ಕಾಣುವರು. ಅಧ್ಯಯನಶೀಲರಿಗೆ ಉತ್ತಮ ಸೌಕರ್ಯ ದೊರೆತು ಅಧ್ಯಯನದಲ್ಲಿ ತನ್ಮಯರಾಗುವರು. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಗೌರವಾದರಗಳು ಸಿಗುತ್ತವೆ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚು ಶ್ರಮವಹಿಸಬೇಕು.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿಮ್ಮ ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನ ಕೊಡಿರಿ. ಮನೆ ಬದಲಾವಣೆಯ ವಿಚಾರಗಳು ಮುನ್ನೆಲೆಗೆ ಬರುತ್ತವೆ. ಕ್ರೀಡಾಪಟುಗಳಿಗೆ ಉತ್ತೇಜನ ದೊರೆತು ಸಾಧನೆ ಮಾಡುವ ಸಂದರ್ಭವಿದೆ. ವಾಹನ ಮಾರಾಟಗಾರರಿಗೆ ವ್ಯಾಪಾರ ವೃದ್ಧಿಸುತ್ತದೆ. ನಿಮ್ಮ ಸಂಪತ್ತನ್ನು ಸರಿಯಾಗಿ ರಕ್ಷಣೆ ಮಾಡಿಕೊಳ್ಳಿರಿ. ಆರ್ಥಿಕ ಸ್ಥಿತಿಯು ಸಾಮಾನ್ಯವಾಗಿರುತ್ತದೆ.  ಉದ್ಯೋಗವನ್ನು ಅರಸುತ್ತಿರುವವರು ರಾಜಕೀಯ ಮುಖಂಡರುಗಳ ಮೂಲಕ ಒತ್ತಡವನ್ನು ಹೇರಿ ಉದ್ಯೋಗವನ್ನು ಪಡೆಯಬಹುದು. ತಾಯಿಯಿಂದ ಧನಸಹಾಯ ಪಡೆಯಬಹುದು. ಆಹಾರ ವ್ಯತ್ಯಾಸದಿಂದ ಅನಾರೋಗ್ಯವಾಗಬಹುದು. ರಾಜಕೀಯ ಪಟುಗಳು ನಾಳೆಗಳ ಎದುರಾಳಿಗಳ ಚಾಣಾಕ್ಷತೆಯನ್ನು ಅರಿತು ಕಾರ್ಯತಂತ್ರಗಳನ್ನು ಆಲೋಚನೆ ಮಾಡಿರಿ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ಕೆಲವು ಯೋಜನೆಗಳನ್ನು ಪೂರೈಸಲು ಬೇಕಾದ ಅನುಕೂಲಗಳು ಸಿಗುತ್ತವೆ. ಉನ್ನತ ಶಿಕ್ಷಣ ಅಥವಾ ಉನ್ನತ ಅಧ್ಯಯನಕ್ಕಾಗಿ ದೂರ ಪ್ರಯಾಣ ಮಾಡಬೇಕಾದೀತು. ಆರ್ಥಿಕ ಅನುಕೂಲಗಳು ನಿಮ್ಮ ಅಗತ್ಯಕ್ಕೆ ತಕ್ಕಷ್ಟೇ ಇರುತ್ತವೆ. ಆಸ್ತಿ ಲಾಭದ ಲಕ್ಷಣಗಳು ಗೋಚರಿಸುತ್ತಿವೆ. ಕೈಸಾಲಗಳನ್ನು ತೀರಿಸಿ ನಿರಾಳರಾಗುವಿರಿ. ವಿದೇಶದಿಂದ ಮಕ್ಕಳ ಅಥವಾ ಬಂಧುಗಳ ಆಗಮನವನ್ನು ನಿರೀಕ್ಷಿಸುವಿರಿ. ಮನೆಯ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರಿ  ಸಂಗಾತಿಗೆ ಸಹಾಯ ಮಾಡುವಿರಿ. ಚಿನ್ನಾಭರಣಗಳನ್ನು ಕೊಳ್ಳುವ ಯೋಗವಿದೆ. ಹೈನುಗಾರಿಕೆ ಮಾಡುವವರಿಗೆ ಉತ್ತಮ ಆದಾಯದ ನಿರೀಕ್ಷೆಯಿದೆ. ವಿದ್ಯಾರ್ಥಿಗಳಿಗೆ ಮಧ್ಯಮ ಫಲಿತಾಂಶದ ಯೋಗವಿದೆ. ಪಾಲುದಾರಿಕೆಯ ವ್ಯವಹಾರಗಳು ಮಾತಿನಿಂದ ಹೆಚ್ಚು ಕಡಿಮೆಯಾಗದಂತೆ ಎಚ್ಚರಿಕೆವಹಿಸಿರಿ.

ವೃಶ್ಚಿಕ ರಾಶಿ (ವಿಶಾಖಾ 4  ಅನುರಾಧ  ಜೇಷ್ಠ)
ನಿರೀಕ್ಷಿತ ಮೂಲಗಳಿಂದ ಧನಾಗಮನ ಆಗದಿದ್ದರೂ ಅನಿರೀಕ್ಷಿತ ಮೂಲದಿಂದ ಹಣ ಒದಗಿ ಸಂತಸವಾಗುವುದು.  ಕೆಲವು ಹಂಗಾಮಿ ಮಹಿಳಾ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಕಾಯಂ ಆಗಬಹುದು. ಹೊಸ ಗೃಹಾಲಂಕಾರ ವಸ್ತುಗಳನ್ನು ಕೊಳ್ಳುವ ಯೋಗವಿದೆ. ಸಹೋದ್ಯೋಗಿಗಳೊಡನೆ ಉತ್ತಮ ಸಂಬಂಧ ಏರ್ಪಡುತ್ತದೆ. ನಿಮ್ಮ ಒಳ್ಳೆಯ ತನವನ್ನು ಕೆಲವರು ದುರುಪಯೋಗಪಡಿಸಿಕೊಳ್ಳಬಹುದು, ಆ ಬಗ್ಗೆ ಎಚ್ಚರದಿಂದಿರಿ. ಕೃಷಿ ವಿಷಯದಲ್ಲಿ ನೂತನ ವಿಧಾನಗಳನ್ನು ಅಳವಡಿಸಿಕೊಂಡು ಪ್ರಯೋಗಶೀಲರಾಗುವಿರಿ. ಷೇರುಪೇಟೆಗೆ ಹೆಚ್ಚಿನ ಬಂಡವಾಳವನ್ನು ತೊಡಗಿಸುವುದು ಬೇಡ. ಸಂಗೀತಗಾರರಿಗೆ ಹೆಚ್ಚಿನ ಅವಕಾಶಗಳು ದೊರೆಯುವ ಸಂದರ್ಭವಿದೆ. ಆಸ್ತಿಯ ದಾಖಲೆಗಳಲ್ಲಿ ಸ್ವಲ್ಪಮಟ್ಟಿನ ತೊಡಕುಗಳು ಆಗಬಹುದು.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಹಿರಿಯರು ತಮ್ಮ ಮಾತಿನಿಂದ ನಿಷ್ಠುರಕ್ಕೆ ಒಳಗಾಗುವರು. ಇತರರಿಗೆ ಅತಿಯಾದ ಗೌರವವನ್ನು ಕೊಡುವುದು ಬೇಡ. ನಿಂತಿದ್ದ ನ್ಯಾಯಾಲಯದಲ್ಲಿನ ಕಟ್ಟಳೆಗಳಿಗೆ ಮರುಜೀವ ಬಂದು ಪುನರ್ ಆರಂಭವಾಗುತ್ತವೆ. ಸಂಸಾರದಲ್ಲಿನ ಸಂಕಷ್ಟಗಳು ಪರಿಹಾರಗೊಂಡು ಹೊಸ ಬೆಳಕು ಮೂಡುತ್ತದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುತ್ತದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಬೇಕೆನ್ನುವವರಿಗೆ ಸೂಕ್ತ ಅವಕಾಶಗಳು ಇರುತ್ತವೆ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರಿಗೆ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಆರೋಗ್ಯದ ಬಗ್ಗೆ ನಿಗಾವಹಿಸಿರಿ. ಕೈಕೆಳಗಿನ ಕೆಲಸಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡಲ್ಲಿ ಹೆಚ್ಚಿನ ಕೆಲಸ ಕಾರ್ಯಗಳು ಆಗುತ್ತವೆ. ಹಿತಶತ್ರುಗಳು ಯಾರೆಂದು ಈಗ ನಿಮಗೆ ತಿಳಿಯುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ  ಧನಿಷ್ಠ 1.2)
ವ್ಯವಹಾರಗಳಲ್ಲಿ ಮುನ್ನಡೆ ಇರುತ್ತದೆ. ಸಂಗ್ರಹಿಸಲ್ಪಟ್ಟ ವಸ್ತುಗಳ ಮಾರಾಟದಿಂದ ಹೆಚ್ಚಿನ ಲಾಭ ಇರುತ್ತದೆ. ಮಕ್ಕಳಿಗಾಗಿ ದುಬಾರಿ ವಸ್ತುಗಳನ್ನು ಖರೀದಿ ಮಾಡುವ ಯೋಗವಿದೆ. ಶ್ರೀಮಂತ ಜೀವನಶೈಲಿಗಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ವ್ಯಾಪಾರದಲ್ಲಿನ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳುವಿರಿ. ವ್ಯಾಪಾರಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿಮಾಡಿ ಸಮಾಲೋಚನೆ ನಡೆಸುವಿರಿ. ವಿದ್ಯಾರ್ಥಿಗಳಿಗೆ ಅಭ್ಯಾಸದ ಮೇಲೆ ಏಕಾಗ್ರತೆ ಕಡಿಮೆಯಾದರೂ ಸಾಧನೆಗೆ ತೊಡಕಾಗುವುದಿಲ್ಲ. ಸಹೋದ್ಯೋಗಿಗಳ ಸಹಕಾರದಿಂದ ವೃತ್ತಿಯಲ್ಲಿ ಏಳಿಗೆ ಇರುತ್ತದೆ. ಹಣದ ಒಳಹರಿವು ನಿರೀಕ್ಷಿತ ಮಟ್ಟದಷ್ಟು ಇರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನಕ್ಕಾಗಿ ಹೊಸಮಾರ್ಗಗಳು ಕಾಣುತ್ತದೆ. ವಿದೇಶಿ ವ್ಯಾಸಂಗ ಮಾಡಬೇಕೆನ್ನುವವರಿಗೆ ದಾರಿಗಳು ತೆರೆಯುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಕೆಲಸಕಾರ್ಯಗಳಲ್ಲಿ ಅಡ್ಡಿ ಉಂಟಾದರೂ ಎದೆಗುಂದದೆ ಮುಂದುವರಿದು ಯಶಸ್ಸನ್ನು ಸಾಧಿಸಿ ತೋರುವಿರಿ. ತಂದೆತಾಯಿಗಳು ಮಕ್ಕಳಿಗಾಗಿಯೇ ವಿದೇಶಕ್ಕೆ ಅಥವಾ ದೂರದೂರಿಗೆ ಪ್ರಯಾಣ ಬೆಳೆಸಬಹುದು. ಅಧ್ಯಯನದಲ್ಲಿನ  ಆಸಕ್ತಿಯಿಂದಾಗಿ ಉತ್ತಮ ಭವಿಷ್ಯ ನಿರ್ಮಾಣವಾಗುವುದು. ಲೇವಾದೇವಿ ಮಾಡುವವರು ಸದ್ಯದ ಮಟ್ಟಿಗೆ ಮಾಡದಿರುವುದು ಒಳ್ಳೆಯದು. ಅದರ ಬದಲು ಹಳೇ ಬಾಕಿಯನ್ನು ವಸೂಲಿ ಮಾಡಬಹುದು. ವಿದೇಶದಲ್ಲಿ ನೆಲೆ ನಿಂತವರು ಸ್ವದೇಶದಲ್ಲಿ ಸ್ಥಿರಾಸ್ತಿಗಳನ್ನು ಖರೀದಿ ಮಾಡಬಹುದು. ಸದ್ಯ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆಯಲ್ಲಿರುವ ಹಿರಿಯ ಅಧಿಕಾರಿಗಳು ಎಚ್ಚರವಾಗಿರಿ. ನಿಮ್ಮ ಮೇಲೆ ದೂರುಗಳು ಬರಬಹುದು. ಯುವಕರು   ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳದಿರುವುದು ಉತ್ತಮ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಆದಾಯ ಸ್ವಲ್ಪ ಕಡಿಮೆಯಾಗಿ ಖರ್ಚುಗಳಿಗೆ ಕಡಿವಾಣ ಹಾಕಬೇಕಾದ ಸಂದರ್ಭವಿದೆ. ಹೊಸ ಆದಾಯದ ಮೂಲಗಳತ್ತ ಗಮನ ಹರಿಸುವಿರಿ. ನೀರಾವರಿ ಭೂಮಿಯನ್ನು ಹೊಂದುವ ಯೋಗವಿದೆ. ದೀನ ದಲಿತರ ಸೇವೆ ಮಾಡುವ ಸಂಸ್ಥೆಗಳಿಗೆ ಪ್ರಚಾರಕ್ಕಾಗಿ ಹೋಗುವಿರಿ. ಹೊಸದಾಗಿ ಚಿನ್ನಾಭರಣಗಳ ವ್ಯಾಪಾರ ಆರಂಭಿಸುವವರು ಈಗ ಆರಂಭಿಸಬಹುದು. ಸರ್ಕಾರದ ಕಡೆಯಿಂದ ಬರಬೇಕಾದ ಧನಸಹಾಯ ಅನಾಯಾಸವಾಗಿ ಬರುತ್ತದೆ. ಲೆಕ್ಕಪತ್ರ ಪರೀಕ್ಷಕರಿಗೆ ಉತ್ತಮ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ನ್ಯಾಯಾಲಯದಲ್ಲಿ ದಾವೆಗಳಲ್ಲಿ ಪ್ರಗತಿಯನ್ನು ಕಾಣಬಹುದು. ಸ್ತ್ರೀಯರು ನಡೆಸುವ ವ್ಯವಹಾರಗಳಲ್ಲಿ ಸಾಕಷ್ಟು ಲಾಭ ಕಾಣಬಹುದು. ಸಂಗಾತಿಯ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.