ಸೋಮವಾರ, ಜನವರಿ 17, 2022
21 °C

ವಾರ ಭವಿಷ್ಯ: 2-01-2022 ರಿಂದ 8-01-2022ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ವೃತ್ತಿರಂಗದಲ್ಲಿ ಅಧಿಕ ಒತ್ತಡದಿಂದಾಗಿ ಉದ್ವೇಗಕ್ಕೆ ಒಳಗಾಗುವಿರಿ. ದಾಂಪತ್ಯದಲ್ಲಿ ಅನಗತ್ಯ ವಿವಾದಗಳು ಮೂಡಬಹುದು. ನೌಕರಿಯಲ್ಲಿ ಉನ್ನತ ಸ್ಥಾನ ಅಥವಾ ಆಶಿಸಿದ ಸ್ಥಾನಕ್ಕೆ ವರ್ಗಾವಣೆಯನ್ನು ಪಡೆಯಬಹುದು. ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ದಾರಿ ಸುಗಮವಾಗುತ್ತದೆ. ವಿವಾಹಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಮಾಡುತ್ತಿರುವವರಿಗೆ ಶುಭ ಸಮಾಚಾರಗಳಿರುತ್ತವೆ. ವದಂತಿಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಆಪಾದನೆಗಳಿಂದ ಮುಕ್ತರಾಗುವ ಅವಕಾಶವಿರುತ್ತದೆ. ನಿಮ್ಮ ಇಚ್ಛೆಗೆ ತಕ್ಕಂತೆ ಸ್ವಾವಲಂಬಿ ಕಾರ್ಯಗಳಲ್ಲಿ ತೊಡಗಿ ಸಂತಸಪಡುವಿರಿ ಹಾಗೂ ಗುರಿ ಸಾಧನೆಯಲ್ಲಿ ಪ್ರಗತಿ ಕಾಣುವಿರಿ. ಕಣ್ಣಿನ ತೊಂದರೆ ಇರುವವರು ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ.

*
ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ತಾಳ್ಮೆ ಮತ್ತು ಸಮಾಧಾನ ಚಿತ್ತದಿಂದ ವ್ಯವಹರಿಸುವುದು ಬಹಳ ಒಳ್ಳೆಯದು. ವಿದೇಶಿ ವ್ಯಾಪಾರ ವ್ಯವಹಾರಗಳನ್ನು ಮಾಡುವವರ ವ್ಯವಹಾರ ವಿಸ್ತರಣೆಯಾಗುತ್ತದೆ. ಆಸ್ತಿ ಚಿಕಿತ್ಸಕರಿಗೆ ಹಾಗೂ ಮೂಳೆ ವೈದ್ಯರಿಗೆ ಹೆಚ್ಚಿನ ಬೇಡಿಕೆ ಬಂದು ಸಂಪಾದನೆ ವೃದ್ಧಿಸುತ್ತದೆ. ಹಣದ ಒಳಹರಿವು ಸಾಮಾನ್ಯ ಮಟ್ಟದಲ್ಲಿರುತ್ತದೆ. ಅನಗತ್ಯ ಖರ್ಚುಗಳು ತಲೆದೋರಬಹುದು. ಆಹಾರದ ವ್ಯತ್ಯಾಸದಿಂದ ಸ್ವಲ್ಪ ಅಜೀರ್ಣ ತಲೆದೋರಬಹುದು. ಹಿರಿಯರಿಂದ ಕೊಂಚ ಸಂಪತ್ತಿನ ಬಳುವಳಿ ಸಿಗಬಹುದು. ಪ್ರೀತಿ ಪ್ರೇಮದ ವಿಚಾರಗಳಲ್ಲಿ ವಿರಸ ಬರುವ ಸಾಧ್ಯತೆಗಳಿವೆ. ಕಳೆದು  ಹೋಗಿದ್ದ ಅಮೂಲ್ಯ ವಸ್ತುಗಳು ವಾರಾಂತ್ಯದಲ್ಲಿ ಸಿಗುವ ಸಾಧ್ಯತೆಗಳಿವೆ. ಮನೆಪಾಠ ಮಾಡುವ ಉಪಾಧ್ಯಾಯರಿಗೆ ಸ್ವಲ್ಪ ಏಳಿಗೆ ಇರುತ್ತದೆ.

*
ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3) 
ವಾಹನ ಖರೀದಿಯ ಅವಕಾಶಗಳು ಕಂಡುಬರುತ್ತಿವೆ. ಸ್ವಯಂ ಉದ್ಯೋಗವನ್ನು ಆರಂಭಿಸಬೇಕೆಂದು ಇರುವವರು ಈಗ ಆರಂಭಮಾಡಬಹುದು. ಗುಡಿ ಕೈಗಾರಿಕೆ ಮಾಡುವವರಿಗೆ ಬೇಡಿಕೆ ಬಂದು ಹೆಚ್ಚು ವ್ಯವಹಾರಗಳಾಗುತ್ತವೆ. ಬಹಳ ಹಿಂದೆ ಕೊಟ್ಟಿದ್ದ ಸಾಲ ಹಂತ ಹಂತವಾಗಿ ವಾಪಸ್ಸು ಬರುವ ಸಾಧ್ಯತೆಗಳಿವೆ. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ನಿಮಗೆ ಯಶಸ್ಸು ಇರುತ್ತದೆ. ಕೋರ್ಟ್‌ ಕಚೇರಿಯ ವ್ಯವಹಾರಗಳು ಮಂದಗತಿಯಲ್ಲಿ ಇರುತ್ತವೆ. ನಿಮ್ಮ ನೈತಿಕ ಬಲದಿಂದ ಬಂಧುಗಳಲ್ಲಿ ಒಮ್ಮತ ಮೂಡುವಂತೆ ಮಾಡುವಿರಿ. ನಿಮ್ಮ ವಿರುದ್ಧ ಪಿತೂರಿ ಮಾಡುತ್ತಿರುವವರ ಸುಳಿವು ನಿಮಗೆ ಸಿಗುತ್ತದೆ. ಆಮದು-ರಫ್ತು ಮಾಡುವವರಿಗೆ ಅಲ್ಪಕಾಲ ಹಿನ್ನಡೆ ಇರುತ್ತದೆ. ವೃತ್ತಿಯಲ್ಲಿ ಸ್ವಲ್ಪ ಏಳಿಗೆಯನ್ನು ಕಾಣಬಹುದು.

*
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ದೂರ ಪ್ರಯಾಣದಿಂದ ಆಗಬೇಕಿದ್ದ ಕೆಲಸಗಳು ಈಗ ಸುಗಮವಾಗಿ ಆಗುತ್ತವೆ. ನಿಮ್ಮ ವ್ಯವಹಾರಗಳ ಬಗ್ಗೆ  ಸರಿಯಾಗಿ ಮೇಲ್ವಿಚಾರಣೆ ಮಾಡುವುದು ಬಹಳ ಮುಖ್ಯ. ಹಿರಿಯರೊಂದಿಗೆ ಹೆಚ್ಚಿನ ವಾದ-ವಿವಾದಗಳು ನಿಮಗೆ ಹಿನ್ನಡೆಯನ್ನು ತರುತ್ತವೆ. ನಿಮ್ಮ ಹುಡುಗಾಟದ ನಡವಳಿಕೆ ನಿಮ್ಮನ್ನು ಅಪಹಾಸ್ಯಕ್ಕೆ ಗುರಿ ಮಾಡಬಹುದು. ಮಹಿಳೆಯರಿಗೆ ಧಾರ್ಮಿಕ ಕೆಲಸಗಳಲ್ಲಿ ಅತೀವ ಆಸಕ್ತಿ ಮೂಡುತ್ತದೆ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಹೆಚ್ಚಿನ ಪರಿಶ್ರಮ ಪಡಬೇಕು. ಬೆಲೆಬಾಳುವ ವಸ್ತುಗಳು ಮರೆಯಾಗಿ ಮಿತ್ರರೊಡನೆ ಮನಸ್ತಾಪ ತರಬಹುದು. ಕಲಾವಿದರುಗಳಿಗೆ ಅಭಿಮಾನಿಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಪ್ರವಾಸ ಸಂದರ್ಭಗಳಲ್ಲಿ ನೀರಿನ ಹತ್ತಿರ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

*
ಸಿಂಹ ರಾಶಿ( ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 
ಮಕ್ಕಳ ವಿದ್ಯಾಭ್ಯಾಸದ ಪ್ರಗತಿ ಉತ್ತಮವಾಗಿರುತ್ತದೆ. ಆದಾಯಕ್ಕೆ ಮೀರಿದ ಖರ್ಚು ತಲೆದೋರುವ ಸಾಧ್ಯತೆಗಳಿವೆ. ಆದ್ದರಿಂದ ಹಣದ ನಿರ್ವಹಣೆ ಸರಿಯಾಗಿರಲಿ. ಭೂ ವಿವಾದಗಳು ನಿಮಗೆ ಮುತ್ತಿಕೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಸರಿಯಾಗಿ ತಿಳಿದು ವ್ಯವಹರಿಸಿರಿ. ಅರ್ಥಪೂರ್ಣ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ ವಿಚಾರವಿನಿಮಯವನ್ನು ಮಾಡಿ ಸಂತಸ ಪಡೆಯುವಿರಿ. ಪ್ರಮುಖ ಯೋಜನೆಗಳನ್ನು ಆರಂಭ ಮಾಡುವ ಮುನ್ನ ಪರಿಣಿತ ವ್ಯಕ್ತಿಗಳೊಡನೆ ಸೂಕ್ತ ಸಮಾಲೋಚನೆ ಮಾಡುವುದು ಅತ್ಯವಶ್ಯಕ. ಕೆಲವು ಕೆಲಸಗಳು ಮಧ್ಯವರ್ತಿಗಳಿಂದ ಈಡೇರುವ ಸಾಧ್ಯತೆ ಇದೆ. ಅಂತಹ ಕೆಲಸಗಳಲ್ಲಿ ಮಧ್ಯವರ್ತಿಗಳನ್ನು ಬಳಸಿಕೊಳ್ಳಿರಿ. ಗಂಟಲು ಮೂಗಿಗೆ ಸಂಬಂಧಪಟ್ಟ ವ್ಯಾಧಿಗಳು ನಿಮ್ಮನ್ನು ಕಾಡಬಹುದು. ಚಿಕಿತ್ಸೆ ಪಡೆದಲ್ಲಿ ಆರಾಮವಾಗುತ್ತದೆ.

*
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಆರ್ಥಿಕ ಅನುಕೂಲ ಸ್ವಲ್ಪಮಟ್ಟಿಗೆ ಉತ್ತಮವಾಗಿರುತ್ತದೆ. ಭೂಮಿಯ ಅಭಿವೃದ್ಧಿ ಕೆಲಸಗಳನ್ನು ಮಾಡುವವರಿಗೆ ಸಾಕಷ್ಟು ಮುನ್ನಡೆ ಇರುತ್ತದೆ. ಸಾರ್ವಜನಿಕ ಕೆಲಸಗಳನ್ನು ಮಾಡುವಾಗ ಅಪವಾದ ಬರುವ ಸಾಧ್ಯತೆಗಳಿವೆ.  ಎಚ್ಚರದಿಂದ ಇರಿ. ನಿಮ್ಮ ಆದಾಯದಷ್ಟೇ ಖರ್ಚು ಇರುವುದರಿಂದ ಹಣದ ನಿರ್ವಹಣೆಯನ್ನು ಸರಿಯಾಗಿ ಮಾಡಿರಿ. ಈಗಿರುವ ಪಾಲುದಾರಿಕೆಯ ವ್ಯವಹಾರಗಳನ್ನು ಅತಿಯಾಗಿ ಪರೀಕ್ಷಿಸಲು ಹೋಗದಿರುವುದು ಒಳ್ಳೆಯದು. ಕುಟುಂಬದಲ್ಲಿ ಮತ್ತು ವ್ಯವಹಾರದಲ್ಲಿ ಸರಿಯಾದ ಸಮತೋಲನವನ್ನು ಕಾಯ್ದುಕೊಳ್ಳುವುದು ಉತ್ತಮ. ಆಹಾರ ವ್ಯತ್ಯಾಸದಿಂದ ಆರೋಗ್ಯ ತಪ್ಪಬಹುದು. ವಿದೇಶದಲ್ಲಿ ಉದ್ಯೋಗದಲ್ಲಿರುವವರಿಗೆ ಅನಿರೀಕ್ಷಿತ ತಿರುವುಗಳು ಬರಬಹುದು. ಮಕ್ಕಳ ವಿಷಯದಲ್ಲಿ ಅಭಿವೃದ್ಧಿಯನ್ನು ಕಾಣಬಹುದು.

*
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನಿಮ್ಮ ಹಿಂಬಾಲಕರು ನಿಮಗೆ ಶತ್ರುಗಳಾಗಬಹುದು. ನಿಮ್ಮ ಒರಟು ಮಾತಿನಿಂದ ಕೆಲವು ಸಂಬಂಧಗಳು ಕಡಿಮೆಯಾಗಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸ್ವಲ್ಪ ನಿರುತ್ಸಾಹವನ್ನು ಸಹ ಕಾಣಬಹುದು. ಬೆನ್ನು ನೋವು ಅಥವಾ ಮೂಳೆ ನೋವು ಕಾಣಿಸಬಹುದು. ಹಿರಿಯರ ಮಾತಿಗೆ ಮನ್ನಣೆ ನೀಡುವುದರಿಂದ ಬರಲಿರುವ ಅವಘಡ ತಪ್ಪುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಮುನ್ನಡೆ ಇರುತ್ತದೆ. ಕುಟುಂಬದಲ್ಲಿನ ವ್ಯತ್ಯಾಸಗಳು ಸರಿಹೋಗುವ ಸಾಧ್ಯತೆ ಕಾಣುತ್ತಿದೆ. ಸರ್ಕಾರಿ ಕಚೇರಿಗಳ ಕೆಲಸಗಳು ಸುಗಮವಾಗಿ ಆಗುತ್ತವೆ. ಆದರೆ ಸರ್ಕಾರದಿಂದ ಬರಬೇಕಾಗಿದ್ದ ಹಣ ಹಂತಹಂತವಾಗಿ ಬರುತ್ತದೆ. ನಿಮ್ಮ ವ್ಯವಹಾರ ವಿಸ್ತರಣೆಯ ನಿಮಿತ್ತ ತಿರುಗಾಟ ಆಗಬಹುದು.

*
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ) 
ನಿಮ್ಮ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಕಾಣಬಹುದು. ಉದ್ಯೋಗಾಂಕ್ಷಿಗಳಿಗೆ ಹೊಸ ಉದ್ಯೋಗದ ಕಾರಣ ದೂರದೂರಿಗೆ ಹೋಗಬೇಕಾದ ಸಂದರ್ಭವಿದೆ. ಧನ ಆದಾಯವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಒಡಹುಟ್ಟಿದವರಿಂದ ನಿಮಗೆ ಸಾಕಷ್ಟು ಸಹಾಯ ಸಿಗುವ ಸಂದರ್ಭವಿದೆ. ನಿಮ್ಮ ಸಂಸಾರದಲ್ಲಿ ಹೊಸಸಂತೋಷ ಮೂಡುತ್ತದೆ. ಕಬ್ಬಿಣದ ಉಪವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ಅವರ ವ್ಯವಹಾರದಲ್ಲಿ ಅಭಿವೃದ್ಧಿ ಇರುತ್ತದೆ. ಹಿತ್ತಾಳೆಯ ನಾನಾ ದೇವರ ಮೂರ್ತಿಗಳನ್ನು ತಯಾರಿಸುವವರಿಗೆ ಹೆಚ್ಚಿನ ಬೇಡಿಕೆ ಹೆಚ್ಚಾಗುತ್ತದೆ. ಹೊಸ ಆಸ್ತಿಯನ್ನು ಕೊಳ್ಳುವ ಯೋಗ ಇದೆ. ವಿವಾಹಿತ ಹೆಣ್ಣುಮಕ್ಕಳು ದೂರದಲ್ಲಿರುವ ತಮ್ಮ ಸಂಗಾತಿಯನ್ನು ಸೇರಿಕೊಳ್ಳಲು ಕಾಲ ಪಕ್ವವಾಗಿದೆ.

*
ಧನಸ್ಸು ರಾಶಿ ( ಮೂಲ ಪೂರ್ವಾಷಾಢ ಉತ್ತರಾಷಾಢ 1)
ನಿರೀಕ್ಷಿತ ಕಾರ್ಯಗಳಲ್ಲಿ ಪ್ರಗತಿಯನ್ನು ಕಂಡು ಸಂತಸಪಡುವಿರಿ. ವಿದೇಶದಲ್ಲಿ ವಿದ್ಯೆ ಮುಗಿಸಿ ಉದ್ಯೋಗ ಹುಡುಕುತ್ತಿರುವವರಿಗೆ ಶುಭಸಮಾಚಾರವಿರುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಸ್ತ್ರೀ ವರ್ಗದವರಿಗೆ ಬಹಳಷ್ಟು ಸಂತೋಷಕರ ವಾತಾವರಣವಿರುತ್ತದೆ. ನಿಮ್ಮ ಸಂಗಾತಿಯ ಆದಾಯದಲ್ಲಿ ಸ್ವಲ್ಪ  ಏರಿಕೆಯನ್ನು ಕಾಣಬಹುದು. ಬಂಧು ಬಾಂಧವರೊಡನೆ ಸಂತೋಷ ಕೂಟಗಳಲ್ಲಿ ಭಾಗವಹಿಸುವ ಯೋಗವಿದೆ. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಸಾಮಾನ್ಯ ಫಲಿತಾಂಶವಿರುತ್ತದೆ. ಬೇರೆಯವರ ಸಲಹೆಯಿಂದಾಗಿ ಅಪಕೀರ್ತಿ ಹೊಂದುವ ಸಾಧ್ಯತೆ ಇದೆ. ರಾಜಿಯಾಗದ ಮನಸ್ಥಿತಿಯಿಂದ ನೀವು ಬಂಧುಗಳನ್ನು ಕಳೆದುಕೊಳ್ಳಬಹುದು. ವ್ಯವಹಾರದಲ್ಲಿ ನಿಮ್ಮ ಪಾಲು ನಿಮಗೆ ದೊರಕುತ್ತದೆ.

*
ಮಕರ ರಾಶಿ ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  
ಆರ್ಥಿಕ ಪರಿಸ್ಥಿತಿಯಲ್ಲಿ ಪ್ರಗತಿಯನ್ನು ಕಾಣಬಹುದು. ನಿಮ್ಮ ಶತ್ರುಗಳು ಯಾರೆಂದು ಗೊತ್ತಾಗಿ ಅವರ ಮೇಲೆ ಕ್ರಮಕೈಗೊಳ್ಳುವ ಅವಕಾಶ ಒದಗಿಬರುತ್ತದೆ. ನಿಮ್ಮ ವ್ಯವಹಾರಗಳು ವಿಸ್ತರಣೆ ಆಗುವ ಲಕ್ಷಣಗಳಿವೆ. ವಿದೇಶಿ ಭಾಷಾ ಕಲಿಕೆಯನ್ನು ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರಗತಿ ಇರುತ್ತದೆ. ಭೂ ವ್ಯವಹಾರಗಳನ್ನು ಮಾಡುವ ಕಮಿಷನ್ ಏಜೆಂಟ್‌ಗಳಿಗೆ ಉತ್ತಮ ವ್ಯವಹಾರವಾಗಿ ಆದಾಯ ಹೆಚ್ಚುತ್ತದೆ. ಸರ್ಕಾರಿ ಕಚೇರಿಯ ಕೆಲಸಗಳಲ್ಲಿ ಸ್ವಲ್ಪ  ಹಿನ್ನಡೆಯನ್ನು ಕಾಣಬಹುದು.

*
ಕುಂಭ ರಾಶಿ ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಹಿಂದೆ ನೀವು ನಿಮ್ಮ ವ್ಯವಹಾರದಲ್ಲಿ ಕೈಗೊಂಡ ನಿರ್ಣಯಗಳು ಈಗ ಉತ್ತಮ ಫಲವನ್ನು ಕೊಡುತ್ತವೆ. ಆರ್ಥಿಕ ಸ್ಥಿತಿಯು ಸಮತೋಲನವಾಗಿರುತ್ತದೆ. ಹೊಸ ವಾಹನವನ್ನು ಕೊಳ್ಳುವ ಯೋಗವಿದೆ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳವಿರುತ್ತದೆ. ಕೃಷಿ ಸಂಬಂಧಿತ ಯಂತ್ರೋಪಕರಣಗಳನ್ನು ತಯಾರಿಸುವವರಿಗೆ ಬೇಡಿಕೆ ಹೆಚ್ಚುತ್ತದೆ. ರಾಜಕೀಯ ರಂಗದಲ್ಲಿ ಇರುವವರಿಗೆ ಪ್ರಾಮುಖ್ಯತೆಯ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ಇರುತ್ತದೆ. ಯುವಕರು ಕಚೇರಿಯ ವ್ಯವಹಾರಗಳಲ್ಲಿ ಸಾಕಷ್ಟು ಗಂಭೀರವಾಗಿ ವರ್ತಿಸದಿದ್ದರೆ ಪಶ್ಚಾತ್ತಾಪಪಡುವ ಸಂದರ್ಭವಿದೆ. ಸರ್ಕಾರಿ ಕೆಲಸಗಳಲ್ಲಿ ಸಾಕಷ್ಟು ಮುನ್ನಡೆಯನ್ನು ಕಾಣಬಹುದು. 

*
ಮೀನ ರಾಶಿ ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಖಾದ್ಯತೈಲಗಳನ್ನು ಮಾರಾಟ ಮಾಡುವವರ ವ್ಯಾಪಾರ ಹೆಚ್ಚಾಗಿ ಲಾಭವೂ ಹೆಚ್ಚಾಗುತ್ತದೆ. ನಿಮ್ಮ ಒಡಹುಟ್ಟಿದವರಿಗೆ ವರ್ತಮಾನದ ವಿಷಯಗಳನ್ನು ಅವಲೋಕಿಸಿ ಸಹಾಯ ಮಾಡುವುದು ಒಳ್ಳೆಯದು. ಆರ್ಥಿಕ ಸ್ಥಿತಿಯು ಹೇಳಿಕೊಳ್ಳುವಂತೆ ಇರುವುದಿಲ್ಲ. ಸ್ವಂತ ಆರೋಗ್ಯದಲ್ಲಿ ವ್ಯತ್ಯಯವನ್ನು ಕಾಣಬಹುದು. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರ ವ್ಯವಹಾರ ವೃದ್ಧಿಸುತ್ತದೆ. ಹೈನುಗಾರಿಕೆಯನ್ನು ಮಾಡುತ್ತಿರುವವರಲ್ಲಿ ಸಾಕಷ್ಟು ಏಳಿಗೆಯನ್ನು ಕಾಣಬಹುದು. ಗಣಿ ವ್ಯವಹಾರಗಳನ್ನು ನಡೆಸುತ್ತಿರುವವರಿಗೆ ಇದ್ದ ಕಾನೂನು ಸಂಕಷ್ಟಗಳು ದೂರವಾಗುತ್ತವೆ. ಲೋಹದ ಅಲಂಕಾರಿಕ ವಸ್ತುಗಳನ್ನು ತಯಾರಿಸುವವರ ಆದಾಯ ಹೆಚ್ಚುತ್ತದೆ. ಕೈತೋಟಗಳನ್ನು ಅಭಿವೃದ್ಧಿಪಡಿಸುವವರಿಗೆ ಬೇಡಿಕೆ ಬರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.