ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆಳ–ಅಗಲ | ಇಳೆಗೆ ತಂಪೆರೆದ ಮಳೆ: ರಾಜ್ಯದಲ್ಲಿ ಶೇ 26ರಷ್ಟು ಅಧಿಕ ಮಳೆ

Published : 10 ಜುಲೈ 2022, 18:55 IST
ಫಾಲೋ ಮಾಡಿ
Comments

ರಾಜ್ಯದಲ್ಲಿ ಶೇ 26ರಷ್ಟು ಅಧಿಕ ಮಳೆ

* 2022ರ ಜುಲೈ 10ರವರೆಗೆ ಸುರಿದ ಮಳೆಯ ಪ್ರಮಾಣವನ್ನು ಗಮನಿಸಿದರೆ, ವಾಡಿಕೆಗಿಂತ ಸರಾಸರಿ ಶೇ 26ರಷ್ಟು ಹೆಚ್ಚು ಮಳೆ ಸುರಿದಿದೆ.ರಾಜ್ಯದಲ್ಲಿ ಜುಲೈ 10ರವರೆಗೆ 276.7 ಮಿಲಿಮೀಟರ್ ಸರಾಸರಿ ವಾಡಿಕೆ ಮಳೆಯಾಗುತ್ತದೆ. ಈ ಬಾರಿ ಸರಾಸರಿ 349.4 ಮಿಲಿಮೀಟರ್ ಮಳೆಯಾಗಿದೆ

*ಶಿವಮೊಗ್ಗ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 8ರಷ್ಟು ಹಾಗೂ ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 10ರಷ್ಟು ಕಡಿಮೆ ಮಳೆಯಾಗಿದೆ. ಆದರೆ, ಗದಗದಲ್ಲಿ ಶೇ 9, ಹಾವೇರಿಯಲ್ಲಿ ಶೇ 5 ಮತ್ತು ರಾಯಚೂರು ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ 6ರಷ್ಟು ಹೆಚ್ಚು ಮಳೆಯಾಗಿದೆ

*ಮಂಡ್ಯ (ಶೇ 148), ಕೋಲಾರ (ಶೇ 127), ಬೆಂಗಳೂರು ಗ್ರಾಮಾಂತರ (ಶೇ 165), ಬೆಂಗಳೂರು ನಗರ (ಶೇ 135), ಚಿಕ್ಕಬಳ್ಳಾಪುರ (ಶೇ 141) ಜಿಲ್ಲೆಗಳಲ್ಲಿ ಈ ಬಾರಿ ಬಿದ್ದ ಮಳೆಯು ವಾಡಿಕೆಗಿಂತ ದುಪ್ಪಟ್ಟು

*ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡದಲ್ಲಿ ವಾಡಿಕೆಗಿಂತ ಶೇ 25ರಷ್ಟು ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ 17ರಷ್ಟು ಅಧಿಕ ಮಳೆ ಸುರಿದಿದೆ

***

Caption
Caption

ಮಲೆನಾಡು, ಕರಾವಳಿ: ವಾಡಿಕೆಗಿಂತ ಕಡಿಮೆ ಮಳೆ

*ವಲಯವಾರು ವಾಡಿಕೆ ಮಳೆಯ ಜೊತೆ ಹೋಲಿಸಿದರೆ,ಈ ಬಾರಿ ದಕ್ಷಿಣ ಒಳನಾಡಿನಲ್ಲಿ ಮಾತ್ರ ಅಧಿಕ ಮಳೆ ಸುರಿದಿದೆ. ಈ ವಲಯದಲ್ಲಿ ಜೂನ್ ತಿಂಗಳಲ್ಲಿ 65.5 ಮಿಲಿಮೀಟರ್ ವಾಡಿಕೆ ಮಳೆಯಾಗುತ್ತದೆ. 2021ರ ಜೂನ್‌ನಲ್ಲಿ 76 ಮಿಲಿಮೀಟರ್ ಮಳೆಯಾಗಿತ್ತು. 2022ರ ಜೂನ್‌ನಲ್ಲಿ 120 ಮಿಲಿಮೀಟರ್ ಮಳೆಯಾಗಿದೆ

*ಉತ್ತರ ಒಳನಾಡು, ಮಲೆನಾಡು ಹಾಗೂ ಕರಾವಳಿಯಲ್ಲಿ ಕಳೆದ ವರ್ಷದ ಜೂನ್‌ ತಿಂಗಳಿಗೆ ಹೋಲಿಸಿದರೆ, ಈ ವರ್ಷದ ಜೂನ್‌ನಲ್ಲಿ ಬಿದ್ದ ಮಳೆಯ ಪ್ರಮಾಣ ಕಡಿಮೆ ಎಂದು ದತ್ತಾಂಶಗಳು ಹೇಳುತ್ತವೆ

*ಉತ್ತರ ಒಳನಾಡಿನಲ್ಲಿ ಪ್ರತೀ ವರ್ಷ ಜೂನ್‌ ತಿಂಗಳಲ್ಲಿ 103ಮಿಲಿಮೀಟರ್ ವಾಡಿಕೆ ಮಳೆಯಾಗುತ್ತದೆ. ಕಳೆದ ವರ್ಷ ಇಲ್ಲಿ 131 ಮಿಲಿಮೀಟರ್ ಮಳೆಯಾಗಿತ್ತು. ಆದರೆ ಈ ಜೂನ್‌ನಲ್ಲಿ 90 ಮಿಲಿಮೀಟರ್ ಮಾತ್ರ ಮಳೆಯಾಗಿದೆ

*ಮಲೆನಾಡು ವಲಯದಲ್ಲಿ ಜೂನ್ ತಿಂಗಳಲ್ಲಿ 363 ಮಿಲಿಮೀಟರ್ ವಾಡಿಕೆ ಮಳೆಯಿರುತ್ತದೆ. 2021ರಲ್ಲಿ 302 ಮಿಲಿಮೀಟರ್ ಮಳೆಯಾಗಿದ್ದರೆ, 2021ರಲ್ಲಿ ಅದು 189 ಮಿಲಿಮೀಟರ್‌ಗೆ ಇಳಿಕೆಯಾಗಿದೆ

*ಕರಾವಳಿ ಭಾಗದಲ್ಲಿ ಜೂನ್ ತಿಂಗಳಲ್ಲಿ 831.5 ವಾಡಿಕೆ ಮಳೆಯಿರುತ್ತದೆ. ಹಿಂದಿನ ವರ್ಷ ಇಲ್ಲಿ 733 ಮಿ.ಮೀ. ಮಳೆಯಾಗಿತ್ತು. ಆದರೆ ಈ ವರ್ಷ ಕೇವಲ 533 ಮಿ.ಮೀ. ಮಳೆಯಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT