ಗುರುವಾರ , ಅಕ್ಟೋಬರ್ 6, 2022
22 °C

ವಾರ ಭವಿಷ್ಯ: 4-9-2022ರಿಂದ 10-9-2022ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ ರಾಶಿ ( ಅಶ್ವಿನಿ ಭರಣಿ ಕೃತಿಕ 1)

ಸದಾಕಾಲ ಪಕ್ಕದಲ್ಲೇ ಇರುವ ಶತ್ರುಗಳ ಬಗ್ಗೆ ಹೆಚ್ಚು ಎಚ್ಚರ ವಹಿಸಿರಿ. ಗುಪ್ತಚರ ದಳದಲ್ಲಿ ಕೆಲಸ ಮಾಡುವವರಿಗೆ ಹೆಚ್ಚು ಕಾರ್ಯಭಾರಗಳು ಇರುತ್ತವೆ. ಕೆಲವು ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕೆಲವು ತ್ಯಾಗಗಳನ್ನು ಮಾಡಬೇಕಾದೀತು. ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಸರಿಯಾದ ಲೆಕ್ಕಪತ್ರಗಳನ್ನು ಇಟ್ಟುಕೊಳ್ಳುವುದು ಉತ್ತಮ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕೆಲವು ಪ್ರಮುಖ ವ್ಯಕ್ತಿಗಳನ್ನು ಭೇಟಿಮಾಡಿ ಅವರಿಂದ ಕೆಲಸಕಾರ್ಯಗಳನ್ನು ಮಾಡಿಸಿಕೊಳ್ಳುವಿರಿ. ಮನೆಗೆ ವಿದೇಶಗಳಿಂದ ಬಂಧುಗಳ ಆಗಮನ ಆಗಬಹುದು. ಭೂ ವ್ಯವಹಾರ ಮಾಡುವವರಿಗೆ ಹೆಚ್ಚಿನ ಆದಾಯವಿರುತ್ತದೆ. ಆಸ್ತಿ ಮಾರಾಟದಿಂದ ಹೆಚ್ಚು ಹಣ ಸಂಪಾದನೆಯಾಗುತ್ತದೆ.  ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ.

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಕುಸ್ತಿಪಟುಗಳಿಗೆ ಹೆಚ್ಚು ಬೇಡಿಕೆ ಬರುತ್ತದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಲಾಭ ಇರುತ್ತದೆ. ಕುಟುಂಬ ವ್ಯವಹಾರದಲ್ಲಿರುವ ಸಂಬಂಧಿಕರು ಮೋಸ ಮಾಡುವ ಸಾಧ್ಯತೆಗಳಿವೆ, ಎಚ್ಚರವಹಿಸಿರಿ. ಸೋದರರೊಂದಿಗೆ ಇದ್ದ ಮನಃಸ್ತಾಪ ದೂರವಾಗುವ ಸಾಧ್ಯತೆ ಇದೆ. ತೀವ್ರ ಯಾತನೆ ಕೊಡುತ್ತಿದ್ದ ಕಾಯಿಲೆಗಳು ಈಗ ಕಡಿಮೆಯಾಗುವ ಸಾಧ್ಯತೆ ಇದೆ. ನೀರಿನೊಂದಿಗೆ ಕೆಲಸ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ನಿಮ್ಮ ಕೆಲವೊಂದು ನಿರ್ಧಾರಗಳು ಹಿರಿಯರ ಕೋಪಕ್ಕೆ ಕಾರಣವಾಗಬಹುದು. ಆದರೆ ಸಮಾಧಾನವಾಗಿ ವಿವರಿಸಿದಲ್ಲಿ ಸುಮ್ಮನಾಗುವರು. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚು ಯಶಸ್ಸನ್ನು ಪಡೆಯಬಹುದು. ನಿಮ್ಮ ವ್ಯಾಪಾರ ವ್ಯವಹಾರಗಳ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ಕೊಡುವಿರಿ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಬುದ್ಧಿವಂತಿಕೆಯಿಂದ ಶತ್ರುನಿಗ್ರಹ ಮಾಡಿಕೊಳ್ಳಲು ದಾರಿ ಹುಡುಕುವಿರಿ. ಆಟೊಮೊಬೈಲ್ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಸಿದ್ಧಪಡಿಸಿದ ವಸ್ತ್ರಗಳ ವ್ಯಾಪಾರಿಗಳಿಗೆ ಹೆಚ್ಚು ಧನ ಆದಾಯವಿರುತ್ತದೆ. ಹಣದ ಒಳಹರಿವು ಅಗತ್ಯಕ್ಕಿಂತ ಹೆಚ್ಚು ಬರಬಹುದು. ಕುಟುಂಬದ ದಾಖಲೆಗಳನ್ನು ಈಗ ಸರಿಪಡಿಸಿಕೊಳ್ಳಬಹುದು. ಸ್ಥಿರಾಸ್ತಿಗಳ ವ್ಯಾಪಾರ ವ್ಯವಹಾರಗಳಲ್ಲಿ ಮೇಲುಗೈ ಸಾಧಿಸುವಿರಿ. ಧಾರ್ಮಿಕ ಕೆಲಸಗಳಿಗೆ ದೇಣಿಗೆ ನೀಡುವಿರಿ. ಆಯುಧಗಳ ಜೊತೆ ಕೆಲಸ ಮಾಡುವವರು ಎಚ್ಚರವಹಿಸಿರಿ. ಪ್ರೇಮಿಗಳ ನಡುವೆ ಕಾವೇರಿದ ಮಾತು ಆಗಬಹುದು. ಕೃಷಿ ಭೂಮಿಯನ್ನು ವಿಸ್ತರಣೆ ಮಾಡುವ ಯೋಗವಿದೆ. ವೃತ್ತಿಯಲ್ಲಿದ್ದ ಕೆಲವು ಸಂಕಷ್ಟಗಳು ನಿವಾರಣೆಯಾಗುತ್ತವೆ. ಆಧುನಿಕ ಭಾಷಾ ತರಬೇತಿದಾರರಿಗೆ ಬೇಡಿಕೆ ಹೆಚ್ಚುತ್ತದೆ.

ಕಟಕ ರಾಶಿ ( ಪುನರ್ವಸು 4 ಪುಷ್ಯ ಆಶ್ಲೇಷ)

ಅತ್ತೆ-ಸೊಸೆಯರ ಸಂಬಂಧಗಳಲ್ಲಿ ಕಾವೇರಿದ ವಾತಾವರಣ ಬರಬಹುದು. ಬಹಳ ದಿನಗಳಿಂದ ನಡೆಯುತ್ತಿದ್ದ ಭೂ ವ್ಯವಹಾರ ಪೂರ್ಣಗೊಂಡು ಸಂಪೂರ್ಣ ಹಣ ಮತ್ತು ದಾಖಲೆ ನಿಮ್ಮ ಕೈ ಸೇರುತ್ತದೆ. ಅಡುಗೆ ಕೆಲಸ ಮಾಡುವವರಿಗೆ ಹೆಚ್ಚಿನ ಕೆಲಸ ದೊರೆಯುವ ಸಂದರ್ಭವಿದೆ. ನಿಮ್ಮ ವಿರೋಧಿಗಳು ನಿಮ್ಮೊಂದಿಗೆ ರಾಜಿಯಾಗಲು ಈಗ ಸಿದ್ಧರಾಗಿ ಬರುವರು. ನಿಮ್ಮ ದೈನಂದಿನ ಯಾಂತ್ರಿಕ ಬದುಕಿನಿಂದ ಅಲ್ಪವಿರಾಮ ಪಡೆದು ಕುಟುಂಬದವರೊಂದಿಗೆ ಕಾಲ ಕಳೆಯುವಿರಿ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡುವುದು ಅನಿವಾರ್ಯವಾಗುವುದು. ಹಣದ ಒಳಹರಿವು ಉತ್ತಮವಾಗಿರುತ್ತದೆ. ಹಿರಿಯ ಅಧಿಕಾರಿಗಳಿಗೆ ಅಧಿಕಾರದಿಂದ ಹೆಚ್ಚಿನ ಗೌರವ ಸಿಗುತ್ತದೆ. ವಿದೇಶದಲ್ಲಿ ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗ ದೊರೆಯುವ ಎಲ್ಲ ಲಕ್ಷಣಗಳಿವೆ.

ಸಿಂಹ ರಾಶಿ ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ಹಲವು ಯೋಜನಾ ಕೆಲಸಗಳಲ್ಲಿ ಮುಂದಾಳತ್ವವಹಿಸಿ ಸಮಸ್ಯೆಗಳನ್ನು ದೂರ ಮಾಡುವಿರಿ. ವ್ಯಾವಹಾರಿಕವಾಗಿ ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸಾಕಷ್ಟು ಸಮಯ ಮೀಸಲಿಡುವಿರಿ. ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಕಷ್ಟು ಆಸಕ್ತಿ ತೋರುವಿರಿ. ಸಂಗೀತಗಾರರಿಗೆ ಅವರ ಗುರಿಯನ್ನು ತಲುಪಲು ಪೂರಕವಾದ ವಾತಾವರಣ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಆಸಕ್ತಿ ಕಡಿಮೆಯಾಗಬಹುದು. ನಿಮ್ಮ ಉದ್ಯೋಗ ಸ್ಥಳದಲ್ಲಿ ಹೆಚ್ಚು ವಾದವಿವಾದಗಳಿಗೆ ಅವಕಾಶ ಕೊಡದಿರುವುದು ಒಳ್ಳೆಯದು. ಲೇಖಕರು ಮಂಡಿಸುವ ಉತ್ತಮ ಪ್ರಬಂಧಗಳಿಗೆ ಪುರಸ್ಕಾರ ದೊರೆಯುವ ಸಾಧ್ಯತೆ ಇದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಮುನ್ನಡೆ ಇರುತ್ತದೆ.

ಕನ್ಯಾ ರಾಶಿ ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಈ ವಾರ ಬಹಳ ಬುದ್ಧಿವಂತಿಕೆಯಿಂದ ನಡೆಯುವಿರಿ. ಒಟ್ಟಿನ ವ್ಯವಹಾರದಲ್ಲಿ ಹೆಚ್ಚು ಆದಾಯ ಬರುತ್ತದೆ. ಹೆಚ್ಚಿನ ಜವಾಬ್ದಾರಿಗಳನ್ನು ನಿರ್ವಹಿಸಲು ತಯಾರಾಗಿರಿ. ರಫ್ತು ವ್ಯವಹಾರ ಮಾಡುವವರಿಗೆ ಸ್ವಲ್ಪ ಅಡೆತಡೆಗಳು ಬರಬಹುದು. ಪ್ರೀತಿ ಪಾತ್ರರೊಂದಿಗೆ ಇಂದಿನ ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ಚರ್ಚೆ ಮಾಡುವಿರಿ. ನಿಮ್ಮ ಹಿರಿಯರ ಸಲಹೆಗಳು ಬಹಳ ಅತ್ಯಮೂಲ್ಯವಾಗಿರುತ್ತವೆ. ನಿಮ್ಮ ಆರೋಗ್ಯಕ್ಕಾಗಿ ಹೆಚ್ಚು ಹಣ ಖರ್ಚು ಮಾಡುವಿರಿ. ಕೆಲಸಗಾರರಲ್ಲಿ ಒಮ್ಮತ ಮೂಡಿಸಲು ಇಲ್ಲದ ಕನಸುಗಳನ್ನು ಬಿತ್ತುವಿರಿ. ಕೃಷಿಕರು ಒಲ್ಲದ ಮನಸ್ಸಿನಿಂದ ಕೃಷಿ ಮಾಡುವ ಸಾಧ್ಯತೆ ಇರುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅವರ ಶ್ರಮಕ್ಕೆ ತಕ್ಕ ಫಲ ದೊರೆಯದೆ ಬೇಸರವಾಗಬಹುದು. ಸಾಂಪ್ರದಾಯಿಕ ತಳಿಗಳ ಬೀಜಗಳನ್ನು ಉತ್ಪಾದನೆ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ.

ತುಲಾ ರಾಶಿ ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ವ್ಯಂಗ್ಯಚಿತ್ರ ಕಲಾವಿದರುಗಳಿಗೆ ಹೆಚ್ಚು ಬೇಡಿಕೆ ಬರುವ ಸಾಧ್ಯತೆ ಇದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಕೃಷಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚುತ್ತದೆ, ತನ್ಮೂಲಕ ಹೆಚ್ಚು ಸಂಪಾದನೆಯಾಗುತ್ತದೆ. ನಿಮ್ಮ ಮಕ್ಕಳ ನಡವಳಿಕೆ ಬೇಸರ ತರಿಸುತ್ತದೆ. ವಿದ್ಯಾರ್ಥಿಗಳಿಗೆ ಅಲ್ಪಯಶಸ್ಸಿನ ಕಾಲವಾಗಿರುತ್ತದೆ. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚಿನ ಮುನ್ನಡೆ ಇರುತ್ತದೆ. ಬೆಂಕಿಯೊಂದಿಗೆ ಕೆಲಸ ಮಾಡುವವರು ಎಚ್ಚರವಹಿಸಲೇಬೇಕು. ಉದ್ಯೋಗ ಸ್ಥಳದಲ್ಲಿ ಇದ್ದ ಬಿಗುವಿನ ವಾತಾವರಣ ದೂರವಾಗುತ್ತದೆ. ಒಡವೆಗಳನ್ನು ಖರೀದಿ ಮಾಡುವಾಗ ಎಚ್ಚರವಿರಲಿ ಮೋಸ ಹೋಗುವ ಸಾಧ್ಯತೆ ಇದೆ. ಮಾತಿನ ಚತುರತೆಯಿಂದ ಜನರನ್ನು ಮರುಳು ಮಾಡುವಿರಿ. ಇಲ್ಲದ ಕನಸನ್ನು ಅವರಲ್ಲಿ ಬಿತ್ತಿ ನಿಮ್ಮ ಕೆಲಸ ಸಾಧಿಸಿಕೊಳ್ಳುವಿರಿ. 

ವೃಶ್ಚಿಕ ರಾಶಿ ( ವಿಶಾಖಾ 4  ಅನುರಾಧ ಜೇಷ್ಠ)  

ನಿರ್ಮಾಣ ಕಾರ್ಯದಲ್ಲಿ ತೊಡಗಿರುವವರಿಗೆ ಆಶಿಸುತ್ತಿದ್ದ ಸಾಲ ಸೌಲಭ್ಯಗಳು ದೊರೆಯುತ್ತವೆ. ಹಳೆಯ ಸಾಲಗಳನ್ನು ಈಗ ತೀರಿಸಿ ಋಣಮುಕ್ತರಾಗುವಿರಿ. ಕೆಲವೊಂದು ಗುಂಪು ಚಟುವಟಿಕೆಗಳಲ್ಲಿ ನಿಮ್ಮ ಮುಂದಾಳತ್ವ ಇರುತ್ತದೆ. ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮನಸ್ಸಿರುತ್ತದೆ. ಮಿತ್ರರ ಹಾಗೂ ಬಂಧುಗಳ ನಡುವೆ ಹೊಂದಾಣಿಕೆ ಮಾಡಿಕೊಳ್ಳುವುದು ನಿಮಗೆ ಅನುಕೂಲ. ಹಾಲು ಉತ್ಪಾದಕರ ಆದಾಯ ಹೆಚ್ಚುತ್ತದೆ. ಶತ್ರುಗಳನ್ನು ಸದೆಬಡಿಯುವಲ್ಲಿ ಯಶಸ್ವಿಯಾಗುವಿರಿ. ಕೃಷಿಕರಿಗೆ ಬೇಕಾದ ಅನುಕೂಲ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸನ್ನು ಕಾಣುವ ಸಂದರ್ಭ. ಪಿತ್ರಾರ್ಜಿತ ಆಸ್ತಿ ಒದಗುವ ಸಾಧ್ಯತೆ ಇದೆ. ಅನಿರೀಕ್ಷಿತವಾಗಿ ಉತ್ತಮ ಉದ್ಯೋಗ ದೊರೆಯುವ ಸಾಧ್ಯತೆ ಇದೆ.

ಧನಸ್ಸು ರಾಶಿ ( ಮೂಲ ಪೂರ್ವಾಷಾಢ ಉತ್ತರಾಷಾಢ 1)

ವ್ಯಾಪಾರ-ವ್ಯವಹಾರದಲ್ಲಿ ಇರುವವರು ಸಾಕಷ್ಟು ಪೈಪೋಟಿಯನ್ನು ಎದುರಿಸಬೇಕಾದೀತು. ಸತತ ಪ್ರಯತ್ನದಲ್ಲಿ ಜಯ ನಿಮ್ಮದಾಗುವುದು. ದಾನ ಮಾಡುವ ಮನಸ್ಸು ಹೆಚ್ಚಾಗುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಕೆಲವೊಂದು ಆರೋಗ್ಯ ಸಮಸ್ಯೆಗಳಿಂದ ಗುಣಮುಖರಾಗಬಹುದು. ನಿಮ್ಮ ಕೆಲವು ವಿಚಾರಗಳನ್ನು ಯಾರಲ್ಲೂ  ಹೇಳಿಕೊಳ್ಳದಿರುವುದು ಉತ್ತಮ. ಮಕ್ಕಳಿಗೆ ವಿದೇಶಕ್ಕೆ ಹೋಗುವ ಯೋಗ ಇರುತ್ತದೆ. ಸಂಗಾತಿಗೆ ಹುಡುಕುತ್ತಿದ್ದ ಕೆಲಸ ಈಗ ದೊರೆಯುತ್ತದೆ. ವ್ಯತ್ಯಾಸವಾಗಿದ್ದ ದಾಖಲೆಗಳನ್ನು ಈಗ ಸರಿಪಡಿಸಿಕೊಳ್ಳಬಹುದು. ಶತ್ರುಗಳ  ತಂತ್ರಗಳನ್ನು ತಿಳಿದು ನೀವೇ ಅವರ ಮೇಲೆ ಮುಗಿಬೀಳುವಿರಿ. ಆಯುಧ ಮಾರಾಟಗಾರರಿಗೆ ಕಾನೂನು ತೊಡಕು ಎದುರಾಗಬಹುದು.

ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  

ಕಬ್ಬಿಣದ ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಿರುತ್ತದೆ. ಧನಾದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಧಾರ್ಮಿಕ ಕೆಲಸಕಾರ್ಯಗಳಲ್ಲಿ ಹೆಚ್ಚು ಆಸಕ್ತಿಯನ್ನು ಹೊಂದುವಿರಿ. ಕೃಷಿಕರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ನಿಮ್ಮ ಕಠಿಣ ನಿರ್ಧಾರಗಳಿಂದ ಹಿಡಿದ ಕೆಲಸವನ್ನು ಸಾಧಿಸುವಿರಿ. ಉಸಿರಾಟದ ಸಮಸ್ಯೆ ಕಾಡಬಹುದು. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ಆಡಳಿತಾಧಿಕಾರಿಗಳು ಸೂಕ್ತ ವ್ಯಕ್ತಿಗಳನ್ನು ಅವರ ಕೈಕೆಳಗೆ ನೇಮಿಸಿಕೊಳ್ಳುವುದು ಬಹಳ ಉತ್ತಮ. ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹೆಚ್ಚಿನ ಏಕಾಗ್ರತೆಯನ್ನು ವಹಿಸುವುದು ಒಳ್ಳೆಯದು. ಮುತ್ತುಗಳ ವ್ಯಾಪಾರ ಮಾಡುವವರಿಗೆ ವ್ಯವಹಾರ ವಿಸ್ತರಣೆಯ ಯೋಗವಿದೆ.

ಕುಂಭ ರಾಶಿ ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ರೈತರಿಗೆ ಅವರ ಶ್ರಮಕ್ಕೆ ತಕ್ಕ ಫಲ ದೊರೆತು ಸಂತೋಷವಾಗುತ್ತದೆ. ಜಮೀನು ಕೊಡು-ಕೊಳ್ಳುವಿಕೆ ಮಾಡುವವರಿಗೆ ಹೆಚ್ಚಿನ ಆದಾಯ ಇರುತ್ತದೆ. ಪಶುಸಂಗೋಪನೆ ಮಾಡುವವರಿಗೆ ಉತ್ತಮ ಆದಾಯ ಬರುತ್ತದೆ. ಶೀತ ಸಂಬಂಧಿ  ಕಾಯಿಲೆಗಳಿರುವವರು ಉಪೇಕ್ಷೆ ಮಾಡಬೇಡಿ. ಚಿಕಿತ್ಸೆಗೆ ಹೋಗುವುದು ಬಹಳ ಉತ್ತಮ. ಮನೆಯ ವಿಸ್ತರಣೆಯ ವಿಚಾರವಾಗಿ ಉತ್ತಮ ಆಲೋಚನೆಗಳು ಗರಿಗೆದರುತ್ತವೆ. ವೃತ್ತಿಯಲ್ಲಿರುವ ಸಣ್ಣಪುಟ್ಟ ತೊಡಕುಗಳನ್ನು ಸಮಾಧಾನದಿಂದ ಕುಳಿತು ಬಗೆಹರಿಸಿಕೊಳ್ಳಿರಿ. ಸಾಂಸ್ಕೃತಿಕ ಸಮಾರಂಭವೊಂದರಲ್ಲಿ ಭಾಗವಹಿಸುವ ಅವಕಾಶಗಳು ದೊರೆಯುತ್ತವೆ. ಕಾಫಿ, ಟೀ ಮುಂತಾದ ಪಾನೀಯಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಆದಾಯ ಬರುವ ಸಾಧ್ಯತೆ ಇದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.

ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ತಾಯಿಯ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿ ಗೆಲುವಿನ ನಗೆ ಬೀರುವರು. ನಿಮ್ಮ ಭವಿಷ್ಯದ ಭದ್ರತೆಗಾಗಿ ಹಣ ಕೂಡಿಡುವಿರಿ. ನಿಮ್ಮ ಆಸೆಯಂತೆ ವಸ್ತ್ರಗಳನ್ನು ಕೊಳ್ಳುವ ಯೋಗವಿದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡು ಸಂತೋಷಪಡುವರು. ಜಾನಪದ ಸಂಗೀತಗಾರರಿಗೆ ಹೆಚ್ಚಿನ ಪ್ರಾಧಾನ್ಯತೆ ದೊರೆಯುವ ಸಾಧ್ಯತೆ ಇದೆ. ಹೊರದೇಶದಲ್ಲಿ ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಔಷಧ ಅನ್ವೇಷಣೆಯನ್ನು ಮಾಡುವ ವೃತ್ತಿಯಲ್ಲಿ ಇರುವವರಿಗೆ ಉತ್ತಮ ಮಾರ್ಗದರ್ಶನ ದೊರೆಯುತ್ತದೆ. ನೀವು ಅವಮಾನಿಸಿದವರಿಂದ ನಿಮಗೆ ಸಹಾಯ ದೊರೆಯುತ್ತದೆ. ಹಣದ ಒಳಹರಿವು ಮಂದ ಗತಿಯಲ್ಲಿ ಇರುತ್ತದೆ. ಸ್ವಂತ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಇರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.